Document

CN Halli: ತಾಲೂಕು ಕ್ರೀಡಾಂಗಣದಲ್ಲಿ 70ನೇ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಣೆ

JANATAA24 NEWS DESK 

 

 

CN Halli: ತಾಲೂಕು ಕ್ರೀಡಾಂಗಣದಲ್ಲಿ 70ನೇ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಣೆ.

CN Halli: ತಾಲೂಕು ಕ್ರೀಡಾಂಗಣದಲ್ಲಿ 70ನೇ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಣೆ

ಚಿಕ್ಕನಾಯಕನಹಳ್ಳಿ: ತಾಲೂಕು ಕ್ರೀಡಾಂಗಣದಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ರಾಜ್ಯ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಿ ವಿಜೃಂಭಣೆಯಿಂದ ಆಚರಿಸಲಾಯಿತು.

 

ಕಾರ್ಯಕ್ರಮದಲ್ಲಿ ಶಾಸಕ ಶ್ರೀ ಸಿ.ಬಿ. ಸುರೇಶ್ ಬಾಬು, ತಹಶೀಲ್ದಾರ್ ಶ್ರೀ ಪುರಂದರ, ಪುರಸಭೆ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು, ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

ಕಾರ್ಯಕ್ರಮದ ಆರಂಭದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿತು. ನಂತರ ವಿವಿಧ ಶಾಲಾ ಮಕ್ಕಳಿಂದ ಕನ್ನಡ ಭುವನೇಶ್ವರಿಗೆ ತಾಯಿಗೆ ಸಮರ್ಪಿತ ನೃತ್ಯ, ಗೀತೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸುವ ಮೂಲಕ ಹಬ್ಬದ ವಾತಾವರಣ ನಿರ್ಮಾಣವಾಯಿತು.

 

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಒಂಭತ್ತು ಮಹನೀಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ವಿಜೇತರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಜನರಿಗೆ ಮಾದರಿಯಾದ ಸಾಧನೆಗಾಗಿ ಅಭಿನಂದಿಸಲ್ಪಟ್ಟರು.

 

 

 

ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಮೆರವಣಿಗೆ, ಕನ್ನಡ ಬಣ್ಣಗಳಿಂದ ಮೆರೆಯುವ ವಿದ್ಯಾರ್ಥಿಗಳ ರ‍್ಯಾಲಿ ಹಾಗೂ ಕನ್ನಡ ನಾಡಿನ ಇತಿಹಾಸದ ಪ್ರದರ್ಶನಗಳು ವಿಶೇಷ ಆಕರ್ಷಣೆ ಆಗಿದ್ದವು.

 

ಪ್ರಶಸ್ತಿ ಪುರಸ್ಕೃತರ ರಾದ

ಶ್ರೀ ಸಿ. ಮಲ್ಲಿಕಾರ್ಜುನ ಸ್ವಾಮಿ — ವರದಿಗಾರರು, ಚಿಕ್ಕನಾಯಕನಹಳ್ಳಿ ಪತ್ರಿಕೋದ್ಯಮ ಕ್ಷೇತ್ರ

ಶ್ರೀ ಸಿ. ಗವಿರಂಗಯ್ಯ — ಉಪ ಪ್ರಾಂಶುಪಾಲರು, ಕೆ.ಪಿ.ಎಸ್ ಹುಳಿಯಾರ್ — ಶಿಕ್ಷಣ ಕ್ಷೇತ್ರ

ಶ್ರೀ ಸುರೇಶ್ ಎಚ್.ಎಂ — ಕೃಷಿಕರು, ಹಂದನಕೆರೆ — ಕೃಷಿ ವಿಭಾಗ

ಶ್ರೀಮತಿ ನಾಗವೇಣಿ ಜಿ.ಎಲ್ — ರಾಷ್ಟ್ರಮಟ್ಟದ ಕ್ರೀಡಾಪಟು, ಅರಳಿಕೆರೆ — ಕ್ರೀಡಾ ವಿಭಾಗ

ಕು. ಪ್ರಜ್ವಲ್ ಎನ್.ಡಿ — ರಾಷ್ಟ್ರಮಟ್ಟದ ದೇಹದಾರ್ಢ್ಯ ಕ್ರೀಡಾಪಟು, ನಂದಿಹಳ್ಳಿ — ಕ್ರೀಡಾ ವಿಭಾಗ

ಶ್ರೀ ಲ.ಪು. ಕರಿಯಪ್ಪ — ಹಿರಿಯ ಸಾಹಿತಿ — ಸಾಹಿತ್ಯ ಕ್ಷೇತ್ರ

ಶ್ರೀ ಗವಿರಂಗಯ್ಯ (ಗೌಡಿ) — ಧಾರವಾಹಿ ಕಲಾವಿದರು, ಹುಳಿಯಾರ್ — ಕಲಾ ಕ್ಷೇತ್ರ

ಕು. ಶ್ರೇಯಸ್ ಸಿ.ಎಸ್ — ರಾಜ್ಯಮಟ್ಟದ ಕುಸ್ತಿಪಟು, ಚಿಕ್ಕನಾಯಕನಹಳ್ಳಿ — ಕ್ರೀಡಾ ಕ್ಷೇತ್ರ

ಶ್ರೀ ಪರಮೇಶ್ವರಯ್ಯ ಸಿ.ಎಂ — ರಂಗಭೂಮಿ ಕಲಾವಿದರು, ಚುಂಗನಹಳ್ಳಿ — ರಂಗಭೂಮಿ ಕ್ಷೇತ್ರ

 

ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಲು ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಶ್ರಮಿಸಿದರು.

 

ವರದಿ: ದೇವರಾಜ್ ಆರ್ ಚಿಕ್ಕನಾಯಕನಹಳ್ಳಿ.

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 


Document

Leave a Reply

Your email address will not be published. Required fields are marked *