Document

Bengaluru: ಸದನದಲ್ಲಿ ಸಿಲಿಂಡರ್ ಸದ್ದು– ಬಿಜೆಪಿಗರ ಕಾಲೆಳೆದ ಸಿದ್ದು.

JANATAA24 NEWS DESK 

Bengaluru: ಸದನದಲ್ಲಿ ಸಿಲಿಂಡರ್ ಸದ್ದು– ಬಿಜೆಪಿಗರ ಕಾಲೆಳೆದ ಸಿದ್ದು.

Bengaluru

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಗ್ಯಾಸ್ ಸಿಲಿಂಡರ್ ಕೊರತೆ ವಿಚಾರ ಇಂದು (ಮಾರ್ಚ್ 11) ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಸಿಲಿಂಡರ್ ಬೆಲೆ ಏರಿಕೆ ಮತ್ತು ಪೂರೈಕೆ ವ್ಯತ್ಯಯದ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ಸ್ತರದ ವಾಕ್ಸಮರ ನಡೆಯಿತು.

 

ಕುಣಿಗಲ್ ಶಾಸಕ ಡಾ. ರಂಗನಾಥ್ ಅವರು ಸಿಲಿಂಡರ್ ಕೊರತೆ ವಿಚಾರ ಪ್ರಸ್ತಾಪಿಸಿದಾಗ ಉತ್ತರಿಸಿದ ಆಹಾರ ಸಚಿವ ಕೆ.ಎಚ್. ಮುನಿಯಪ್ಪ, “ಈಗಷ್ಟೇ ಅಧಿಕಾರಿಗಳು ಮತ್ತು ತೈಲ ಕಂಪನಿಗಳ ಜೊತೆ ಸಭೆ ನಡೆಸಿ ಬಂದಿದ್ದೇನೆ. ರಾಜ್ಯದಲ್ಲಿ ಮನೆಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಗ್ರಾಹಕರು ಪ್ರತಿ 28 ದಿನಕ್ಕೊಮ್ಮೆ ಸಿಲಿಂಡರ್ ಬುಕ್ ಮಾಡಬಹುದು. ಆದರೆ ಕಮರ್ಷಿಯಲ್ (ವಾಣಿಜ್ಯ) ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ನಿಜ ಎಂದು ಸ್ಪಷ್ಟಪಡಿಸಿದರು.

 

 

ಸಚಿವರ ಉತ್ತರದ ಬೆನ್ನಲ್ಲೇ ಉಪಪ್ರಶ್ನೆ ಕೇಳಿದ ಶಾಸಕ ರಂಗನಾಥ್, “ಮಾರುಕಟ್ಟೆಯಲ್ಲಿ 900 ರೂ. ಇದ್ದ ಸಿಲಿಂಡರ್ ಬೆಲೆ ಈಗ 1,800 ರೂ.ಗೆ ಏರಿಕೆಯಾಗಿದೆ. ಇದಕ್ಕೆ ಮೋದಿ ಸರ್ಕಾರದ ದುರ್ಬಲ ವಿದೇಶಾಂಗ ನೀತಿಯೇ ಕಾರಣ’’ ಎಂದು ನೇರವಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಮಾತಿನಿಂದ ಕೆರಳಿದ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟಿಸತೊಡಗಿದ್ದರಿಂದ ಸದನದಲ್ಲಿ ಗದ್ದಲ ಉಂಟಾಯಿತು.

