Document

CN Halli: ಶಿಡ್ಲಕಟ್ಟೆ ಎಸ್‌ಸಿ ಕಾಲೋನಿಯಲ್ಲಿ ಕಳಪೆ ರಸ್ತೆ ಕಾಮಗಾರಿ – ದಾಖಲೆ ಸಮೇತ ಗ್ರಾಮಸ್ಥರ ಆರೋಪ

JANATAA24 NEWS DESK 

 

 

CN Halli: ಶಿಡ್ಲಕಟ್ಟೆ ಎಸ್‌ಸಿ ಕಾಲೋನಿಯಲ್ಲಿ ಕಳಪೆ ರಸ್ತೆ ಕಾಮಗಾರಿ – ದಾಖಲೆ ಸಮೇತ ಗ್ರಾಮಸ್ಥರ ಆರೋಪ.

CN Halli: ಶಿಡ್ಲಕಟ್ಟೆ ಎಸ್‌ಸಿ ಕಾಲೋನಿಯಲ್ಲಿ ಕಳಪೆ ರಸ್ತೆ ಕಾಮಗಾರಿ – ದಾಖಲೆ ಸಮೇತ ಗ್ರಾಮಸ್ಥರ ಆರೋಪ

ಚಿಕ್ಕನಾಯಕನಹಳ್ಳಿ : ಶಿಡ್ಲಕಟ್ಟೆ ಗ್ರಾಮದ ಪರಿಶಿಷ್ಟರ ಕಾಲೋನಿಯಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (KRIDL) ಮೂಲಕ 2023–24ನೇ ಸಾಲಿನಲ್ಲಿ ಮಂಜೂರಾದ ಸಿಮೆಂಟ್ ರಸ್ತೆ ಕಾಮಗಾರಿ, ಸರ್ಕಾರದ ಅಧಿಕೃತ ಅಂದಾಜು ಪ್ರತಿ(Detailed Estimate)ಗೆ ವಿರುದ್ಧವಾಗಿ ಕಳಪೆ ಹಾಗೂ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.

 

KRIDL ಸಿರಾ ಉಪವಿಭಾಗದಿಂದ ತಯಾರಿಸಿದ ಅಂದಾಜು ಪ್ರತಿಯ ಪ್ರಕಾರ, ಪೋಚಕಟ್ಟೆ ಮುಖ್ಯ ರಸ್ತೆ ಇಂದ ಶಿಡ್ಲಕಟ್ಟೆ ಪರಿಶಿಷ್ಟರ ಕಾಲೋನಿಗೆ ಸಂಪರ್ಕಿಸುವ ಸುಮಾರು 342 ಮೀಟರ್ ಉದ್ದ, 4 ಮೀಟರ್ ಅಗಲ ಮತ್ತು 0.15 ಮೀಟರ್ ದಪ್ಪದ ಸಿಮೆಂಟ್ ರಸ್ತೆ ನಿರ್ಮಿಸಬೇಕಾಗಿದೆ. ಈ ಕಾಮಗಾರಿಯಲ್ಲಿ ನೆಲವನ್ನು ಸಡಿಲಗೊಳಿಸಿ ಸಮಮಾಡುವುದು, ಜಲ್ಲಿ ಮತ್ತು ಮಣ್ಣನ್ನು ಹಾಕಿ ರೋಲರ್ ಮೂಲಕ ಬಿಗಿ ಮಾಡುವುದು, ನಂತರ ವೆಟ್ ಮಿಕ್ಸ್ ಮೆಕಡಂ (WMM) ಹಾಕಿ ವೈಜ್ಞಾನಿಕವಾಗಿ ರಸ್ತೆ ನಿರ್ಮಿಸಬೇಕು ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ.

 

ಆದರೆ ಸ್ಥಳದಲ್ಲಿ ನಡೆಯುತ್ತಿರುವ ಕಾಮಗಾರಿ ಸಂಪೂರ್ಣವಾಗಿ ಈ ಅಂದಾಜು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಜಲ್ಲಿ ಹಾಕಬೇಕಾದ ಸ್ಥಳದಲ್ಲಿ ಜಲ್ಲಿಯನ್ನು ಬಳಸದೇ M–Sand ಮತ್ತು ಅರ್ಧ ಇಂಚಿನ ಚೂರು ಕಲ್ಲುಗಳನ್ನು ಮಾತ್ರ ಹಾಕಲಾಗುತ್ತಿದೆ. ನೆಲವನ್ನು ಬಿಗಿ ಮಾಡಲು ಅಗತ್ಯವಿರುವ ರೋಲರ್ ಕಾರ್ಯಾಚರಣೆ ನಡೆಸದೇ, ಯಾವುದೇ ತಾಂತ್ರಿಕ ಕ್ರಮ ಪಾಲಿಸದೇ ಬೇಕಾಬಿಟ್ಟಿಯಾಗಿ ಕಾಮಗಾರಿ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

 

ಈ ಕಳಪೆ ಕಾಮಗಾರಿಯ ಪರಿಣಾಮವಾಗಿ ರಸ್ತೆ ಬದಿಗಳು ಈಗಾಗಲೇ ಕಿತ್ತು ಹೋಗಿರುವುದು ಸ್ಪಷ್ಟವಾಗಿ ಕಾಣುತ್ತಿದ್ದು, ಈ ರಸ್ತೆ ದೀರ್ಘಕಾಲ ಉಳಿಯುವುದಿಲ್ಲ ಎಂಬ ಆತಂಕ ಗ್ರಾಮಸ್ಥರಲ್ಲಿ ಮೂಡಿದೆ. ಇದರಿಂದ ಸರ್ಕಾರ ಮಂಜೂರು ಮಾಡಿದ 25 ಲಕ್ಷಾಂತರ ರೂ. ಅನುದಾನವನ್ನು ದುರುಪಯೋಗಪಡಿಸಲಾಗುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ.

 

ಇನ್ನೂ ಗಂಭೀರ ವಿಷಯವೆಂದರೆ, ಜನವಸತಿ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡುವ ಮೊದಲು ಮಾಡಬೇಕಾದ ಚರಂಡಿ ವ್ಯವಸ್ಥೆಯನ್ನೇ ನಿರ್ಮಿಸದೇ ನೇರವಾಗಿ ರಸ್ತೆ ಹಾಕಲಾಗಿದೆ. ಇದನ್ನು ಗ್ರಾಮಸ್ಥರು ಸಂಪೂರ್ಣ ಅವೈಜ್ಞಾನಿಕ ಕ್ರಮ ಎಂದು ಖಂಡಿಸಿದ್ದಾರೆ. ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ನಿಂತು, ಆ ನೀರು ಮನೆಗಳೊಳಗೆ ನುಗ್ಗುವ ಸಾಧ್ಯತೆ ಹೆಚ್ಚಿದ್ದು, ಸೊಳ್ಳೆ–ನೊಣಗಳ ಹೆಚ್ಚಳದಿಂದ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ಸೇರಿದಂತೆ ಸಾಂಕ್ರಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

 

“ಅಂದಾಜು ಪತ್ರಿಕೆಯಲ್ಲಿ ಜಲ್ಲಿ, ರೋಲರ್, ವೈಜ್ಞಾನಿಕ ವಿಧಾನ ಎಂದು ಎಲ್ಲವೂ ದಾಖಲೆಗಳಲ್ಲಿ ಇದೆ. ಆದರೆ ಸ್ಥಳದಲ್ಲಿ ಅದ್ಯಾವುದೂ ಕಾಣುತ್ತಿಲ್ಲ. ಇದು ಅಭಿವೃದ್ಧಿ ಕೆಲಸವಲ್ಲ, ಸರ್ಕಾರದ ಹಣ ಒಡೆಯುವ ಕೆಲಸ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಈ ಬಗ್ಗೆ ಸಂಬಂಧಪಟ್ಟ KRIDL, PWD ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ಪರಿಶೀಲನೆ ನಡೆಸಿ, ಅಂದಾಜು ಪತ್ರಿಕೆಯಂತೆ ವೈಜ್ಞಾನಿಕವಾಗಿ ಮರುಕಾಮಗಾರಿ ನಡೆಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

 

ವರದಿ: ದೇವರಾಜ್ ಚಿಕ್ಕನಾಯಕನಹಳ್ಳಿ.

 

 

 


ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *