Janataa24 NEWS DESK
Gubbi: ತಿನ್ನುವ ಆಹಾರ ಕೊಡ ಅಪೌಷ್ಟಿಕತೆ ಗೆ ಕಾರಣವಾಗುತ್ತಿದೆ–ಎಸ್ ಆರ್ ಶ್ರೀನಿವಾಸ್ ಕಳವಳ.

ಗುಬ್ಬಿ : ಪ್ರಸ್ತುತ ದಿನಗಳಆಹಾರದಲ್ಲಿ ರಾಸಾಯನಿಕ ಅಂಶಗಳು ಅಧಿಕ ಗೊಳ್ಳುತ್ತಿದ್ದೂ ತಿನ್ನುವ ಆಹಾರ ಕೊಡ ಅಪೌಷ್ಟಿಕತೆ ಗೆ ಕಾರಣವಾಗುತ್ತಿದೆ ಎಂದು ಶಾಸಕ ಶ್ರೀನಿವಾಸ್ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಚೇಳೊರಿನ ಶ್ರೀ ಮರುಳಬಸವೇಶ್ವರ ಸಮುದಾಯ ಭವನದಲ್ಲಿ ಪೋಣ್ ಅಭಿಯಾನ ಮಾಸಾಚರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ನಮ್ಮ ಪೂರ್ವಜರ ಆಹಾರ ಪದ್ಧತಿಗೂ ಪ್ರಸ್ತುತ ಆಹಾರ ಪದ್ಧತಿಗೂ ಸಾಕಷ್ಟು ವ್ಯತ್ಯಾಸ ಕಂಡು ಬರುತ್ತಿದೆ.
ಸಾವಯುವ ಗೊಬ್ಬರದಲ್ಲಿ ಬೆಳೆಗಳನ್ನ ತರಕಾರಿ ಹಣ್ಣುಗಳನ್ನ ಬೆಳೆಯುತ್ತಿರುವಂತಹ ಸಂಖ್ಯೆಯು ಸಹ ಬಹಳಷ್ಟು ಕಡಿಮೆಯಾಗುತ್ತಿದ್ದು ಈ ಆಹಾರಗಳಿಂದ ಯಾವುದೇ ಗುಣಮಟ್ಟವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಸಾಕಷ್ಟು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಒಂದಲ್ಲ ಒಂದು ಸಮಸ್ಯೆಗಳು ಕಾಡುತ್ತಲೇ ಇವೆ ಸರ್ಕಾರ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುತ್ತಿದ್ದರು ಸಹ ಪೌಷ್ಟಿಕತೆಯ ಪ್ರಮಾಣ ಮಾತ್ರ ಕಡಿಮೆ ಆಗದೆ ಇರುವುದು ಬೇಸರ ತರುತ್ತಿದೆ ಎಂದು ತಿಳಿಸಿದರು.
ತಾಲೂಕು ಮುಖ್ಯ ವೈದ್ಯಾಧಿಕಾರಿ ಡಾ. ಬಿಂದು ಮಾಧವ ಮಾತನಾಡಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸಹ ಒಂದಲ್ಲ ಒಂದು ಅನಾರೋಗ್ಯ ಕಾಡುತ್ತಿದ್ದು ಆರೋಗ್ಯವೇ ಭಾಗ್ಯ ಎಂಬುದನ್ನೇ ನಾವು ಮರೆಯುವಂತಾಗಿದೆ ಪ್ರತಿಯೊಬ್ಬರಿಗೂ ಉತ್ತಮ ಗುಣಮಟ್ಟದ ಆಹಾರ ಸಿಗಬೇಕು ಮತ್ತು ಪೌಷ್ಟಿಕಾಂಶ ಭರಿತ ಆಹಾರ ಸೇವನೆಯನ್ನು ಮಾಡುವಂತಹ ಜಾಗೃತಿಯನ್ನು ಮೂಡಿಸಲೇಬೇಕಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತೆಯರು ವೈದ್ಯಾಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಸಾರ್ವಜನಿಕರು ಹಾಜರಿದ್ದರು.
ವರದಿ :ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.