JANATAA24 NEWS DESK
Gubbi: ರಸ್ತೆಗೆ ಜಾಗ ಕೇಳಿದ್ದಕ್ಕೆ ದಲಿತ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ.

ಗುಬ್ಬಿ: ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ವಿವಿಧ ಕಾನೂನುಗಳು ಜಾರಿಗೆ ಬಂದಿದ್ದರೂ, ಇಂತಹ ಘಟನೆಗಳು ಇನ್ನೂ ಮುಂದುವರಿಯುತ್ತಿರುವುದು ಆತಂಕಕಾರಿ. ತೋಟಕ್ಕೆ ಹೋಗಲು ರಸ್ತೆ ಕೇಳಿದ ಕಾರಣಕ್ಕೆ ದಲಿತ ಕುಟುಂಬದ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಬೆಣಚಿಗೆರೆ ಗ್ರಾಮದಲ್ಲಿ ನಡೆದಿದೆ.
ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಣಚಿಗೆರೆ ಗ್ರಾಮದ ನಾಗರಾಜು ಎಂಬವರು ಹಲ್ಲೆಗೆ ಒಳಗಾದವರಾಗಿದ್ದು, ಗ್ರಾಮದ ಲೋಕೇಶ್ ಮತ್ತು ಜ್ಯೋತಿ ಅವರು ತೋಟದ ಬಳಿ ಪೈಪ್‌ಲೈನ್ ಕಾಮಗಾರಿ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ನಾಗರಾಜು ಹಾಗೂ ಅವರ ಕುಟುಂಬಸ್ಥರು ಸರ್ಕಾರದ ರಸ್ತೆ ಒಂದು ಕಡೆ ಇದ್ದು, ಕಾಮಗಾರಿ ಮತ್ತೊಂದು ಕಡೆ ನಡೆಯುತ್ತಿದೆ ಎಂದು ಪ್ರಶ್ನಿಸಿ, ತೋಟಕ್ಕೆ ಹೋಗಲು ರಸ್ತೆ ಬಿಡುವಂತೆ ಕೇಳಿದ್ದಾರೆ.
ಈ ವೇಳೆ ಲೋಕೇಶ್ ಹಾಗೂ ಜ್ಯೋತಿ ಅವರು ರಸ್ತೆ ಬಿಡುವುದಿಲ್ಲ ಎಂದು ಹೇಳಿ, ಜಾತಿ ನಿಂದನೆ ಮಾಡಿ ಕಲ್ಲುಗಳಿಂದ ಹಲ್ಲೆ ನಡೆಸಿದರೆಂದು ಆರೋಪಿಸಲಾಗಿದೆ.
ನಾಗರಾಜು ಅವರು ಮಾತನಾಡಿ, ಈ ರಸ್ತೆಯನ್ನು ಅಧಿಕಾರಿಗಳು ಹಿಂದೆಯೇ ನಿಗದಿಪಡಿಸಿದ್ದರೂ, ಅದೇ ಜಾಗದಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಸಲಾಗುತ್ತಿದೆ. ನಾವು ಪ್ರಶ್ನಿಸಿದಾಗ ಕಡೇಕೋಡಿ ಗ್ರಾಮದ ಲಕ್ಕಣ್ಣ ಮತ್ತು ಪದ್ಮ ಅವರನ್ನು ಕರೆಸಿ ಗುಂಪು ದಾಳಿ ನಡೆಸಿದರು ಎಂದು ಆರೋಪಿಸಿದ್ದಾರೆ. ಈಗಾಗಲೇ ಶಸ್ತ್ರಚಿಕಿತ್ಸೆ ನಡೆದಿದ್ದ ಜಾಗದಲ್ಲೇ ಮತ್ತೆ ಹೊಡೆದಿದ್ದು, ಪ್ರಾಣ ಬೆದರಿಕೆ ಕೂಡ ಹಾಕಲಾಗಿದೆ ಎಂದು ತಿಳಿಸಿದ್ದಾರೆ.
ಕುಟುಂಬಸ್ಥರು ಮಾತನಾಡಿ, ಈ ಹಿಂದೆಯೂ ಲೋಕೇಶ್ ಕುಟುಂಬದಿಂದ ಹಲವು ಬಾರಿ ದೌರ್ಜನ್ಯ ನಡೆದಿದ್ದು, ಪೊಲೀಸರಿಗೆ ದೂರು ನೀಡಿದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಷಯ ತಿಳಿದು ಗುಬ್ಬಿ ಪೊಲೀಸರು, ಡಿ.ವೈ.ಎಸ್.ಪಿ ಶೇಖರ್ ಹಾಗೂ ವೃತ್ತ ನಿರೀಕ್ಷಕ ರಾಘವೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನಾಲ್ವರ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.