Document

Gubbi: ಮಹನೀಯರ ಜಯಂತಿ ಒಂದು ಸಮುದಾಯಕ್ಕೆ ಸೀಮಿತವಾಗಬಾರದು– ಎಸ್ ಆರ್ ಶ್ರೀನಿವಾಸ್.

Janataa24 NEWS DESK 

 

Gubbi: ಮಹನೀಯರ ಜಯಂತಿ ಒಂದು ಸಮುದಾಯಕ್ಕೆ ಸೀಮಿತವಾಗಬಾರದು– ಎಸ್ ಆರ್ ಶ್ರೀನಿವಾಸ್.

Gubbi: ಮಹನೀಯರ ಜಯಂತಿ ಒಂದು ಸಮುದಾಯಕ್ಕೆ ಸೀಮಿತವಾಗಬಾರದು– ಎಸ್ ಆರ್ ಶ್ರೀನಿವಾಸ್.

ಗುಬ್ಬಿ : ಮಹನೀಯರ ಜಯಂತಿಯನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತ ಮಾಡಿಕೊಂಡು ವರ್ಷಕ್ಕೆ 15 ಜಯಂತಿಗಳ ಆಚರಣೆ ಮಾಡುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ಕಳವಳ ವ್ಯಕ್ತಪಡಿಸಿದರು.

 

ಬಿಗ್ ಬಾಸ್ ರಕ್ಷಿತಾ ಹೇಳಿಕೆ ವೈರಲ್.!

https://www.instagram.com/reel/DPbOlQvASyg/?igsh=azFucXp5ZjBvZzFk

 

ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮಹನೀಯರು ತಮ್ಮದೇ ಆದ ಕೊಡುಗೆ ನೀಡಿ ಹೋಗಿದ್ದು, ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕಿದ್ದೂ, ಸರ್ಕಾರವು ಮಹನೀಯರ ಜಯಂತಿಯ ಆಚರಿಸುವಮೂಲಕ ಅವರ ಮಾರ್ಗದರ್ಶನದಲ್ಲಿ ಮಹನೀಯರ ತತ್ವ ಸಿದ್ಧಾಂತವನ್ನು ಅಳವಡಿಸಿಕೊಂಡು ಸಮಾಜದಲ್ಲಿ ಜನರುಮೇಲೆ ಬರಲಿ ಎಂದು ಮಹನೀಯರ ಜಯಂತಿಯನ್ನು ಆಚರಿಸಲು ಮುಂದಾದರೆ,

 

 

ಕೇವಲ ಒಂದು ಸಮುದಾಯಕ್ಕೆ ಸೀಮಿತ ಮಾಡಿಕೊಂಡು ಮಹನೀಯರ ಜಯಂತಿ ಆಚರಿಸಲಾಗುತ್ತಿದೆ. ಈಗಾಗಲೇ ತಮಗೆ ಭರವಸೆ ಕೊಟ್ಟಂತೆ ತಾಲೂಕು ಆಡಳಿತ ವತಿಯಿಂದ 20 ಗುಂಟೆ ಜಾಗವನ್ನು ಗುರ್ತಿಸಿ ಪಾಣಿಯನ್ನು ಮಾಡಲಾಗಿದ್ದು, ಇದನ್ನು ಕಲ್ಯಾಣ ಮಂಟಪ ನಿರ್ಮಾಣ ಮಾಡಿ ಹಣ ಗಳುಹಿಸಲು ಬಳಸದೆ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಅನುಕೂಲ ಮಾಡುವ ದೃಷ್ಟಿಯನ್ನು ಇಟ್ಟುಕೊಂಡು ಹಾಸ್ಟೆಲ್ ನಿರ್ಮಾಣ ಮಾಡಿ ಬದುಕಿಗೆ ದಾರಿ ಮಾಡಿಕೊಡುವ ಕೆಲಸವನ್ನು ಮಾಡಿ.

