JANATAA24 NEWS DESK
CN Halli: ಲೆಕ್ಕಾಚಾರಕ್ಕೆ ಮಾತ್ರ ಸೀಮಿತವಾದ ಅಂಬೇಡ್ಕರ್ ಕಟ್ಟಡ,10 ವರ್ಷಗಳು ಕಳೆದರು ಸಿಕ್ಕಿಲ್ಲ ಉದ್ಘಾಟನೆ ಭಾಗ್ಯ.ಅಧಿಕಾರಿಗಳ ಕೈಯಲ್ಲಿದೆಯಾ ಭ್ರಷ್ಟಾಚಾರದ ಆರೋಪ..

ಚಿಕ್ಕನಾಯಕನಹಳ್ಳಿ: ಚಿಕ್ಕನಾಯನಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿ, ಮೇಲನಹಳ್ಳಿ ಗ್ರಾಮದಲ್ಲಿ
2005–06ರ ನೆಯ ಸಾಲಿನಲ್ಲಿ ಶಾಸಕರ ಅನುದಾನದಲ್ಲಿ ಅರೆಬರೆಯಾಗಿ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಭವನ, 10 ವರ್ಷಗಳು ಮಾಸಿದರು 3 ಬಾರಿ ಚುನಾವಣೆಯಾಗಿ 3 ಸರ್ಕಾರಗಳು ಬದಲಾದರೂ ದಲಿತರ ಅಭಿವೃದ್ಧಿಗೆ ಎಂದು ಕಟ್ಟಿಸಲಾದ ಅಂಬೇಡ್ಕರ್ ಭವನ ಮಾತ್ರ ಅವೈಜ್ಞಾನಿಕ, ಕಳಪೆ ಗುಣಮಟ್ಟ ಹಾಗೂ ಭ್ರಷ್ಟಾಚಾರದ ಕೂಪದಲ್ಲಿ ಅಂಬೇಡ್ಕರ್ ಭವನ ಅರ್ಧಕ್ಕೆ ನಿಂತಿದೆ. ಸಾಂಸ್ಕೃತಿಕ ಚಟುವಟಿಕೆಗಳಿಗೆ,ಸಂಘ ಸಂಸ್ಥೆಗಳಿಗೆ ಆಸರೆಯಾಗಬೇಕಿದ್ದ ಭವನವು ಅಧಿಕಾರಿಗಳ ಬೇಜವಾಬ್ದಾರಿ ಇಂದ ಹಾಳು ಬಿದ್ದಂತಾಗಿದೆ.ದಲಿತರ ಹೆಸರಲ್ಲಿ ಹಣ ಬಿಡುಗಡೆ ಮಾಡಿ ಅಭಿವೃದ್ಧಿಯ ಕನಸ ತೋರಿಸಿ ವ್ಯವಸ್ಥಿತವಾಗಿ ಅನುದಾನ ದೋಚಿದ ಸಾಕ್ಷಿಯಾಗಿ ಕಾಣುತ್ತಿದೆ ಎನ್ನುತ್ತಿದ್ದಾರೆ ಗ್ರಾಮಸ್ಥರು.
2005–06ನೇ ಸಾಲಿನಲ್ಲಿ SCSP/TSP ಅನುದಾನದಡಿ ದಲಿತ ಸಮುದಾಯದ ಶೈಕ್ಷಣಿಕ-ಸಾಂಸ್ಕೃತಿಕ ಚಟುವಟಿಕೆಗಳಿಗೆಂದು ನಿರ್ಮಾಣವಾಗಿದೆ ಎಂದು ದಾಖಲೆಗಳಲ್ಲಿ ಹೇಳಲಾಗುವ ಅಂಬೇಡ್ಕರ್ ಭವನ, ಇಂದು ಕಣ್ಣಿಗೆ ಕಾಣುವ ಸತ್ಯದಲ್ಲಿ ಕೇವಲ ತೋರಿಕೆಗೆ ನಿರ್ಮಾಣಗೊಂಡ ಭ್ರಷ್ಟಾಚಾರದ ಅವಶೇಷವಾಗಿ ನಿಂತಿದೆ.
ಸರ್ಕಾರಿ ದಾಖಲೆಗಳಲ್ಲಿ “ಪೂರ್ಣಗೊಂಡ ಕಟ್ಟಡ” ಎಂದು ಬಿಲ್ ಆಗಿರುವ ಈ ಅಂಬೇಡ್ಕರ್ ಭವನ, ವಾಸ್ತವದಲ್ಲಿ ಇಂದಿಗೂ ಅಪೂರ್ಣ, ಜೀರ್ಣಾವಸ್ಥೆಯಲ್ಲಿದ್ದು, ಯಾವ ಕ್ಷಣದಲ್ಲಾದರೂ ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಇದು ಕೇವಲ ನಿರ್ಲಕ್ಷ್ಯದ ಫಲವಲ್ಲ, ಇದು ವ್ಯವಸ್ಥಿತವಾಗಿ ದಲಿತರ ಹೆಸರಿನಲ್ಲಿ ಹಣ ದೋಚಿದ ಆಡಳಿತಾತ್ಮಕ ಅಪರಾಧ.
ಕಟ್ಟಡ ನಿರ್ಮಾಣದ ಮೂಲ ಉದ್ದೇಶವೇ ದಲಿತ ಸಮುದಾಯಕ್ಕೆ ಸಭೆ, ಶಿಕ್ಷಣ,ಸಾಂಸ್ಕೃತಿಕ ಚಟುವಟಿಕೆ ಗಳು, ಸಂಘಟನೆಗೆ ವೇದಿಕೆ ಒದಗಿಸುವುದು. ಆದರೆ ವಾಸ್ತವದಲ್ಲಿ, ಈ
ಕಟ್ಟಡವನ್ನು ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಇಂಜಿನಿಯರ್‌ಗಳು ಪೂರ್ಣಗೊಳಿಸಿಲ್ಲ,ಬಣ್ಣವಿಲ್ಲ,
ವಿದ್ಯುತ್ ಸಂಪರ್ಕವೇ ಇಲ್ಲ,
ನೆಲ ಹಾಸಿಗೆ, ಶೌಚಾಲಯ, ಮೂಲ ಸೌಕರ್ಯಗಳೇ ಇಲ್ಲ,
ಇಂತಹ ಸ್ಥಿತಿಯಲ್ಲಿರುವ ಕಟ್ಟಡವನ್ನು ಸಮಾಜ ಕಲ್ಯಾಣ ಇಲಾಖೆ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸದೇ ಕೈಬಿಟ್ಟಿದೆ.
ಇದಕ್ಕಿಂತಲೂ ಆತಂಕಕಾರಿ ವಿಷಯವೆಂದರೆ, ಕಟ್ಟಡವೇ ಪೂರ್ಣವಾಗದೇ ಇರುವ ಸಂದರ್ಭದಲ್ಲಿ SCSP/TSP ಅನುದಾನದಲ್ಲಿ ಸುಣ್ಣ ಬಣ್ಣ ಒಡೆಯಲು ಗ್ರಾಮ ಪಂಚಾಯತಿಗೆ ಪತ್ರ ವ್ಯವಹಾರ ನಡೆಸಿ ಸೂಚನೆ ನೀಡಿರುವುದು ಇದು ಅಭಿವೃದ್ಧಿಯೇ? ಅಥವಾ ದಾಖಲೆಗಳಲ್ಲಿ ಹಣ ಮುಗಿದಂತೆ ತೋರಿಸಿ, ನೆಲಮಟ್ಟದಲ್ಲಿ ದಲಿತರ ಬದುಕನ್ನು ಮರೆತ ಆಡಳಿತದ ನಾಟಕವೇ?ಎಂಬ ಪ್ರಶ್ನೆ ಮೂಡಿಸುತ್ತಿದೆ.
