Document

CN Halli: ಅಂತರ್ಜಾತಿ ಪ್ರೇಮ ವಿವಾಹಕ್ಕೆ ತೊಂದರೆ ನವ ದಂಪತಿಗಳು ಹಾಗೂ ಹುಡುಗನ ಕುಟುಂಬಕ್ಕೆ ಜೀವಭಯ.

Janataa24 NEWS DESK 

 

CN Halli: ಅಂತರ್ಜಾತಿ ಪ್ರೇಮ ವಿವಾಹಕ್ಕೆ ತೊಂದರೆ ನವ ದಂಪತಿಗಳು ಹಾಗೂ ಹುಡುಗನ ಕುಟುಂಬಕ್ಕೆ ಜೀವಭಯ.

CN Halli: Trouble with inter-caste love marriage, life in fear for the new couple and the boy's family.

ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲೂಕಿನ ಸುಶ್ಮಿತಾ (19 ವರ್ಷ) ಕಾತ್ರಿಕೆಹಾಳ್ ಗ್ರಾಮ ಹಾಗೂ ಯತೀಶ್ (24 ವರ್ಷ)ತೀರ್ಥಪುರ ಗ್ರಾಮದ ಇಬ್ಬರು ಪ್ರೇಮಿಗಳು, ಕಂದೀಕೆರೆ ಹೋಬಳಿ,ಚಿಕ್ಕನಾಯಕನಹಳ್ಳಿ ತಾಲೂಕು ತುಮಕೂರು ಜಿಲ್ಲೆ ನಿವಾಸಿಗಳು. ಇವರಿಬ್ಬರು ಪರಸ್ಪರ ಒಂದು ವರ್ಷದಿಂದ ಪ್ರೀತಿಸಿ 01/09/2025 ರಂದು ಧಾಬಾಸ್ ಪೇಟೆ ಶಿವಗಂಗೆ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.

ಮದುವೆಯಾದ ದಿನವೇ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಇಬ್ಬರೂ ಹಾಜರಾಗಿ, ತಮ್ಮ ಪ್ರೀತಿಯಿಂದಲೇ , ಇಷ್ಟ ಪಟ್ಟು ಮದುವೆಯಾಗಿರುವುದಾಗಿ ಸುಶ್ಮಿತಾ ಹೇಳಿಕೆ ನೀಡಿದ್ದು, ಪೊಲೀಸರು ಕಾನೂನು ರೀತಿ ಹುಡುಗನ ಕುಟುಂಬದೊಂದಿಗೆ ಸುಶ್ಮಿತಾರನ್ನು ಕಳುಹಿಸಿದ್ದರು. ಈ ವೇಳೆ ಸುಶ್ಮಿತಾರ ತಂದೆ ಪಾಪಣ್ಣ ಹಾಗೂ ಅಣ್ಣಂದಿರು, “ಹುಡುಗ-ಹುಡುಗಿಗೆ ಹಾಗೂ ಹುಡುಗನ ಕುಟುಂಬಕ್ಕೆ ಯಾವುದೇ ತೊಂದರೆ ಕೊಡಬಾರದು” ಎಂಬುದಾಗಿ ಬರೆಸಿಕೊಂಡಿದ್ದರು.

 

ಆದರೆ ನಂತರ, ಸುಶ್ಮಿತಾರ ತಂದೆ, ಅಣ್ಣಂದಿರು, ಚಿಕ್ಕಪ್ಪಂದಿರು ಹಾಗೂ ಕಾತ್ರಿಕೆಹಾಳ್ ಗ್ರಾಮದ ರಾಜಕೀಯ ಮುಖಂಡರು ಸೇರಿಕೊಂಡು,

“ಕೀಳು ಜಾತಿಯವನ ಜೊತೆ ಮದುವೆಯಾಗುವುದಕ್ಕಿಂತ ಸಾಯುವುದೇ ಲೇಸು” ಎಂದು ಹೇಳಿ,

ಯತೀಶ್ ಮತ್ತು ಅವರ ಕುಟುಂಬವನ್ನು ಲಾಂಗು, ಮಚ್ಚಿನಿಂದ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಇದರಿಂದಾಗಿ ಸುಶ್ಮಿತಾ ಹಾಗೂ ಯತೀಶ್ ಜೀವಭಯದಿಂದ ತುಮಕೂರಿಗೆ ತೆರಳಿ ಪೊಲೀಸ್ ಅಧೀಕ್ಷಕರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿರುವುದು ಬೆಳಕಿಗೆ ಬಂದಿದೆ. ಸುಶ್ಮಿತಾ, ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಸಂಪರ್ಕಿಸಿ –

“ನಮ್ಮ ಜೀವಕ್ಕೆಹಾಗೂ ನನ್ನ ಗಂಡನ ಕುಟುಂಬದ ಜೀವಗಳಿಗೆ ತಕ್ಷಣ ರಕ್ಷಣೆ ನೀಡಬೇಕು. ನಮಗೆ ಏನಾದರೂ ಅನಾಹುತವಾದರೆ ಅದಕ್ಕೆ ನನ್ನ ತಂದೆ, ಅಣ್ಣಂದಿರು ಹಾಗೂ ಕಾತ್ರಿಕೆಹಾಳ್ ಗ್ರಾಮದ ಮುಖಂಡರೇ ಹೊಣೆ” ಎಂದು ಮನವಿ ಮಾಡಿದ್ದಾರೆ.

 

ವರದಿ: ದೇವರಾಜ್ ಚಿಕ್ಕನಾಯಕನಹಳ್ಳಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *