CN Halli: ರೈತರ ಅಹಿಂಸಾ ಹೋರಾಟಕ್ಕೆ ಬೆಂಕಿಯ ಮೂಲಕ ಬೆದರಿಕೆ– ಹುಳಿಯಾರಿನಲ್ಲಿ ರೈತರ ಹತ್ಯಾ ಸಂಚಿನ ವಾಸನೆ.

ಹುಳಿಯಾರು: ಹುಳಿಯಾರಿನ ಅಭಿವೃದ್ಧಿ ಮತ್ತು ರೈತರ ಧ್ವನಿ ಏರಿಕೆಯನ್ನು ಸಹಿಸದ ಕೆಲ ದುಷ್ಕರ್ಮಿಗಳು, ರೈತ ಸಂಘದ ಅಹೋರಾತ್ರಿ ಧರಣಿ ಸ್ಥಳವನ್ನೇ ಸುಟ್ಟು, ಹೋರಾಟವನ್ನು ಸಮಾಧಿ ಮಾಡಲು ಯತ್ನಿಸಿದ್ದಾರೆ ಎಂದು ರೈತ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ.
ಶನಿವಾರ ತಡರಾತ್ರಿ ಧರಣಿ ಸ್ಥಳದಲ್ಲಿ ಬ್ಯಾನರ್ ಹಾಗೂ ಪಟ್ಟಣ ಪಂಚಾಯತಿ ಮುಂದಿರುವ ಕ್ಯಾಮೆರಾ ಕಿತ್ತೊಗೆದು, ಗುಡಾರಕ್ಕೆ ಬೆಂಕಿ ಹಚ್ಚಿರುವುದು ಕೇವಲ ಹಾನಿಯಲ್ಲ. ಇದು ರೈತ ನಾಯಕರು ಮಲಗುವ ಜಾಗವನ್ನೇ ಗುರಿಯಾಗಿಟ್ಟುಕೊಂಡು ರೂಪಿಸಿದ ಹತ್ಯಾ ಸಂಚಿನ ಪ್ರಯತ್ನ ಎಂಬ ಅನುಮಾನವನ್ನು ರೈತ ಸಂಘಟನೆ ಬಲಪಡಿಸಿದೆ.
ಆ ದಿನ ರಾತ್ರಿ ತೀವ್ರ ಚಳಿ ಕಾರಣದಿಂದ ರೈತ ಮುಖಂಡರು ಧರಣಿ ಸ್ಥಳದಲ್ಲಿ ಮಲಗದೆ ಮನೆಗೆ ತೆರಳಿದ್ದರಿಂದ ಪ್ರಾಣ ಉಳಿಸಿಕೊಂಡಿದ್ದಾರೆ. ಅವರು ಅಲ್ಲೇ ಇದ್ದಿದ್ದರೆ, ಇಂದು ಹುಳಿಯಾರು ರೈತ ಹೋರಾಟದ ಹುತಾತ್ಮರ ರಕ್ತದಿಂದ ಕೆಂಪಾಗಿರುತ್ತಿತ್ತು ಎಂದು ಸ್ಥಳೀಯ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ರೈತ ಸಂಘದ ಕಾರ್ಯಕರ್ತರು ಗಾಂಧೀ ತತ್ವ, ಅಹಿಂಸಾ, ಸತ್ಯಾಗ್ರಹದ ಮಾರ್ಗದಲ್ಲಿ ಶಾಂತವಾಗಿ ಹೋರಾಡುತ್ತಿದ್ದರೂ, ಬೆಂಕಿಯ ಕೆನ್ನಾಲಿಗೆಗೆ ಬ್ಯಾನರ್, ಗುಡಾರ, cc ಕ್ಯಾಮೆರಾ ಸಂಪೂರ್ಣ ಭಸ್ಮವಾಗಿದ್ದು, ಹೋರಾಟದ ಸಂಕೇತಗಳನ್ನೇ ಸುಟ್ಟು ಹಾಕಲಾಗಿದೆ.
ಘಟನೆ ಬಳಿಕ ಧರಣಿ ನಿರತ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಇದು ರೈತರ ಹಕ್ಕುಗಳನ್ನು ಸುಡುವ, ಧ್ವನಿಯನ್ನು ಅಡಗಿಸುವ, ಹೋರಾಟವನ್ನು ಉಸಿರುಗಟ್ಟಿಸುವ ದುಷ್ಕೃತ್ಯ ಎಂದು ಖಂಡಿಸಿದ್ದಾರೆ.
