- Janataa24 NEWS DESK
Chikkamagaluru: ಕಂಕಣ ಭಾಗ್ಯ ಕಲ್ಪಿಸುವಂತೆ ದೇವರ ಹುಂಡಿಗೆ ಪತ್ರ ಹಾಕಿದ ಅವಿವಾಹಿತ ಯುವಕರು

ಚಿಕ್ಕಮಗಳೂರು: ವಯಸ್ಸು ಮೂವತ್ತು ದಾಟಿದರು ಮದುವೆ ಆಗಿಲ್ಲ. ಎಲ್ಲಿ ಸುತ್ತಿದರು ವದು ಸಿಗುತ್ತಿಲ್ಲ ಎಂದು ಬೇಸತ್ತ ಮೂವತ್ತು ಯುವಕರು ದೇವರ ಹುಂಡಿಗೆ ವಿನಂತಿ ಪತ್ರ ಹಾಕಿದ ಘಟನೆ ಚಿಕ್ಕಮಗಳೂರಿನಲ್ಲಿ ನಡಿದಿದೆ. ಸುಖ ಪ್ರಾಪ್ತಿ, ಸಂತಾನ ಭಾಗ್ಯ, ಅಶಾಂತಿ ನಿವಾರಣೆ, ವಿಘ್ನ ನಾಶ ಇತ್ಯಾದಿ ಸಮಸ್ಯೆಗಳಿಗೆ ಜನರು ದೇವರ ಮೊರೆ ಹೋಗುವುದು ಉಂಟು. ಅಷ್ಟೇ ಅಲ್ಲದೆ,
ಇತ್ತೀಚಿನ ದಿನಗಳಲ್ಲಿ ಯುವಕರು ತಮಗೆ ಕನ್ಯೆ ಸಿಗುತ್ತಿಲ್ಲವೆಂದು ಕೊರಗುವುದುಂಟು. ಹೀಗಿದ್ದಾಗ ಮದುವೆ ಭಾಗ್ಯಕ್ಕಾಗಿ ದೇವರಿಗೆ ಹರಕೆ ಹೊತ್ತುಕೊಳ್ಳುವುದನ್ನು ನೋಡಿದ್ದೇವೆ. ದೇವರಿಗೆ ಪತ್ರ ಬರೆಯುವುದು ಕೂಡ ನೋಡಿದ್ದೇವೆ. ವರ್ಷಕ್ಕೊಮ್ಮೆ ದೇವರ ಕಾಣಿಕೆ ಹುಂಡಿಯ ಬೀಗ ತೆರೆದಾಗ ನೋಟು, ಚಿಲ್ಲರೆಯ ಜೊತೆಗೆ ಒಂದಷ್ಟು ಪ್ರೇಮ ನಿವೇದನಾ ಪತ್ರ, ಮದುವೆ ಭಾಗ್ಯ ಕರುಣಿಸುವ ಪತ್ರವೂ ಕಾಣ ಸಿಗುತ್ತವೆ. ಇದೀಗ, ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಬ್ಯಾಡಿಗೆರೆ ಗ್ರಾಮದ ಯುವಕರು ತಮಗೆ ಮದುವೆ ಭಾಗ್ಯ ಕರುಣಿಸೋ ಭಗವಂತ ಎಂದು ದೇವರಿಗೆ ತಮ್ಮ ಹೆಸರುಗಳನ್ನು ಬರೆದು ಕಾಣಿಕೆ ಹುಂಡಿಗೆ ಹಾಕಿದ್ದಾರೆ.
ಹೌದು ಚಿಕ್ಕಮಗಳೂರು(Chikkamagaluru) ಜಿಲ್ಲೆಯ ಬ್ಯಾಡಿಗೆರೆ ಗ್ರಾಮದ 30ಕ್ಕೂ ಹೆಚ್ಚು ಯುವಕರು ತಮಗೆ 35 ವರ್ಷ ದಾಟಿದರೂ ಮದುವೆಯಾಗಿಲ್ಲ ಚಿಂತೆಯಲ್ಲಿದ್ದಾರೆ. ಎಷ್ಟೇ ಹುಡುಕಾಡಿದರೂ ಹೆಣ್ಣು ಕೊಡಲು ಒಪ್ಪುತ್ತಿಲ್ಲ ಎನ್ನುತ್ತಿದ್ದಾರೆ. ಕೊನೆಗೆ ಮದುವೆ ಭಾಗ್ಯ ಕರುಣಿಸೋ ಭಗವಂತ ಎಂದು ಯುವಕರು ಕಾಗದದಲ್ಲಿ ತಮ್ಮ ಹೆಸರುಗಳನ್ನ ಬರೆದು ಹುಂಡಿಗೆ ಹಾಕಿದ್ದಾರೆ ತಮ್ಮ ಕಷ್ಟವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬ್ಯಾಡಿಗೆರೆ ಗ್ರಾಮದಲ್ಲಿ ಮದುವೆ (Marrige) ಆಗದೆ ಉಳಿದ ಸುಮಾರು ಮೂವತ್ತರಿಂದ ಮೂವತ್ತೆಂಟು ವರ್ಷದ ಯುವಕರಿದ್ದಾರೆ. ಬ್ಯಾಡಿಗೆರೆ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿ, ಶ್ರೀ ಅಜ್ಜಯ್ಯ ಸ್ವಾಮಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಜಾತ್ರಾ ಮಹೋತ್ಸವ ನಡೆಯಿತು. ಈ ವೇಳೆ ಮದುವೆ ಆಗಲೆಂದು ಜಾತ್ರೆಯಲ್ಲಿ ಹೆಸರುಗಳನ್ನ ಬರೆದು ಹುಂಡಿಗೆ ಹಾಕಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ.
ಊರಿನ ಮುಖ್ಯಸ್ಥರು ಹಾಗೂ ಪರದೇಶಪ್ಪನ ಮಠದ ಗುರುಗಳಾದ ಮಧುಕುಮಾರ್ ಶಾಸ್ತ್ರಿ ಸುಮಾರು 30ಕ್ಕೂ ಹೆಚ್ಚು ಬ್ರಹ್ಮಚಾರಿ ಯುವಕರ ಹೆಸರುಗಳನ್ನ ಪಟ್ಟಿ ಮಾಡಿ, ಆದಷ್ಟು ಬೇಗ ಹುಡುಗಿ ಸಿಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿ ಯುವಕರ ಪಟ್ಟಿಯನ್ನು ಕಾಣಿಕೆ ಹುಂಡಿಗೆ ಹಾಕಿ ಇನ್ನೊಂದು ಪಟ್ಟಿಯನ್ನು ಪರದೇಶಪ್ಪನ ಮಠಕ್ಕೆ ಕಳುಹಿಸಿದ್ದಾರೆ.
ಸುಗ್ಗಿ-ಜಾತ್ರಾ ಮಹೋತ್ಸವದ 4ನೇ ದಿನ ಈ ಕಾರ್ಯ ಮಾಡಲಾಗಿದೆ. ಎಷ್ಟೆ ಹುಡುಕಿದರೂ ಹುಡುಗಿ ಸಿಗುತ್ತಿಲ್ಲ. ವಯಸ್ಸು ಹೆಚ್ಚಾಗುತ್ತಿದೆ. ನಮ್ಮೆಲ್ಲರಿಗೂ ಮದುವೆ(Marriage) ಭಾಗ್ಯ ಕರುಣಿಸೋ ದೇವ ಎಂದು ಬೇಡಿಕೊಂಡಿದ್ದಾರೆ. ಒಂದು ವೇಳೆ ನಮಗೆ ಹುಡುಗಿ ಸಿಗದಿದ್ದರೆ ಮಠ ಸೇರಿಕೊಳ್ಳುವುದಾಗಿ ಪರದೇಶಪ್ಪ ಮಠದ ಗುರುಗಳಾದ ಮಧುಕುಮಾರ್ ಶಾಸ್ತ್ರಿಯವರಿಗೆ ಹೇಳುವ ಮೂಲಕ ಯುವಕರು ಅರ್ಚಕರಿಗೆ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
Lokasabha Election: ರಾಜ್ಯ ಬಿಜೆಪಿಯವರಿಂದ ಕುರ್ಚಿ ಬೇಡ ಮೈಕ್ ಬೇಡ ಅಭಿಯಾನಕ್ಕೆ ಚಾಲನೆ.