Document

Hubballi :ಪಂಪ್‌ಸೆಟ್ ಮೂಲಕ ನೀರೆತ್ತದಂತೆ ಕೃಷಿಕರಿಗೆ ಡಿಸಿ ಗಂಭೀರ ಸೂಚನೆ.

Janataa24 NEWS DESK

Hubballi:ಪಂಪ್‌ಸೆಟ್ ಮೂಲಕ ನೀರೆತ್ತದಂತೆ ಕೃಷಿಕರಿಗೆ ಡಿಸಿ ಗಂಭೀರ ಸೂಚನೆ

Hubballi :ಪಂಪ್‌ಸೆಟ್ ಮೂಲಕ ನೀರೆತ್ತದಂತೆ ಕೃಷಿಕರಿಗೆ ಡಿಸಿ ಗಂಭೀರ ಸೂಚನೆ
ಜಿಲ್ಲಾಧಿಕಾರಿ ದಿವ್ಯ ಪ್ರಭು

ಹುಬ್ಬಳ್ಳಿ:  ನೀರಿನ ಅಭಾವ ಉಂಟಾಗುತ್ತಿದ್ದು ಹುಬ್ಬಳ್ಳಿ ನಗರಕ್ಕೆ ಬೇಕಾಗುವ ಕುಡಿಯುವ ನೀರು ಕಾಯ್ದಿರಿಸಬೇಕಾಗಿದೆ. ಮಳೆಗಾಲ ಪ್ರಾರಂಭವಾಗುವವರೆಗೂ ಜಲಾಶಯಗಳಲ್ಲಿ ನೀರಿನ ಮಟ್ಟ ಕಾಯ್ದಿರಿಸಬೇಕಾಗಿದೆ.

ಧಾರವಾಡ  ಜಿಲ್ಲೆಯಲ್ಲಿ ಕುಡಿಯುವ ನೀರಿನ (Drinking water) ತತ್ವಾರ ಹೆಚ್ಚಳವಾದ ಕಾರಣ ನೀರ ಸಾಗರ ಜಲಾಶಯದ ನೀರು ಪಂಪ್ ಮಾಡದಂತೆ ಸೂಚನೆ ನೀಡಲಾಗಿದೆ. ನೀರಸಾಗರದಿಂದ ಹಳೆ ಹುಬ್ಬಳ್ಳಿಯ 22 ವಾರ್ಡುಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದ್ದು, ಜಲಾಶಯದಿಂದ ಪ್ರತಿನಿತ್ಯ 25 ಎಂಎಲ್‌ಡಿ ನೀರು ಪೂರೈಕೆ ಮಾಡಲಾಗುತ್ತಿದೆ. ಬಿಸಿಲಿನ ಝಳಕ್ಕೆ ಮಳೆಯಿಲ್ಲದೇ ದಿನದಿಂದ ದಿನಕ್ಕೆ ನೀರಸಾಗರ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಈ ಕಾರಣ ಕೃಷಿಕರಿಗೆ ಮಹತ್ವದ ಸೂಚನೆ ನೀಡಲಾಗಿದೆ.

ಸದ್ಯ ನೀರಸಾಗರದಲ್ಲಿ 0.3 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಲಭ್ಯವಿರುವ 0.3 ಟಿಎಂಸಿ ನೀರನ್ನು ಹುಬ್ಬಳ್ಳಿ ನಗರಕ್ಕೆ ಬೇಕಾಗುವ ಕುಡಿಯುವ ನೀರಿಗಾಗಿ ಕಾಯ್ದಿರಿಸಬೇಕಾದ ಅಗತ್ಯತೆ ಇದೆ. ಮಳೆಗಾಲ ಪ್ರಾರಂಭವಾಗುವವರೆಗೂ ಜಲಾಶಯಗಳಲ್ಲಿ ನೀರಿನ ಮಟ್ಟ ಕಾಯ್ದಿರಿಸಬೇಕಾಗಿದೆ ಖಡಕ್ ಎಚ್ಚರಿಕೆ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಕುಡಿಯುವ ನೀರನ್ನು ಬೇರೆ ಉದ್ಧೇಶಗಳಿಗೆ ಬಳಸದಂತೆ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ನಿರ್ದೇಶನ ನೀಡಿದ್ದಾರೆ. ಗಂಭ್ಯಪೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಂಭ್ಯಪೂರ, ಹುಲಿಕಟ್ಟಿ, ಲಿಂಗನಕೊಪ್ಪ ಮತ್ತು ಬಸವನಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಸವನಕೊಪ್ಪ, ಕಳಸದಕೊಪ್ಪ, ನೀರಸಾಗರ ಮತ್ತು ಕನ್ಯಾಕೊಪ್ಪ ಗ್ರಾಮಗಳ ರೈತ(Farmer)ರಿಗೆ ಪಂಪ್ ಸೆಟ್ ಮೂಲಕ ನೀರೆತ್ತದಂತೆ ಸೂಚನೆ ನೀಡಲಾಗಿದೆ.ಒಂದು ವೇಳೆ ಮೋಟರ್ ಹಚ್ಚಿ ನೀರು ಪಂಪ್ ಮಾಡಿದಲ್ಲಿ ಕಾನೂನು ಕ್ರಮದ ಎಚ್ಚರಿಕೆಯನ್ನು ಸಹ ನೀಡಲಾಗಿದೆ

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

 

Kannada: ಕಡ್ಡಾಯ 60% ಕನ್ನಡ ಬಳಕೆ ಸರ್ಕಾರದ ಸುತ್ತೋಲೆ ಪಾಲಿಸದ ಸಂಸ್ಥೆಗಳನ್ನು ಮುಚ್ಚಬಾರದು – ಹೈ ಕೋರ್ಟ್

Document

Leave a Reply

Your email address will not be published. Required fields are marked *