Document

CN Halli: “ಶಾಸಕರೇ ಜೀವ ಉಳಿಸಿ” ಇಲ್ಲಿ ತುರ್ತು ಸೇವಾ ವಾಹನಗಳೇ ಇಲ್ಲ –ದಸೂಡಿ, ಹುಳಿಯಾರು ಜನರ ಜೀವಕ್ಕೆ ಬೆಲೆ ಇಲ್ಲವೇ.

JANATAA24 NEWS DESK 

 

 

CN Halli: “ಶಾಸಕರೇ ಜೀವ ಉಳಿಸಿ” ಇಲ್ಲಿ ತುರ್ತು ಸೇವಾ ವಾಹನಗಳೇ ಇಲ್ಲ –ದಸೂಡಿ, ಹುಳಿಯಾರು ಜನರ ಜೀವಕ್ಕೆ ಬೆಲೆ ಇಲ್ಲವೇ.

ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ದಳದ ಕೊರತೆಯಿಂದ ಜೀವಭದ್ರತೆ ಅಪಾಯದಲ್ಲಿ

Cn halli

ಚಿಕ್ಕನಾಯಕನಹಳ್ಳಿ;  ಕ್ಷೇತ್ರದ ದಸೂಡಿ ಹಾಗೂ ಹುಳಿಯಾರು ಭಾಗದ ಜನರು ಮೂಲಭೂತ ಸೌಲಭ್ಯಗಳ ಕೊರತೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಇದೀಗ ಶಾಸಕರಿಗೆ ನೇರವಾಗಿ “ಜೀವ ಉಳಿಸಿ” ಎಂಬ ಕೂಗು ಕೇಳಿಬರುತ್ತಿದೆ. ಶಾಸಕರಾದ ಸಿ.ಬಿ. ಸುರೇಶ್‌ಬಾಬು ಅವರು ದಸೂಡಿ ಪಶು ಸಂಗೋಪನಾ ಆಸ್ಪತ್ರೆ ಉದ್ಘಾಟನಾ ವೇಳೆ ನೀಡಿದ್ದ ಆಂಬ್ಯುಲೆನ್ಸ್ ವ್ಯವಸ್ಥೆ ಹಾಗೂ ಹುಳಿಯಾರು ಪಟ್ಟಣದಲ್ಲಿ ಅಗ್ನಿಶಾಮಕ ದಳ ಸ್ಥಾಪನೆ ಕುರಿತ ಭರವಸೆ ಇನ್ನೂ ಈಡೇರದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ದಸೂಡಿ ಗ್ರಾಮದ ಪ್ರಗತಿಪರ ರೈತ ಹಾಗೂ ಲೇಖಕರಾದ ಕೆ. ಮರಿಯಪ್ಪ ಅವರು ಶಾಸಕರಿಗೆ ಮನವಿ ಸಲ್ಲಿಸಿ, ಈ ಎರಡು ಪ್ರಮುಖ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಒತ್ತಾಯಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ತುರ್ತು ಆರೋಗ್ಯ ಸೇವೆಗಳು ಹಾಗೂ ಅಗ್ನಿಶಾಮಕ ವ್ಯವಸ್ಥೆಯ ಕೊರತೆ ಜೀವಹಾನಿಗೆ ಕಾರಣವಾಗುತ್ತಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಸ್ಥಳೀಯರ ಪ್ರಕಾರ, ದಸೂಡಿ ಸುತ್ತಮುತ್ತ ಅರಣ್ಯ ಪ್ರದೇಶವಿದ್ದು, ಅಗ್ನಿ ಅವಘಡ ಸಂಭವಿಸಿದಾಗ ಅಗ್ನಿಶಾಮಕ ಸಿಬ್ಬಂದಿ ತಲುಪುವಷ್ಟರಲ್ಲಿ ಕಾಡು ಸಂಪೂರ್ಣ ಸುಟ್ಟುಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಅರಣ್ಯ ಸಂಪತ್ತು ಹಾಗೂ ಕಾಡು ಪ್ರಾಣಿಗಳು ಭಾರೀ ಹಾನಿಗೊಳಗಾಗುತ್ತಿವೆ.

ಇದೇ ವೇಳೆ, ಆಂಬ್ಯುಲೆನ್ಸ್ ಸೌಲಭ್ಯಗಳ ಕೊರತೆಯಿಂದ ಅನೇಕರು ಆಸ್ಪತ್ರೆಗೆ ತಲುಪುವ ಮುನ್ನವೇ ರಸ್ತೆ ಮಧ್ಯೆ ಪ್ರಾಣ ಕಳೆದುಕೊಳ್ಳುತ್ತಿರುವ ದುಸ್ಥಿತಿ ಮುಂದುವರಿದಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ತಕ್ಷಣ ಕ್ರಮ ಕೈಗೊಂಡು ಜನರ ಜೀವಭದ್ರತೆಯನ್ನು ಕಾಪಾಡುವಂತೆ ಶಾಸಕರಿಗೆ ಹುಳಿಯಾರು ಹೋಬಳಿ ಜನತೆಪರವಾಗಿ ಮರಿಯಪ್ಪನವರು ಆಗ್ರಹಿಸಿದ್ದಾರೆ.

 

ಜನರ ಜೀವಕ್ಕೆ ಸಂಬಂಧಿಸಿದ ಈ ಗಂಭೀರ ಸಮಸ್ಯೆಗೆ ಶಾಸಕರು ಹಾಗೂ ಸರ್ಕಾರ ಎಷ್ಟು ಬೇಗ ಸ್ಪಂದಿಸುತ್ತಾರೆ ಎಂಬುದು ಈಗ ಎಲ್ಲರ ಕಣ್ಣಿನ ಮುಂದೆ ಇರುವ ಪ್ರಶ್ನೆಯಾಗಿದೆ.

 

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *