JANATAA24 NEWS DESK
CN Halli: ತಿಮ್ಮನಹಳ್ಳಿಯಲ್ಲಿ ದಲಿತರಿಗೆ ಆಮಿಷ ನೀಡಿ ಮತಾಂತರ.!

ಚಿಕ್ಕನಾಯಕನಹಳ್ಳಿ: ಕಂದಿಕೆರೆ ಹೋಬಳಿಯ ತಿಮ್ಮನಹಳ್ಳಿ ಗ್ರಾಮದಲ್ಲಿ ದಲಿತರನ್ನು ವಿವಿಧ ಆಮಿಷಗಳ ಮೂಲಕ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಕಾರ್ಯ ನಡೆಯುತ್ತಿದೆ ಎಂಬ ಗಂಭೀರ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.
ಸ್ಥಳೀಯರ ಪ್ರಕಾರ ದಲಿತರ ಅಸಹಾಯಕತೆ, ಬಡತನ ಮತ್ತು ಅಶಿಕ್ಷಣವನ್ನು ದುರುಪಯೋಗಪಡಿಸಿಕೊಂಡು ಕೆಲ ಪಾದ್ರಿಗಳು ಮತ್ತು ಧಾರ್ಮಿಕ ಪ್ರಚಾರಕರು “ಯೇಸು ಕ್ರಿಸ್ತ ಕ್ಯಾನ್ಸರ್ ಕೂಡ ಗುಣಪಡಿಸುತ್ತಾನೆ” ಎಂಬ ಅಧಾರರಹಿತ ಮತ್ತು ತಪ್ಪು ಮಾಹಿತಿ ನೀಡಿ ಜನರನ್ನು ಭ್ರಮೆಗೆ ಒಳಪಡಿಸುತ್ತಿದ್ದಾರೆ.
ಇಷ್ಟೇ ಅಲ್ಲದೇ, ಬಟ್ಟೆ ಹೊಲೆಯುವ ಯಂತ್ರ, ಬಿರಿಯಾನಿ ಹಾಗೂ ಇತರ ಆಹಾರ,ಆರ್ಥಿಕ ನೆರವು, ಇತ್ಯಾದಿ ಆಮಿಷಗಳನ್ನು ಕೊಡುವ ಮೂಲಕ ದಲಿತರನ್ನು ಧರ್ಮಾಂತರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆಪಾದಿಸಲಾಗಿದೆ.
ಯುವಕರಿಗೆ “ಸ್ವರ್ಗ–ನರಕ, ಪಾಪ–ಪುಣ್ಯ” ಎಂಬ ಹೆಸರಿನಲ್ಲಿ ಮಾಯಜಾಲದ ಭಯ ಮತ್ತು ತಪ್ಪು ಭಾವನೆಗಳನ್ನು ಸೃಷ್ಟಿಸಿ, ನಂತರ ವಿವಿಧ ರೀತಿಯಲ್ಲಿ ಹಣ ಸಂಗ್ರಹಿಸುವ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಗ್ರಾಮಸ್ಥರು ಚಿಂತೆಯನ್ನು ವ್ಯಕ್ತಪಡಿಸಿದ್ದಾರೆ.ಹಾಗೂ ಹಿಂದೂ ಧರ್ಮದಲ್ಲಿ ಕೆಟ್ಟ ಅಂಧಚಾರಗಳಿವೆ ಎನ್ನುವ ಧಾಳವನ್ನೇ ಅಸ್ತ್ರ ಮಾಡಿಕೊಂಡು ದಲಿತರನ್ನು ಬಾಬಾ ಸಾಹೇಬರೇ ಮತಾಂತ್ರ ಆಗಿ ಎಂದು ಅಂಬೇಡ್ಕರ್ ಅವರ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.
ಗ್ರಾಮೀಣರು ಅಧಿಕಾರಿಗಳು ಗಮನ ಹರಿಸಿ,
ಧಾರ್ಮಿಕ ಪ್ರೇರಿತ ಸುಳ್ಳುಪ್ರಚಾರ,
ತಪ್ಪು ಭರವಸೆ,
ಆಮಿಷ ನೀಡಿ ಮತಾಂತರ,
ಇವುಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.