SCSP/TSP ಯೋಜನೆಗಳು ಸಂವಿಧಾನಾತ್ಮಕ ಹಕ್ಕು. ಡಾ. ಬಿ.ಆರ್. ಅಂಬೇಡ್ಕರ್ ರವರ ಹೆಸರಿನಲ್ಲಿ ನಿರ್ಮಾಣವಾಗುವ ಈ ಭವನವೇ ಇಂದು ಅವಮಾನಕ್ಕೆ ಒಳಗಾಗಿರುವುದು, ಸಂವಿಧಾನದ ಆತ್ಮಕ್ಕೆ ಮಾಡಿದ ದ್ರೋಹ.
ದಲಿತರ ಹೆಸರಿನಲ್ಲಿ ಬಿಡುಗಡೆಯಾದ ಲಕ್ಷಾಂತರ ರೂಪಾಯಿ ಹಣ ಎಲ್ಲಿ ಹೋಯಿತು?
ಈ ಪ್ರಕರಣವು ಕೇವಲ ಒಂದು ಕಟ್ಟಡದ ಕಥೆಯಲ್ಲ.
ಸಾರ್ವಜನಿಕ ಹಣದ ದುರ್ಬಳಕೆ,
ಅಧಿಕಾರಿಗಳ ನಿರ್ಲಕ್ಷ್ಯ,
ಗುತ್ತಿಗೆದಾರ-ಇಂಜಿನಿಯರ್‌ಗಳ ಸಂಚು
ಮತ್ತು ದಲಿತ ಅಭಿವೃದ್ಧಿ ಯೋಜನೆಗಳ ಮೇಲಿನ ವ್ಯವಸ್ಥಿತ ವಂಚನೆ ಎಂದು ಮೇಲನಹಳ್ಳಿ ಕೆಂಚಯ್ಯನವರು ಆಕ್ರೋಶ ಹೊರಹಾಕಿದರು.
ಇಂತಹ ಘಟನೆಗಳಿಗೆ ಉತ್ತರದಾಯಿತ್ವ ಕೇಳದಿದ್ದರೆ, ಅಂಬೇಡ್ಕರ್ ಭವನಗಳು ಕೇವಲ ಹೆಸರಿನ ಫಲಕಗಳಾಗಿ, ದಲಿತ ಅಭಿವೃದ್ಧಿ ಕೇವಲ ಕಾಗದದ ಕನಸಾಗಿ ಉಳಿಯುತ್ತದೆ.ಇದರ
ಸಂಪೂರ್ಣ ತನಿಖೆ ನಡೆಯಬೇಕು,
ಹೊಣೆಗಾರ ಅಧಿಕಾರಿಗಳು, ಗುತ್ತಿಗೆದಾರರು, ಇಂಜಿನಿಯರ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು,
ದುರ್ಬಳಕೆಯಾದ ಹಣವನ್ನು ವಸೂಲಿಸಿ ಕಟ್ಟಡವನ್ನು ತಕ್ಷಣ ಪೂರ್ಣಗೊಳಿಸಬೇಕು,
ಮತ್ತು ದಲಿತ ಸಮುದಾಯದ ಸಾರ್ವಜನಿಕ ಬಳಕೆಗೆ ಒಪ್ಪಿಸಬೇಕು.
ಅಂಬೇಡ್ಕರ್ ಭವನ ಬೀಳುವ ಹಂತದಲ್ಲಿರುವುದು ಕೇವಲ ಕಟ್ಟಡದ ಸಮಸ್ಯೆಯಲ್ಲ,
ಅದು ನಮ್ಮ ಆಡಳಿತ ವ್ಯವಸ್ಥೆ ಎಷ್ಟು ಕುಸಿದಿದೆ ಎಂಬುದರ ಜೀವಂತ ಸಾಕ್ಷಿ ಎಂದು DSS ಸಂಚಾಲಕರು ಆದ ಯರೆಕಟ್ಟೆ ರಮೇಶ ಅವರು ಆಗ್ರಹಿಸಿದ್ದಾರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.