 

ಹಿಂದೆ ಇದ್ದ ಸನ್ನಿವೇಶ ಹೀಗಿಲ್ಲ, ಈಗ ತಾವುಗಳೆಲ್ಲ ಆಗರ್ಭ ಶ್ರೀಮಂತರು ಆಗಿದ್ದು ಹಣದ ಅವಶ್ಯಕತೆ ತಮಗಿಲ್ಲ. ಹಾಗಾಗಿ ತಮ್ಮ ಸಮಾಜಕ್ಕೆ ನೀಡಿರುವ ಜಾಗವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.

 

ಪ.ಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಅಣ್ಣಪ್ಪ ಸ್ವಾಮಿ ಮಾತನಾಡಿ ಸಮಾಜದ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ನಿವೇಶವನ್ನು ಕೊಡಿಸುವಂತೆ ಶಾಸಕರ ಗಮನಕ್ಕೆ ತಂದ ಸಂದರ್ಭದಲ್ಲಿ ತಹಶೀಲ್ದಾರ್ ಅವರಿಗೆ ಜಾಗ ಗುರ್ತು ಮಾಡಿಕೊಡುವಂತೆ ಸೂಚಿಸಿದ ಹಿನ್ನೆಲೆ ತಹಶೀಲ್ದಾರ್ ಆರತಿ ಬಿ ಅವರು 20 ಗುಂಟೆ ಜಾಗವನ್ನು ಹುಡುಕಿ ಜಯಂತಿಯ ದಿನದಂದೇ ಪಾಣಿಯೊಂದಿಗೆ ಆಗಮಿಸಿ ಹಸ್ತಾಂತರವನ್ನು ಮಾಡಿದ್ದು, ಇದಕ್ಕೆ ತಹಶೀಲ್ದಾರ್ ಹಾಗೂ ಶಾಸಕರು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಗೆ ಸಮಾಜದ ವತಿಯಿಂದ ಅಭಿನಂದನೆಗಳು.

 

ಮುಂದಿನ ದಿನಗಳಲ್ಲಿ ಶಾಸಕರ ಅನುದಾನದಲ್ಲಿ ಸುಸಜ್ಜಿತ ವಿದ್ಯಾರ್ಥಿ ನಿಲಯವನ್ನು ನಿರ್ಮಾಣ ಮಾಡಿ ಒಳ್ಳೆಯ ವಿದ್ಯಾಭ್ಯಾಸವನ್ನು ಮಾಡಲು ಸಹಕಾರವನ್ನು ಸಮಾಜದ ವತಿಯಿಂದ ಮಾಡುವುದಾಗಿ ಭರವಸೆ ನೀಡಿದರು.

 

ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಸಮಾಜದ ಹಿರಿಯರಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು.

 

ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ಆರತಿ ಬಿ. ಪ.ಪಂ ಅಧ್ಯಕ್ಷೆ ಆಯಿಷಾ ತಾಸಿನ್, ಉಪಾಧ್ಯಕ್ಷೆ ಶ್ವೇತಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ, ಪ.ಪಂ ಮುಖ್ಯಾಧಿಕಾರಿ ಮಂಜುಳಾ ದೇವಿ, ವಾಲ್ಮೀಕಿ ಸಮುದಾಯದ ಅಧ್ಯಕ್ಷ ರಾಮಚಂದ್ರಪ್ಪ, ಗೌರವ ಅಧ್ಯಕ್ಷ ನರಸಿಂಹಮೂರ್ತಿ, ಪ.ಪಂ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು, ವಾಲ್ಮೀಕಿ ಸಮುದಾಯದ ಬಂಧುಗಳು, ಕಾರ್ಯಕರ್ತರು ಭಾಗವಹಿಸಿದ್ದರು.

 

ವರದಿ :ಶ್ರೀಕಾಂತ್ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://www.instagram.com/reel/DPbOlQvASyg/?igsh=azFucXp5ZjBvZzFk

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *