JANATAA24 NEWS DESK
CN Halli: ಚಿಕ್ಕನಾಯಕನಹಳ್ಳಿ ತಾಲೂಕು ಅಭಿವೃದ್ಧಿಯಿಂದ ಹಿಂದೆ ಉಳಿಯಲು ಅಧಿಕಾರಿಗಳೇ ನೇರ ಹೊಣೆ ಎಂದ KRS ಕಾರ್ಯಕರ್ತ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಿಂದುಳಿತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೆ ಮುಖ್ಯ ಕಾರಣ: KRS ಪಕ್ಷದ ರಾಜ್ಯ ಕಾರ್ಯದರ್ಶಿಯಿಂದ ಲೋಕಾಯುಕ್ತರಿಗೆ ದೂರು
ಚಿಕ್ಕನಾಯಕನಹಳ್ಳಿ: ಅರೆಮಲೆನಾಡಿನ ಅಪಾರ ಪ್ರಕೃತಿ ಸಂಪತ್ತನ್ನು ಹೊಂದಿದ್ದರೂ ಅಭಿವೃದ್ಧಿಯಲ್ಲಿ ಹಿಂದುಳಿದ ತಾಲ್ಲೂಕಾಗಿ ಗುರುತಿಸಲ್ಪಟ್ಟಿರುವ ಚಿಕ್ಕನಾಯಕನಹಳ್ಳಿಯ ಸ್ಥಿತಿ ದಿನೇ ದಿನೇ ಕುಸಿಯುತ್ತಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಮುಖ್ಯ ಕಾರಣ ಎಂದು KRS ಪಕ್ಷದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ BS ಅವರು ಆರೋಪಿಸಿದ್ದಾರೆ. ಈ ಕುರಿತು ಅವರು ತಹಸಿಲ್ದಾರ್, ತುಮಕೂರು ಜಿಲ್ಲಾ ಅಧೀಕ್ಷಕರು ಮತ್ತು ಕರ್ನಾಟಕ ಲೋಕಾಯುಕ್ತರಿಗೆ “ಅತಿ ತುರ್ತು” ದೂರು ಸಲ್ಲಿಸಿದ್ದಾರೆ.
ಡಾ. ಡಿ. ಎಂ. ನಂಜುಡಪ್ಪ ಸಮಿತಿ ವರದಿ (2001) ಮತ್ತು ಕರ್ನಾಟಕ ಮಾನವ ಅಭಿವೃದ್ಧಿ ವರದಿ 2022ರ ಅಂಕಿಅಂಶಗಳು ಚಿಕ್ಕನಾಯಕನಹಳ್ಳಿಯ ಕುಸಿತವನ್ನು ಸ್ಪಷ್ಟಪಡಿಸುತ್ತವೆ. ರಾಜ್ಯದ 176 ತಾಲ್ಲೂಕುಗಳಲ್ಲಿ ಶಿಕ್ಷಣ ಸೂಚ್ಯಂಕದ ಆಧಾರದ ಮೇಲೆ ಈ ತಾಲ್ಲೂಕು ಅತ್ಯಂತ ಹಿಂದುಳಿದ ಸ್ಥಾನದಲ್ಲಿದೆ. ಒಟ್ಟು ಮಾನವ ಅಭಿವೃದ್ಧಿ ಸೂಚ್ಯಂಕ 0.6322 ಆಗಿದ್ದು, ಇದರಲ್ಲಿ ಶಿಕ್ಷಣದ ಕೊಡುಗೆ ಕೇವಲ 27.57% ಮಾತ್ರ.
2005 ರಿಂದ 2012ರ ಅವಧಿಯಲ್ಲಿ ನಡೆದ ಅಕ್ರಮ ಮತ್ತು ಬೇಕಾಬಿಟ್ಟಿ ಗಣಿಗಾರಿಕೆ ತಾಲ್ಲೂಕಿನ ಪರಿಸರ ವ್ಯವಸ್ಥೆಗೆ ಅಪಾರ ಹಾನಿ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅರಣ್ಯ ಪ್ರದೇಶಗಳ ನಾಶ, ಕೆರೆ–ಕಟ್ಟೆಗಳ ಹಾಳು, ಬೋರ್ವೆಲ್ಗಳ ಬತ್ತುವಿಕೆ, ಇಟ್ಟಿಗೆ ಕಾರ್ಖಾನೆಗಳ ಹೊಗೆ ಮತ್ತು ಕಬ್ಬಿಣ ಧೂಳಿನಿಂದ ತೆಂಗಿನ ಬೆಳೆ ಮತ್ತು ಜೇನು ಸಾಕಾಣಿಕೆ ಕುಸಿತ ಇವೆಲ್ಲವೂ ತಾಲ್ಲೂಕಿನ ಆರ್ಥಿಕತೆಗೆ ಅಭಿವೃದ್ಧಿಗೆ ಆಘಾತಕವಾಗಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರ ಮತ್ತು ಇಲಾಖೆಗಳು ಪರಿಸರ ಪುನಶ್ಚೇತನಕ್ಕೆ ಆದ್ಯತೆ ನೀಡದೇ “ಕಾಮಗಾರಿ–ಕಾಂಟ್ರಾಕ್ಟ್–ಕಮೀಷನ್” ಸಂಸ್ಕೃತಿಗೆ ತುತ್ತಾಗಿದ್ದು, ನವೀಕರಿಸಲಾಗದ ಮಣ್ಣು, ಕಬ್ಬಿಣ, ಜಲ್ಲಿ, M-ಸ್ಯಾಂಡ್ ಮೊದಲಾದ ವಸ್ತುಗಳ ದುರುಪಯೋಗದಿಂದ ಮತ್ತೆ ಮತ್ತೆ ಕಳಪೆ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಇದು ಮುಂದಿನ ಪೀಳಿಗೆಯ ಪರಿಸರ ಹಕ್ಕಿನ ಮೇಲಿನ ಸಿಧ್ದಾಂತೀತ ದಾಳಿಯೇ ಆಗಿದೆ ಎಂದು ಅವರು ಆರೋಪಿಸಿದ್ದಾರೆ.
ತಾಲ್ಲೂಕು ಮಟ್ಟದ ಸರಾಸರಿ 90% ಸರ್ಕಾರಿ ಅಧಿಕಾರಿಗಳು ಸ್ಥಳೀಯ ಕಚೇರಿ ವ್ಯಾಪ್ತಿಯಲ್ಲಿ ವಾಸಿಸದೇ ತುಮಕೂರು, ಬೆಂಗಳೂರು, ತಿಪಟೂರು ಮೊದಲಾದ ಪಟ್ಟಣಗಳಲ್ಲಿ ವಾಸಿಸುತ್ತಿದ್ದು, ಜನಸೇವೆಯಲ್ಲಿ ಗುಣಮಟ್ಟ ಕುಸಿಯಲು ಇದೇ ಪ್ರಮುಖ ಕಾರಣವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಸಲ್ಲಿಸಿದ ಬೇಡಿಕೆಗಳಲ್ಲಿ ಪ್ರಮುಖವಾಗಿ
• ಎಲ್ಲಾ ಇಲಾಖೆಗಳ ಮೇಲ್ದರ್ಜೆಯ ಅಧಿಕಾರಿಗಳ ತುರ್ತು ಸಭೆ ನಡೆಸಿ,
• ಸರ್ಕಾರೀ ನೌಕರರು ತಾಲ್ಲೂಕಿನ ಪ್ರದೇಶದಲ್ಲೇ ವಾಸಿಸುವಂತೆ ಕಡ್ಡಾಯ ಕ್ರಮ ಕೈಗೊಳ್ಳಬೇಕು.
• GPS ಆಧಾರಿತ ವಾಸಸ್ಥಳದ ವಾರ ವರದಿ ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿಹಾಗೂ ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು.
• ಅಧಿಕಾರಿಗಳ ಲಭ್ಯತೆ ಮತ್ತು ವಿಳಾಸ ವಿವರಗಳನ್ನು ಸಾರ್ವಜನಿಕರಿಗೆ ಬಹಿರಂಗಗೊಳಿಸುವುದು,
• ಮತ್ತು ಪರಿಸರ, ಆಡಳಿತ ಸಂಬಂಧಿತ ಅಕ್ರಮಗಳ ಬಗ್ಗೆ ಲೋಕಾಯುಕ್ತರಿಂದ ವಿಶೇಷ ತನಿಖೆ ನಡೆಸುವುದು ಎಂದು ಮಲ್ಲಿಕಾರ್ಜುನಯ್ಯ BS ಅವರು ಒತ್ತಾಯಿಸಿದ್ದಾರೆ.
KRS ಪಕ್ಷದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ BS ನೀಡಿದ ಈ ದೂರು ಈಗ ತಾಲೂಕು ಆಡಳಿತದಲ್ಲಿ ಜವಾಬ್ದಾರಿಯ ಚರ್ಚೆಗೆ ಕಾರಣವಾಗಿದೆ.
ವರದಿ:ದೇವರಾಜು R ಚಿಕ್ಕನಾಯಕನಹಳ್ಳಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.