Document

Gubbi: ಹರದಗೆರೆ ಗ್ರಾಮದ ಜನರ ನಿದ್ದೆ ಗೆಡಿಸಿದ್ದ ಚಿರತೆ ಸೆರೆ.!

JANATAA24 NEWS DESK 

 

 

Gubbi: ಹರದಗೆರೆ ಗ್ರಾಮದ ಜನರ ನಿದ್ದೆ ಗೆಡಿಸಿದ್ದ ಚಿರತೆ ಸೆರೆ.!

Gubbi: Leopard that had been disturbing the sleep of the people of Haradagere village has been captured!

ಗುಬ್ಬಿ: ತಾಲೂಕಿನ ನಿಟ್ಟೂರು ಹೋಬಳಿಯ ಹರದಗೆರೆ ಗ್ರಾಮದ ಬೋವಿ ಕಾಲೋನಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಇಟ್ಟಿದ್ದ ಬೋನಿಗೆ ಚಿರತೆ ಸೆರೆಸಿಕ್ಕಿದ್ದು ಹಲವು ದಿನಗಳಿಂದ ಈ ಭಾಗದ ಜನರ ನಿದ್ದೆ ಗೆಡಿಸಿದ್ದ ಚಿರತೆಯಿಂದ ಈ ಭಾಗದ ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ.

 

ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ದೊಡ್ಡಗುಣಿ ಅನುಭಾಗದ ತೀರ್ಥ ರಾಂಪುರ ಬೀಟ್ ನಲ್ಲಿ ಬರುವ ಹರದಗೆರೆ ಗ್ರಾಮದ ಬೋವಿ ಕಾಲೋನಿಯಲ್ಲಿ ಹಲವು ದಿನಗಳಿಂದ ಚಿರತೆ ಉಪಟಳ ಜಾಸ್ತಿಯಾಗಿ ಕಳೆದ ಒಂದು ತಿಂಗಳಲ್ಲಿ ಸುಮಾರು 7ಕುರಿ ಮತ್ತು ಮೇಕೆ ಗಳನ್ನು ಬಲಿ ಪಡೆಯುವ ಜೊತೆಗೆ ಈ ಭಾಗದ ಜನತೆಯನ್ನು ಭಯಭೀತರನ್ನಾಗಿ ಮಾಡಿತ್ತು.

 

ಆತಂಕಕ್ಕೆ ಒಳಗಾದ ಗ್ರಾಮಸ್ಥರು ಚಿರತೆ ಸೆರೆಗೆ ಅರಣ್ಯ ಇಲಾಖೆಗೆ ಪಟ್ಟು ಹಿಡಿದು ನಂತರ ಎಚ್ಚೆತ್ತ ಇಲಾಖೆ ಸಿಬ್ಬಂದಿಗಳು ಗೋವಿಂದಪ್ಪ ಎಂಬುವರ ಜಮೀನಿನಲ್ಲಿ ಬೋನು ಇಟ್ಟಿದ್ದು ಇಂದು 3 ವರ್ಷದ ಹೆಣ್ಣು ಚಿರತೆ ಬೋನಿಗೆ ಚಿರತೆ ಸೆರೆಸಿಕ್ಕಿದ್ದು ಗ್ರಾಮಸ್ಥರು ನಿಟ್ಟಿಸಿರು ಬಿಟ್ಟಿದ್ದಾರೆ.

 

ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಾದ ನರಸಿಂಹಮೂರ್ತಿ ಸೇರಿದಂತೆ ಶಶಿಕುಮಾರ್, ಶಂಕರ್, ಷಣ್ಮುಖ, ಶಿವು, ಸಂತೋಷ್, ಮತ್ತು ಪ್ರಜ್ವಲ್ ಸ್ಥಳದಲ್ಲಿದರು.

 

ವರದಿ :ಶ್ರೀಕಾಂತ್ ಗುಬ್ಬಿ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.


Document

Leave a Reply

Your email address will not be published. Required fields are marked *