JANATAA24 NEWS DESK
Gubbi: ಹಸು ಮೇಯಿಸಲು ಹೋದ ವ್ಯಕ್ತಿಗೆ ವಿದ್ಯುತ್ ಸ್ಪರ್ಶ–ಸುಟ್ಟೇ ಹೋಯ್ತು ದೇಹ.

ಗುಬ್ಬಿ : ವಿದ್ಯುತ್ ಸ್ಪರ್ಶಿಸಿ ವಯೋವೃದ್ದ ಸಾವು. ಹಸು ಮೇಯಿಸಲು ಹೋದ ಸಮಯದಲ್ಲಿ ಘಟನೆ ನಡೆದಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಗುಬ್ಬಿ ತಾಲ್ಲೂಕಿನ ಸಿಎಸ್ ಪುರ(CS Pura) ಹೋಬಳಿ ಮಣಿಕುಪ್ಪೆ ಗ್ರಾಮದ ನರಸಯ್ಯ 60 ವರ್ಷ ವಯಸ್ಸು ವ್ಯಕ್ತಿ ಧನ ಕಾಯುವಾಗ ವಿದ್ಯುತ್ ತಂತಿ ತುಳಿದು ನೆಲಕ್ಕೆ ಬಿದ್ದಿದ್ದಾರೆ. ವಿದ್ಯುತ್ ಶಾಖದಿಂದ ವ್ಯಕ್ತಿಯ ದೇಹದ ಹಲವು ಭಾಗಗಳು ಸಂಪೂರ್ಣವಾಗಿ ಸುಟ್ಟು ಹೋಗಿರುತ್ತದೆ. ಸಂಜೆ ಆಗುತ್ತಿದ್ದಂತೆ ಧನಗಳು ಮನೆಯ ಹತ್ತಿರ ತಾವಾಗಿಯೇ ಬಂದಿದ್ದರಿಂದ ಮನೆಯವರು ಗಾಬರಿಯಾಗಿ ನರಸಯ್ಯ ರವರನ್ನು ಹುಡುಕಿ ಹೋದಾಗ ನರಸಯ್ಯನವರ ದೇಹವು ವಿದ್ಯುತ್ ಬೆಂಕಿಯಿಂದ ಊರಿಯುತ್ತಿರುವುದು ಕಣ್ಣಿಗೆ ಕಂಡಿರುತ್ತದೆ.
ನರಸಯ್ಯನವರ ದೇಹ ಉರಿಯುತ್ತಿರುವುದನ್ನು ನೋಡಿದ ಕುಟುಂಬಸ್ಥರಿಗೆ ಕ್ಷಣ ಕಾಲ ದಿಕ್ಕೇ ತೋಚದಾಗಿತ್ತು.
ಅಯ್ಯೋ ಎನ್ನುವಷ್ಟರಲ್ಲಿ ದೇಹವೇ ಸುಟ್ಟುಹೋಗಿತ್ತು ಕುಟುಂಬಸ್ಥರನ್ನು ದುಃಖ ಹೇಳತೀರದಾಗಿತ್ತು.
ಇಷ್ಟೆಲ್ಲಾ ಅವಘಡಕ್ಕೆ ಬೆಸ್ಕಾಂ(BESCOM) ಅಧಿಕಾರಿಗಳ ನಿರ್ಲಕ್ಷವೇ ನೇರ ಕಾರಣ ಎಂದು ಸ್ಥಳೀಯರು ಬೆಸ್ಕಾಂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದ್ದು ಮಾತ್ರ ಸತ್ಯ.
BESCOM ಅಧಿಕಾರಿಗಳ ಇಂತಹ ನಿರ್ಲಕ್ಷತನಕ್ಕೆ ಕ್ರಮ ಕೈಗೊಳ್ಳುವವರು ಯಾರು.?
ಇಡೀ ತುಮಕೂರು ಜಿಲ್ಲೆಯಲ್ಲಿ ಒಂದಿಲ್ಲೊಂದು ವಿದ್ಯುತ್ ಅವಘಡಗಳು ವರ್ಷಪೂರ್ತಿ ಸಂಭವಿಸುತ್ತಲೇ ಇರುತ್ತವೆ.
ಹೀಗೆ ರೈತರು,ಕಾರ್ಮಿಕರು,ಅಮಾಯಕರು, ಮುಗ್ಧರು ಪ್ರಾಣ ಕಳೆದುಕೊಳ್ಳುತ್ತಲೇ ಇರುತ್ತಾರೆ.
ಸಾಮಾನ್ಯರು ದೂರು ಕೊಟ್ಟರೆ ಬೆಸ್ಕಾಂ ಅಧಿಕಾರಿಗಳು ಆ ಕಡೆ ತಿರುಗಿಯೂ ಸಹ ನೋಡುವುದಿಲ್ಲ ಇನ್ನೆಷ್ಟು ದಿನ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ.?
ಸದ್ಯ ಈ ಪ್ರಕರಣವು ಸಿ ಎಸ್ ಪುರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶೇಖರ್ , ಪಿ ಎಸ್ ಐ ಧರ್ಮಾಂಜಿ. ಗುಬ್ಬಿ ವೃತ್ತ ನಿರೀಕ್ಷಕ ರಾಘವೇಂದ್ರ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವರದಿ: ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.