Fire Accident: Workshop, garage burnt down.

ಬಾಗಲಕೋಟೆ: ಬಾದಾಮಿಯಲ್ಲಿ ಆಕಸ್ಮಿಕ ಅಗ್ನಿ ಅವಘಡದಿಂದ ಸುಟ್ಟ ಮಳಿಗೆಗಳ ಸ್ಥಳಕ್ಕೆ ಕ್ಷೇತ್ರದಕೆಪಿಸಿಸಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಹೇಶ ಹೊಸಗೌಡರ ಅವರು ಭೇಟಿ ನೀಡಿ ಪರಿಹಾರ ಕೊಡಿಸುವುದಾಗಿ ಸಾಂತ್ವನ ಹೇಳಿದರು.ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ನಗರವನದ ಪಕ್ಕದ ಪೋಸ್ಟ್ ಆಫೀಸ್ ಹಿಂದುಗಡೆ ಇರುವ ಕಾಳಿಕಾ ವುಡ್ ವರ್ಕ್ ಶಾಪ್ ನಲ್ಲಿ ತಡರಾತ್ರಿ 1 ಗಂಟೆ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ತಗುಲಿದ ಬೆಂಕಿ ಇಡೀ ಕಾಳಿಕಾ ವುಡ್ ವರ್ಕ ಶಾಪ್ ತುಂಬಾ ಹರಡಿ ಪಕ್ಕದಲ್ಲಿ ಇರುವ ಸಲೀಮ್ ಗ್ಯಾರೇಜ್ ಹಾಗೂ ಸಂಗಮ ಗಾದಿ ವರ್ಕ ಶಾಪ್ ಸೇರಿ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ.
ಘಟನ ನಡೆದ ಸ್ಥಳಕ್ಕೆ ಭೇಟಿ ನೀಡಿದ ಕೆ ಪಿ ಸಿ ಸಿ ಹಿಂದುಳಿದ ವರ್ಗಗಳ ಕಾರ್ಯದರ್ಶಿ ಮಹೇಶ್.ಎಸ್. ಹೊಸಗೌಡ್ರ ಸ್ಥಳವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಪರ್ಕಿಸಿ ಪರಿಹಾರ ಕೊಡಿಸುವುದಾಗಿ ತಿಳಿಸಿದರು. ನೊಂದಿರುವ ಮಳಿಗೆಗಳ ಮಾಲೀಕರಾದ ಸಂತೋಷ್ ಬಡಿಗೇರ್, ಸಲೀಂ, ರಂಗಪ್ಪ ರೋಣದ, ಜಹಗೀರದಾರ ಇವರ ಅಂಗಡಿ ವಿದ್ಯುತ್ ಶಾರ್ಟ್ ಸರಕ್ಯೂಟ್ ಇಂದ ಸುಟ್ಟು ಹೋಗಿರುವ ಮಾಲೀಕರಿಗೆ ಸಮಾಧಾನ ಹೇಳಿ ಸಾಂತ್ವನ ಹೇಳಿದರು.
ವರದಿ:- ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://www.janataa24.com/pendrive-mp-prajwal-revannas-video-went-viral/
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en