ಕಿಡಿಗೇಡಿಗಳ ಬಂಧನ, ಕಠಿಣ ಕಾನೂನು ಕ್ರಮ, ಹಾಗೂ ಧರಣಿ ಸ್ಥಳಕ್ಕೆ 24×7 ಪೊಲೀಸ್ ರಕ್ಷಣೆ ನೀಡಬೇಕು ಎಂದು ಸಂಘ ಆಗ್ರಹಿಸಿದೆ.ಇದರಿಂದೆ ಕೆಲವರು ರಾಜಕೀಯ ವ್ಯಕ್ತಿಗಳ ಕೈವಾಡ ಇದೆಯೆಂದು
ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಆದರೆ ಸಾರ್ವಜನಿಕ ವಲಯದಲ್ಲಿ, ಇದು ತನಿಖೆಯ ಪ್ರಶ್ನೆಯಲ್ಲ ರೈತರ ಭದ್ರತೆಯ ಪ್ರಶ್ನೆ, ಪ್ರಜಾಪ್ರಭುತ್ವದ ಉಳಿವಿನ ಪ್ರಶ್ನೆ ಎಂಬ ಚರ್ಚೆ ವ್ಯಾಪಕವಾಗಿದೆ.
ಹುಳಿಯಾರಿನ ಜನರೂ ಈ ಕೃತ್ಯವನ್ನು ಖಂಡಿಸಿ, ರೈತರ ಶಾಂತ ಹೋರಾಟಕ್ಕೆ ಬೆಂಕಿ ಉತ್ತರ ಅಲ್ಲ, ನ್ಯಾಯವೇ ಉತ್ತರ ಎಂದು ಹೇಳುತ್ತ, ಹೋರಾಟಗಾರರಿಗೆ ಸೂಕ್ತ ಭದ್ರತೆ ನೀಡುವಂತೆ ಸರ್ಕಾರ ಮತ್ತು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಇದು ಕೇವಲ ಗುಡಾರಕ್ಕೆ ಹಾಕಿದ ಬೆಂಕಿ ಅಲ್ಲ, ರೈತರ ಹೋರಾಟಕ್ಕೆ, ಪ್ರಾಮಾಣಿಕ ಸಂಘಟನೆಗಳಿಗೆ ಹಾಕಿದ ಸವಾಲಿನ ಕಿಡಿ. ಈ ಕಿಡಿಯನ್ನು ಕಾಡಗಿಚ್ಚOತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಚಾಲಕರಾದ ಯರೇಕಟ್ಟೆ ರಮೇಶ್ ಅವರು ಕೂಡಲೇ ಸಂಭಂದ ಪಟ್ಟ ಜಿಲ್ಲಾಧಿಕಾರಿಗಳು, SP ಹಾಗೂ ಸರ್ಕಾರ ಸಮಸ್ಯೆ ಬಗೆಹರಿಸಬೇಕು ಇಲ್ಲದಿದ್ದರೆ ದಲಿತ ಸಂಘರ್ಷ ಸಮಿತಿ ಉಗ್ರ ಹೋರಾಟ ಹಾಗೂ ಕಾನೂನು ಹೋರಾಟ ಮಾಡಲು ಸಿದ್ದವಾಗಬೇಕಾಗುತ್ತದೆ ಎಂದಿದ್ದಾರೆ.
ಇದು ಕೇವಲ ಹಾನಿ ಅಲ್ಲ ಪ್ರಜಾಪ್ರಭುತ್ವದ ಕಗ್ಗೊಲೆ, ರೈತರ ದ್ವನಿಯನ್ನು, ಎಲ್ಲ ಸಂಘಟನೆಗಳ ಹೋರಾಟವನ್ನು ಅಡಗಿಸುವ ಹುನ್ನಾರವಾಗಿದೆ.
ಇದು ಕೇವಲ ಆರೋಪ ಅಲ್ಲ ರೈತ ನಾಯಕತ್ವವನ್ನು ಹಾಗೂ ಪ್ರಾಮಾಣಿಕ ಹೋರಾಟವನ್ನು ಮುಗಿಸಲು ನಡೆದ ಪ್ರಯತ್ನದ ಎಚ್ಚರಿಕೆ ಗಂಟೆ ಆಗಿದೆ ಅನ್ನುತ್ತಿದ್ದಾರೆ ರೈತ ಸಂಘಟನೆಯ ಮುಖಂಡರು ಹೊಸಳ್ಳಿ ಚಂದ್ರಣ್ಣ.
ಮತ್ತು ಇದಕ್ಕೆ ಬೆಂಬಲವಾಗಿ ಛಲವಾದಿ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಆನಂದ್ ಅಶ್ರಿಹಾಲ್ ದ್ವನಿ ಎತ್ತಿ ಕೂಡಲೇ ಬೆಂಕಿ ಇಟ್ಟವರನ್ನು ಬಂಧಿಸಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿಕೋಟ್ಟು ಸಮಸ್ಯೆ ಬಗೆಹರಿಸಬೇಕು ಇಲ್ಲದಿದ್ದರೆ ಎಲ್ಲ ಸಂಘಟನೆಗಳು ಒಟ್ಟಾಗಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವರದಿ :ದೇವಾರಾಜು ಆರ್ ಚಿಕ್ಕನಾಯಕನಹಳ್ಳಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.