Document

Dr.BR.Ambedkar: ಬಹುರೂಪಿ ಬಾಬಾ ಸಾಹೇಬ್ ಅಂಬೇಡ್ಕರ್.

JANATAA24 NEWS DESK 

 

 

Dr.BR.Ambedkar: ಬಹುರೂಪಿ ಬಾಬಾ ಸಾಹೇಬ್ ಅಂಬೇಡ್ಕರ್.

Dr.BR.Ambedkar: The multifaceted Baba Saheb Ambedkar.

 

ಮೈಸೂರು: ಸಮತೆ, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಕೇಂದ್ರವಾಗಿಟ್ಟುಕೊಂಡು “ಬಹುರೂಪಿ ಬಾಬಾಸಾಹೇಬ್

ಸಮತೆಯಡೆಗೆ ನಡಿಗೆ” ಎಂಬ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕೀರ್ಣವು ಜನವರಿ 17 ಮತ್ತು 18ರಂದು ಮೈಸೂರಿನ ರಂಗಾಯಣ ರಂಗಮಂದಿರದಲ್ಲಿ ಭವ್ಯವಾಗಿ ನಡೆಯಿತು.

ಅಂಬೇಡ್ಕರ್ ವಿಚಾರ ವೇದಿಕೆಯ ಆಶ್ರಯದಲ್ಲಿ ನಡೆದ ಈ ಸಂಕೀರ್ಣದಲ್ಲಿ ಸಲಹೆಗಾರರಾದ ಮಂಗಳೂರು ವಿಜಯ, ನಾಗರಾಜ್ ಪಿ., ರಂಗಸ್ವಾಮಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಪತ್ರಕರ್ತರು, ವಿಚಾರವಂತರು, ಅಂಬೇಡ್ಕರ್‌ವಾದಿಗಳು ಹಾಗೂ ಬೌದ್ಧ ಬಾಂಧವರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಸಿದ್ಧಾರ್ಥ ವರದರಾಜನ್, ಸಂಸ್ಥಾಪಕ ಸಂಪಾದಕರು, ದಿ ವೈರ್, ನವದೆಹಲಿ ಅವರು ನೆರವೇರಿಸಿ, ಇಂದಿನ ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಸವಾಲುಗಳು ಮತ್ತು ಅಂಬೇಡ್ಕರ್ ಚಿಂತನೆಯ ಪ್ರಸ್ತುತತೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮೊದಲ ಅಧಿವೇಶನದಲ್ಲಿ “ಜಾಗತಿಕ ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಸವಾಲುಗಳು” ವಿಷಯದ ಕುರಿತು ಪ್ರೊ. ರವಿ ಭಂಡಾರಿ (ಮಾನಸಗಂಗೋತ್ರಿ, ಮೈಸೂರು) ಮಾತನಾಡಿದರು. ಈ ಅಧಿವೇಶನದ ಅಧ್ಯಕ್ಷತೆಯನ್ನು ಕ್ರೈಸ್ಟ್ ವಿಶ್ವವಿದ್ಯಾಲಯದ ಎಂ. ಜೆ. ವಿನೋದ್ ವಹಿಸಿದ್ದರು.

ಮುಂದಿನ ಅಧಿವೇಶನಗಳಲ್ಲಿ ಡಾ. ಲಕ್ಷ್ಮಣ್ ಅವರು ಅಂಬೇಡ್ಕರ್ ಅವರ ಪರಿಕಲ್ಪನೆಯ ಪ್ರಜಾಪ್ರಭುತ್ವ, ಡಾ. ಬೇಕಾ ರಾಜ್ ಶ್ರೀನಿವಾಸ್ ಅವರು ಸಮಕಾಲೀನ ಭಾರತ ಮತ್ತು ಒಳಗೊಳ್ಳುವ ರಾಜಕಾರಣ, ಡಾ. ಅಶ್ವಿನಿ ಕೆ.ಪಿ. ಅವರು ಜಾಗತಿಕ ಮತ್ತು ಸ್ಥಳೀಯ ಸಾಮಾಜಿಕ ಅಸಮಾನತೆಗಳ ನಿರ್ಮೂಲನೆ, ಡಾ. ಎಚ್. ಬಿ. ವಾಸು ಅವರು ಸಂವಿಧಾನದ ಸಂಕೇತಾರ್ಥ ಕುರಿತು ವಿಶ್ಲೇಷಣೆ ನೀಡಿದರು.

ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು ಮತ್ತು ಅದರ ಅನುಷ್ಠಾನ ಕುರಿತು ಪ್ರೊ. ಕೆ. ಎಸ್. ಚರಣ್ ಮಾತನಾಡಿದರೆ, ಸ್ಥಳೀಯ ಸಮುದಾಯಗಳ ಸಾಂಸ್ಕೃತಿಕ ಪ್ರತಿರೋಧ ಕುರಿತು ಪ್ರೊ. ರಾಜೇಂದ್ರ ಚಿನ್ನಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಅಂಬೇಡ್ಕರ್ ಮತ್ತು ಆಧ್ಯಾತ್ಮಿಕ ವಿಮೋಚನೆ ವಿಷಯದಲ್ಲಿ ಭಂತೇ ಕಲ್ಡನ್ ಸರಾಜ ಭಿಕ್ಕು ಅವರು ಬೌದ್ಧ ಚಿಂತನೆಯ ಆಯಾಮವನ್ನು ವಿವರಿಸಿದರು.

ಈ ಅಧಿವೇಶನದ ಅಧ್ಯಕ್ಷತೆಯನ್ನು ಬೌದ್ಧ ವಿಜ್ಞಾನ ವಿದ್ವಾಂಸರಾದ ನಟರಾಜ್ ಬುಧಾನ್ (ತುಮಕೂರು) ವಹಿಸಿದ್ದರು. ಕೊನೆಯ ಅಧಿವೇಶನದಲ್ಲಿ ಅಂಬೇಡ್ಕರ್ ಅವರ ಪರಿಕಲ್ಪನೆಯ ಕಾರ್ಮಿಕ ಸುಧಾರಣೆಗಳು ಮತ್ತು ಚಳುವಳಿಗಳು ವಿಷಯದ ಕುರಿತು ಡಾ. ಆರ್. ಪ್ರತಿಭಾ (ಗಾರ್ಮೆಂಟ್ ಅಂಡ್ ಟೆಕ್ಸ್ಟೈಲ್ ವರ್ಕರ್ಸ್ ಯೂನಿಯನ್, ಬೆಂಗಳೂರು) ಮಾತನಾಡಿದರು.

ಒಟ್ಟಾರೆ, ಈ ವಿಚಾರ ಸಂಕೀರ್ಣವು ಅಂಬೇಡ್ಕರ್ ಅವರ ಬಹುಮುಖ ಚಿಂತನೆಗಳನ್ನು ಸಮಕಾಲೀನ ಸಮಾಜದ ಪ್ರಶ್ನೆಗಳೊಂದಿಗೆ ಜೋಡಿಸಿ, ಸಮತೆಯಡೆಗಿನ ನಡಿಗೆಯನ್ನು ಮತ್ತೊಮ್ಮೆ ದೃಢಪಡಿಸಿದ ಮಹತ್ವದ ವೇದಿಕೆಯಾಗಿತ್ತು.

ವರದಿ: ದೇವರಾಜ್ ಆರ್.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.


Document

Leave a Reply

Your email address will not be published. Required fields are marked *