Document

Gubbi: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಯಾವುದೇ ಕಣ್ಣಿನ ಸಮಸ್ಯೆ ಇದ್ದರೂ ಉಚಿತ ತಪಾಸಣೆ.

JANATAA24 NEWS DESK 

 

 

Gubbi: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಯಾವುದೇ ಕಣ್ಣಿನ ಸಮಸ್ಯೆ ಇದ್ದರೂ ಉಚಿತ ತಪಾಸಣೆ.
Gubbi: Free eye check-up for government school students, regardless of any eye problem.
ಗುಬ್ಬಿ : ಮುಂದಿನ ಭವಿಷ್ಯವನ್ನು ಕಟ್ಟಿಕೊಳ್ಳುತ್ತಿರುವಂತಹ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕಣ್ಣಿನ ಯಾವುದೇ ಸಮಸ್ಯೆ ಇದ್ದರು ಅದನ್ನು ಉಚಿತವಾಗಿ ತಪಾಸಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಲಯನ್ಸ್ ಸಂಸ್ಥೆಯ ವಲಯ ಅಧ್ಯಕ್ಷರಾದ ವತ್ಸಲಾ ಗೌಡ ತಿಳಿಸಿದರು.

ಪಟ್ಟಣದ ಬಿ ಆರ್ ಸಿ ಆವರಣದಲ್ಲಿ ಲಯನ್ಸ್ ಕ್ಲಬ್ ಅಂತರಾಷ್ಟ್ರೀಯ ಜಿಲ್ಲೆ ವೈಷ್ಣವಿ ಲಯನ್ಸ್ ಫೌಂಡೇಶನ್ ಬೆಂಗಳೂರು ವತಿಯಿಂದ ಸರಕಾರಿ ಶಾಲಾ ಮಕ್ಕಳಿಗೆ ಸಂಚಾರಿ ಕಣ್ಣು ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿನ ಮಕ್ಕಳಿಗೆ ಯಾವುದೇ ರೀತಿಯ ಕಣ್ಣಿನ ಸಮಸ್ಯೆ ಇದ್ದರೂ ಕೂಡ ನಮ್ಮೊಟ್ಟಿಗೆ ಬಂದಿರುವಂತಹ ಸಂಸ್ಥೆಗಳ ಸಹಕಾರದೊಟ್ಟಿಗೆ ಉಚಿತವಾಗಿ ಎಲ್ಲಾ ರೀತಿಯ ಅನುಕೂಲವನ್ನು ಮಾಡಿಕೊಡುತ್ತಿದ್ದೇವೆ ಎಂದು ತಿಳಿಸಿದರು.

ಮಲ್ಟಿಪಲ್ ಕೌನ್ಸಿಲ್ ಚೇರ್ ಪರ್ಸನ್ ಎನ್ ಮೋಹನ್ ಕುಮಾರ್ ಮಾತನಾಡಿ ತುಮಕೂರು ಜಿಲ್ಲೆಯ 2.5 ಲಕ್ಷ ವಿದ್ಯಾರ್ಥಿಗಳಲ್ಲಿ ಈಗಾಗಲೇ ನಾವು ಎರಡು ಲಕ್ಷ ವಿದ್ಯಾರ್ಥಿಗಳಿಗೆ ಕಣ್ಣಿನ ತಪಾಸಣೆಯನ್ನು ಮಾಡಲಾಗಿದೆ ಇಂದು ಗುಬ್ಬಿ ತಾಲೂಕಿನಲ್ಲಿ ಆರಂಭವಾಗಿದ್ದು, ತಾಲೂಕಿನ ಎಲ್ಲಾ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಕಣ್ಣು ತಪಾಸಣೆ ಮಾಡುತ್ತೇವೆ. ಶಸ್ತ್ರಚಿಕಿತ್ಸೆ ಸೇರಿದಂತೆ ಎಲ್ಲಾ ರೀತಿಯ ಅನುಕೂಲವನ್ನು ಮಾಡುತ್ತೇವೆ ಎಂದು ತಿಳಿಸಿದರು.

ತಾಲೂಕು ಲಯನ್ಸ್ ಕ್ಲಬ್ ಅಧ್ಯಕ್ಷ ಕೆ ಎಂ ಎಫ್ ಕುಮಾರ್ ಮಾತನಾಡಿ ಲಯನ್ ಸಂಸ್ಥೆ ಹಾಗೂ ಇನ್ನಿತರ ಸಂಸ್ಥೆಗಳ ಒಡಗೂಡಿ ಸರ್ಕಾರಿ ಶಾಲಾ ಮಕ್ಕಳಿಗೆ ಇಂತಹ ವಿಶೇಷ ಸಹಕಾರ ಮಾಡುತ್ತಿರುವುದು ನಿಜವಾಗಿ ಅತ್ಯಂತ ಹೆಚ್ಚು ಖುಷಿ ನೀಡುತ್ತದೆ ಆರ್ಥಿಕವಾಗಿ ಹಿಂದುಳಿದಿರುವಂತಹ ಮಕ್ಕಳೇ ಸರ್ಕಾರಿ ಶಾಲೆಗಳಿಗೆ ಬರುವುದು ವೈದ್ಯರ ಬಳಿ ಹೋಗಿ ಆ ಮಕ್ಕಳನ್ನ ತೋರಿಸುವುದಕ್ಕೆ ಕೂಡ ಸಾಕಷ್ಟು ಪೋಷಕರಿಗೆ ಕಷ್ಟವಾಗಿದ್ದು ಇಂತಹ ಶಿಬಿರಗಳನ್ನ ಮಾಡುವುದರಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಅತ್ಯಂತ ಹೆಚ್ಚು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಕಣ್ಣಿನ ತಪಾಸಣೆ ಮಾಡಲು ವಾಹನದ ನೆರವನ್ನು ನೀಡಿದೆ.

ಇದೇ ಸಂದರ್ಭದಲ್ಲಿ ಪಿ ಎನ್ ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನ ಬ್ರಾಂಚ್ ಮ್ಯಾನೇಜರ್ ದಯಾನಂದ್ ಕೆಸಿ, ವೈದ್ಯರಾದ ಅನಿತಾ ಪ್ರಸಾದ್, ಡಾ ವಿನಿತ್,ಬಿ ಆರ್ ಸಿ ಮಧುಸೂದನ್ ಸೇರಿದಂತೆ ಗುಬ್ಬಿಯ ಲಯನ್ ಕ್ಲಬ್ ಅಶೋಕ್ ಕುಮಾರ್ ಸಾವಂತ್ ಶಿವಕುಮಾರ್, ವಿವೇಕಾನಂದ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.

 

ವರದಿ: ಶ್ರೀಕಾಂತ್ ಗುಬ್ಬಿ.


ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *