JANATAA24 NEWS DESK
CN Halli: ಚಿರತೆಯ ಹಾವಳಿಗೆ ತಿಮ್ಮನಹಳ್ಳಿ,ರಾಮನಹಳ್ಳಿ,ಹನುಮಂತನಹಳ್ಳಿಯ ಜನರಲ್ಲಿ ಆತಂಕ.

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಕಂದಿಕೆರೆ ಹೋಬಳಿಯ ತಿಮ್ಮನಹಳ್ಳಿ, ರಾಮನಹಳ್ಳಿ ಹಾಗೂ ಹನುಮಂತನಹಳ್ಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆಯ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗ್ರಾಮಸ್ಥರ ಬದುಕು ಭೀತಿಯ ವಾತಾವರಣದಲ್ಲಿದೆ.
ತಿಮ್ಮನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕಬೆಳವಾಡಿ ಗ್ರಾಮದಲ್ಲಿ, ನಿನ್ನೆ ರಾತ್ರಿ ಸುಮಾರು 2 ಗಂಟೆಯ ಸಮಯದಲ್ಲಿ, ಚಿರತೆಯೊಂದು ತೋಟದ ಮನೆಯಲ್ಲಿ ಕಟ್ಟಿದ್ದ ಹಸುವಿನ ಕರುವಿನ ಮೇಲೆ ದಾಳಿ ನಡೆಸಿದೆ. ಕರುವಿನ ಕೂಗು ಕೇಳಿ ಎಚ್ಚರವಾದ ನಾಗೇಂದ್ರಪ್ಪ ಸ್ಥಳೀಯ ರೈತರು ಮತ್ತು ಹತ್ತಿರದ ಮನೆಯವರು ತಕ್ಷಣ ಸ್ಥಳಕ್ಕೆ ಧಾವಿಸಿ ಕೂಗಾಡಿ ಚಿರತೆಯನ್ನು ಓಡಿಸಿದ್ದಾರೆ. ಕರುವಿನ ದೇಹದಲ್ಲಿ ಚಿರತೆಯ ಹಲ್ಲಿನ ಗುರುತುಗಳು ಕಂಡುಬಂದಿದ್ದು, ಕರುವು ಸ್ಥಳೀಯರ ಪ್ರಜ್ಞೆಯಿಂದ ಪ್ರಾಣಪಾಯದಿಂದ ಪಾರಾಗಿದೆ.
ಗ್ರಾಮಸ್ಥರು “ಈ ಭಾಗದಲ್ಲಿ ಚಿರತೆ ನಿರಂತರವಾಗಿ ತಿರುಗಾಡುತ್ತಿದೆ. ರಾತ್ರಿ ಹೊತ್ತು ಕಾಡು ಪ್ರಾಣಿಗಳು ಮನೆ ಬಾಗಿಲಿಗೆ ಬರುತ್ತಿರುವುದರಿಂದ ಜನರ ಬದುಕಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳಿಗೂ ವಿಷಯ ತಿಳಿಸಲಾಗಿದೆ. ಆದರೆ ಚಿರತೆಯನ್ನು ಬಂಧಿಸಿ ನೆಮ್ಮದಿ ಒದಗಿಸುವ ಕ್ರಮ ಕೈಗೊಳ್ಳದೇ ಇರುವುದನ್ನು ರೈತರು ಖಂಡಿಸಿದ್ದಾರೆ.
ಇದಕ್ಕೂ ಮುನ್ನ, ಹತ್ತಿರದ ಹನುಮಂತನಹಳ್ಳಿ ಗ್ರಾಮದಲ್ಲಿಯೂ ಇದೇ ರೀತಿಯ ಘಟನೆ ಸಂಭವಿಸಿದೆ. ಕಳೆದ ಅಕ್ಟೋಬರ್ 19ರಂದು ಸಂಜೆ 4.30ರ ಸುಮಾರಿಗೆ, ಕುರಿಗಳನ್ನು ಮೇಯಿಸಿಕೊಂಡು ಮನೆಗೆ ಕರೆತರುತ್ತಿದ್ದ 13 ವರ್ಷದ ಬಾಲಕ ಸೂರ್ಯ ಮೇಲೂ ಚಿರತೆಯೊಂದು ಹಠಾತ್ ದಾಳಿ ಮಾಡಿತ್ತು. ಬಾಲಕನ ತಾಯಿ ಸ್ವರೂಪ ಅವರ ಮುಂದೆಯೇ ನಡೆದ ಈ ಘಟನೆ ಗ್ರಾಮದಲ್ಲಿ ಅಚ್ಚರಿಯನ್ನು ಮೂಡಿಸಿತ್ತು. ಸೂರ್ಯ ಮೊಣಕೈ, ಮುಖ ಮತ್ತು ಕಾಲುಗಳಲ್ಲಿ ಗಾಯಗೊಂಡಿದ್ದರೂ, ಸ್ಥಳೀಯರು ಧಾವಿಸಿದ ಕಾರಣ ಚಿರತೆ ಓಡಿ ಹೋಗಿತ್ತು.
ಬುಕ್ಕಪಟ್ಟಣ ವಲಯದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಪಾಂಡುರಂಗಯ್ಯ ರೈತರು ತಿಳಿಸಿದ್ದಾರೆ.
ಅರಣ್ಯ ನಾಶ, ಗಣಿಗಾರಿಕೆ, ಹಾಗೂ ಕೃಷಿಭೂಮಿ ವಿಸ್ತರಣೆಯಿಂದಾಗಿ ಕಾಡು ಪ್ರಾಣಿಗಳು ತಮ್ಮ ಆಶ್ರಯ ಮತ್ತು ಆಹಾರ ಕಳೆದುಕೊಂಡು ಮಾನವ ವಸತಿ ಪ್ರದೇಶಗಳತ್ತ ಬಂದು ಮಾನವ ಹಾಗೂ ಪ್ರಾಣಿಗಳ ನಡುವೆ ಸಂಘರ್ಷ ಹೆಚ್ಚುತ್ತಿದೆ.
ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡು,
“ಚಿರತೆಯನ್ನು ತಕ್ಷಣ ಸೆರೆಹಿಡಿದು ಸ್ಥಳಾಂತರಿಸಬೇಕು ಮತ್ತು ಕಾಡು ಪ್ರದೇಶಗಳ ಸಂರಕ್ಷಣೆಗೆ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ವರದಿ: ದೇವರಾಜು R ಚಿಕ್ಕನಾಯಕನಹಳ್ಳಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.