Document

CN Halli: ಚಿಕ್ಕನಾಯಕನಹಳ್ಳಿಯಲ್ಲಿ ಜಾತಿ ಆಧಾರಿತ ಹಲ್ಲೆ ಕಾರ್ಮಿಕನಿಗೆ ಗಂಭೀರ ಗಾಯ.

JANATAA24 NEWS DESK 

 

 

CN Halli: ಚಿಕ್ಕನಾಯಕನಹಳ್ಳಿಯಲ್ಲಿ ಜಾತಿ ಆಧಾರಿತ ಹಲ್ಲೆ ಕಾರ್ಮಿಕನಿಗೆ ಗಂಭೀರ ಗಾಯ..

CN Halli: Caste-based attack in Chikkanayakanahalli leaves worker seriously injured..

ಚಿಕ್ಕನಾಯಕನಹಳ್ಳಿ:  ಜಾತಿ ಆಧಾರಿತ ಹಲ್ಲೆಯೊಂದು ದಿನಾಂಕ 31/10/2025 ರಂದು ನಡೆದಿದೆ. ಕುಪ್ಪೂರು ತಮ್ಮಡಿಹಳ್ಳಿಯ ಎ.ಕೆ. ಕಾಲೊನಿ ನಿವಾಸಿ ಕಿರಣ್ ಕುಮಾರ್ (32) ಎಂಬ ಗಾರೆ ಕೆಲಸಗಾರನ ಮೇಲೆ ಚಿಕ್ಕನಾಯಕನಹಳ್ಳಿ ಪಟ್ಟಣದ ಹೊಸಬೀದಿಯ ಗುರುಮೂರ್ತಿ, ಕುಮಾರ ಹಾಗೂ ಅವರ ಸಹಚರರು ಹಲ್ಲೆ ನಡೆಸಿದ ಘಟನೆ ಅಕ್ಟೋಬರ್ 31ರ ರಾತ್ರಿ 8: 30ರ ಸಮಯದಲ್ಲಿ ನಡೆದಿದೆ ಎನ್ನುತ್ತಿದ್ದಾರೆ ಹಲ್ಲೆಗೊಳಗಾದ ಕಿರಣ್.

 

ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿರುವ ಮತಿಘಟ್ಟದ ಗೇಟ್ ಬಳಿಯ” ಜನಪ್ರಿಯ ಹೋಟೆಲ್‌”ನಲ್ಲಿ ಊಟ ಮಾಡಲು ಹೋದ ಕಿರಣ , ರಮೇಶ ಹಾಗೂ ಅವನ ಸ್ನೇಹಿತ ಪ್ರಭು ಹೋಟೆಲ್‌ನಲ್ಲಿ ಊಟಕ್ಕೆ ಕುಳಿತಿದ್ದಾಗ, ಹಲ್ಲೆ ಮಾಡಿದ ಗುರು ಮೂರ್ತಿ ಈ ಮೂರು ಜನರ ಉಡುಪು ನೋಡಿ ಯಾವ ಜಾತಿ, ಯಾವ ಊರು ಎಂದು ವಿಚಾರಿಸಿ, ಮಾದಿಗ ಹಾಗೂ ನಾಯಕ ಜಾತಿಯವರಾಗಿದ್ದಾರೆಂದು ತಿಳಿದ ಕೂಡಲೇ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಕೆಟ್ಟ ಪದಗಳನ್ನು ಜಾತಿಯ ಬಗ್ಗೆ ಕೀಳಾಗಿ ಬಳಸಿದ್ದಕ್ಕೆ ವಿರೋಧ ವ್ಯಕ್ತ ಪಡಿಸಿದ ರಮೇಶ್ ಮೇಲೆ, ರಮೇಶ್ ನನ್ನು ಹಲ್ಲೆ ಮಾಡಲು ಮುಂದಾಗಿದ್ದರು, ಬಿಡಿಸಲು ಬಂದ ಕಿರಣ್ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.

 

ಈ ವೇಳೆ ಆರೋಪಿಗಳು ಸೆಂಟ್ರಿಂಗ್ ರಾಡ್‌ನಿಂದ ಕಿರಣ್ ಕುಮಾರ್ ಅವರ ಕಾಲು, ಪಕ್ಕೆಲುಬು, ತಲೆ, ಕಿವಿ ಹಾಗೂ ಮೂಗು ಮೇಲೆ ಬಲವಾಗಿ ಹೊಡೆದು ಗಂಭೀರ ಗಾಯಗಳಾಗುವಂತೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡುತಿದ್ದಕ್ಕೆ ಹೆದರಿ ರಮೇಶ್ ಮತ್ತು ಪ್ರಭು ಕಿರುಚುತ್ತಾ ಓಡಿದ್ದಾರೆ. ಸುತ್ತಲೂ ಜನರು ಸೇರಿದಾಗ ಆರೋಪಿಗಳು ಕಿರಣ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಬೈಕ್ ಹತ್ತಿ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಗಾಯಗೊಂಡ ಕಿರಣ್ ಅವರನ್ನು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

 

ಹೋಟೆಲ್ ಸುತ್ತಮುತ್ತ CCTV ಕ್ಯಾಮೆರಾಗಳಲ್ಲಿ ಘಟನೆ ದಾಖಲಾಗಿರುವ ಸಾಧ್ಯತೆ ಇದ್ದು, ಕಿರಣ್ ಕುಮಾರ್ ಅವರು ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರೂ ಹಾಗೂ MLC ಆಗಿ 12 ದಿನಗಳು ಕಳೆದರೂ FIR ದಾಖಲಿಸದೆ ದಲಿತರೆಂಬ ಕಾರಣಕ್ಕೆ ಹಾಗೂ ಆರೋಪಿಗಳು ಪ್ರಭಾವಿಗಳು ಎಂದು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

 

ಪೀಡಿತರು SC/ST ಅಟ್ಟ್ರಾಸಿಟೀಸ್ ಕಾಯ್ದೆ ಹಾಗೂ BNS ಅಡಿ ಕಾನೂನು ಕ್ರಮ ಕೈಗೊಳ್ಳಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತುಮಕೂರು ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್‌ರಿಗೆ ದೂರು ನೀಡಿದ್ದಾರೆ.

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.


Document

Leave a Reply

Your email address will not be published. Required fields are marked *