JANATAA24 NEWS DESK
CN Halli: ನಿರುವಗಲ್ ಮಾರಮ್ಮ ದೇವಸ್ಥಾನದ ಲೋಕಾರ್ಪಣೆ–ಶಾಸಕ ಸುರೇಶ್ ಬಾಬು ಬಾಗಿ.

ಚಿಕ್ಕನಾಯಕನಹಳ್ಳಿ: ತಾಲೂಕಿನ ನಿರುಗಲ್ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಮಾರಮ್ಮ ಅಮ್ಮನವರ ದೇವಸ್ಥಾನದ ಲೋಕಾರ್ಪಣೆ ಹಾಗೂ ಸ್ಥಿರಬಿಂಬ ಪ್ರತಿಷ್ಠಾನ ಮಹೋತ್ಸವ ಕಾರ್ಯಕ್ರಮವು ಶನಿವಾರದಿಂದ ಎರಡು ದಿನಗಳ ಕಾಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಶನಿವಾರ ಸಂಜೆ 5:00 ಗಂಟೆಯ ಶುಭ ಗೋದೋಳಿ ಲಗ್ನದಲ್ಲಿ ಗ್ರಾಮದ ಭಕ್ತರ ಸಮೂಹದಲ್ಲಿ ಪುಣ್ಯತೀರ್ಥ, ಸಂಗ್ರಹಣೆ ಗಂಗಾರತಿ, ಏಕೋತ್ತಾರ ಶತಕುಂಬ ಮಹೋತ್ಸವವನ್ನು ಆಂಜನೇಯ ಸ್ವಾಮಿ ದುರ್ಗಮ್ಮ ದೇವಿ ಭೂತಪ್ಪ ಸ್ವಾಮಿಯ ಬೆಳಗುಲಿ ದುರ್ಗಮ್ಮ ಮತ್ತು ಮೇಲೇನಹಳ್ಳಿ ದುರ್ಗಮ್ಮ ದೇವರುಗಳ ಆಗಮನದೊಂದಿಗೆ ಗ್ರಾಮದ ಪ್ರಮುಖ ರಾಜಭೀದಿಗಳಲ್ಲಿ ಮಂಗಳವಾದ್ಯದೊಂದಿಗೆ ಮಾರಮ್ಮ ದೇವಿಯ ದೇವಾಲಯ ಪ್ರವೇಶ ನಂತರ ಗಂಗಾ ಗಣಪತಿ ಸ್ವಸ್ತವಾನಮ್, ವಾಸ್ತು ಹೋಮ, ಮಹಾಗಣಪತಿ ಹೋಮ, ಅಂಕುರ, ಕಳಶರಾದನ, ನವಗ್ರಹ ಮೃತ್ಯುಂಜಯ ಹೋಮ, ನ್ಯಾಸ ಪೂಜಾ, ಪುಷ್ಪ ದಿವಸ,ವಸ್ತ್ರಾ ದಿವಸ, ಮಂಗಳಾರತಿ, ಪ್ರತಿಷ್ಠಾಪನೆಯ ಮುಂತಾದ ಪೂಜಾ ಸೇವಾ ಕೈಂಕರ್ಯಗಳು ನಡೆದವು.
ಭಾನುವಾರ ಬೆಳಿಗ್ಗೆ 04:11ರ ಶುಭ ಬ್ರಾಹ್ಮಿ ಮುಹೂರ್ತದಲ್ಲಿ ಗಂಗಾ ಪೊಜಿಯೊಂದಿಗೆ ದೇವರ ಕಳಸ ತಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜನಪದ ಕಲಾ ತಂಡ. ವಾದ್ಯ ಮೇಳಗೊಂದಿಗೆ ಮೆರವಣೆಗೆ ಮೂಲಕ ಮಾರಮ್ಮ ದೇವಿಯ ವಿಗ್ರಹವನ್ನು ತಂದು ಗುಡಿ ತುಂಬಿಸಲಾಯಿತು. ಶ್ರೀ ಮಾರಮ್ಮ ದೇವಿಯವರ ಅಷ್ಟ ಬಂದ ಕ್ರಿಯೆ, ಪ್ರಾಣ ಪ್ರತಿಷ್ಠೆ, ಕ್ಷೀರಾಭಿಷೇಕ, ಅಲಂಕಾರ ಮಹಾ ದುರ್ಗ ಹೋಮ, ಕಾಳ ಹೋಮ, ದೃಷ್ಟಿ ಪೂಜೆ, ನೇತ್ರೋಮಿಲನ, ನಾಮಕರಣ ಮಹಾಪುರುಷ ಮಂತ್ರಾಕ್ಷತೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮುಂತಾದ ಧಾರ್ಮಿಕ ಸೇವಾ ಕೈಂಕರ್ಯಗಳು ನಡೆದವು.
ಕಾರ್ಯಕ್ರಮದ ಪ್ರಯುಕ್ತ ದೇವಾಲಯ ಮತ್ತು ಮಾರಮ್ಮ ಅಮ್ಮನವರಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಗ್ರಾಮದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಸಮಸ್ತ ಭಕ್ತಾದಿಗಳು ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು. ಅನ್ನದಾಸೋಹದ ಮೂಲಕ ದೇವಸ್ಥಾನದಲ್ಲಿ ವಿವಿಧ ಪೂಜೆ ಪುನಸ್ಕಾರಗಳು ನಡೆದವು.
ನಂತರ ನಿರುವಗಲ್ ಗ್ರಾಮದ ಜೈ ಭೀಮ್ ಗೆಳೆಯರ ಬಳಗದ ವತಿಯಿಂದ ತುಮಕೂರಿನ ಹೆಸರಾಂತ ಜ್ಯೋತಿ ಮೆಲೋಡಿಸ್ ಆರ್ಕೆಸ್ಟ್ರಾ ಕಾರ್ಯಕ್ರಮವು ಕಣ್ಮನ ಸೆಳೆಯಿತು ಹಾಗೂ ನಿರುವಗಲ್ ಗ್ರಾಮದ ಮಹಿಳೆಯರ ವತಿಯಿಂದ ಮಾರಮ್ಮ ಆಮ್ಮನವರಿಗೆ ಚಿನ್ನದ ಮೂಗೂತಿ ಆರ್ಪಿಸುವ ಮಾಲಕ ತಾಯಿಯ ಕೃಪೆಗೆ ಪತ್ರರಾದರು.
ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ದೇವಸ್ಥಾನದ ಸಮಿತಿ ಪದಾಧಿಕಾರಿಗಳು,ಊರಿನ ಹಿರಿಯ ಯಜಮಾನರು, ನಿರುವಗಲ್ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ: ಮಂಜುನಾಥ ಡಿ ನಿರುವಗಲ್.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.