 

 

ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ವಿರುದ್ಧ ಹರಿಹಾಯ್ದರು. “75 ದಿನಗಳ ಕಾಲ ಏನೂ ಸಮಸ್ಯೆ ಇಲ್ಲ ಎಂದು ಕೇಂದ್ರ ಸಚಿವರೇ ಹೇಳಿದ್ದರು. ಆದರೆ ಮಾರ್ಚ್ 10 ರಂದು ಕೇಂದ್ರವೇ ಸುತ್ತೋಲೆ ಹೊರಡಿಸಿದೆ. ಈ ಗೊಂದಲಕ್ಕೆ ಮತ್ತು ಆತಂಕಕ್ಕೆ ಕೇಂದ್ರ ಸರ್ಕಾರವೇ ಕಾರಣ. ಇವತ್ತಿನ ಈ ಸ್ಥಿತಿಗೆ ಯಾರು ಕಾರಣ? ಜನರ ಕಷ್ಟಕ್ಕೆ ದನಿಯಾಗದ ಬಿಜೆಪಿಯವರು ಯಾಕೆ ಮೌನವಾಗಿದ್ದಾರೆ? ಯಾಕ್ರೀ ಮಾತು ಬರುತ್ತಿಲ್ಲ? ಎಂದು ಪ್ರಶ್ನಿಸಿ ಬಿಜೆಪಿ ಶಾಸಕರನ್ನು ತರಾಟೆಗೆ ತೆಗೆದುಕೊಂಡರು.

 

ಬಿಜೆಪಿ ನಾಯಕರ ಕಾಲೆಳೆದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಗ್ಯಾಸ್ ಸರಬರಾಜು ಮಾಡುವುದು ಕೇಂದ್ರ ಸರ್ಕಾರ ತಾನೆ.? ಕೇಂದ್ರದ ಬಗ್ಗೆ ಮಾತನಾಡುತ್ತಿದ್ದಂತೆಯೇ ಯಾಕೆ ಎದ್ದು ನಿಲ್ಲುತ್ತೀರಿ? ಮುನಿಯಪ್ಪ ಅವರಿಗೆ ಉತ್ತರ ನೀಡಲು ಅವಕಾಶ ಕೊಡಿ. ಹಾರ್ದಿಕ್ ಸಿಂಗ್ ಪುರಿ ಅವರ ಹೇಳಿಕೆಯನ್ನೇ ಪ್ರಸ್ತಾಪಿಸುತ್ತಿದ್ದೇವೆ, ಸತ್ಯ ಕೇಳುವ ತಾಳ್ಮೆ ನಿಮಗಿಲ್ಲವೇ?” ಎಂದು ಲೇವಡಿ ಮಾಡಿದರು.

 

ಸರ್ಕಾರದ ಆರೋಪಗಳಿಗೆ ತಿರುಗೇಟು ನೀಡಿದ ಬಿಜೆಪಿ ಶಾಸಕ ಸುನಿಲ್ ಕುಮಾರ್, ಜಾಗತಿಕ ಯುದ್ಧದ ಸಂದರ್ಭದಲ್ಲಿ ಎಲ್ಲಾ ದೇಶಗಳೂ ಇಂತಹ ಸಮಸ್ಯೆ ಎದುರಿಸುತ್ತಿವೆ. ನಮಗೂ ಇದರ ಬಗ್ಗೆ ಆತಂಕವಿದೆ. ಆದರೆ ರಾಜ್ಯ ಸರ್ಕಾರಕ್ಕೆ ತನ್ನ ಜವಾಬ್ದಾರಿ ನಿಭಾಯಿಸಲು ಯೋಗ್ಯತೆ ಇಲ್ಲ. ಕರಾವಳಿಯಲ್ಲಿ ಮರಳು ಸಿಗುತ್ತಿಲ್ಲ, ಸರ್ವರ್ ಸಮಸ್ಯೆ ಸರಿಪಡಿಸಲು ಆಗುತ್ತಿಲ್ಲ, ಇನ್ನು ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಈ ಸರ್ಕಾರಕ್ಕೆ ಯೋಗ್ಯತೆ ಇಲ್ಲ,” ಎಂದು ಕಿಡಿಕಾರಿದರು.

 

 

 

 

 

Bengaluru: 3.5ಕೋಟಿ ಬೆಲೆಯ ಚಿನ್ನ,ವಜ್ರ,ನಗದು ಕದ್ದು ರಾಜಸ್ಥಾನಕ್ಕೆ ಎಸ್ಕೇಪ್..!

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *