Document

Chamarajanagara : ಸುನೀಲ್ ಬೋಸ್ ವಿರುದ್ದ ಗೋ ಬ್ಯಾಕ್ ಪೋಸ್ಟರ್ ಚಾಮರಾಜನಗರದಲ್ಲಿ ಪ್ರತ್ಯಕ್ಷ .

Janataa24 NEWS DESK

Chamarajanagara : ಸುನೀಲ್ ಬೋಸ್ ವಿರುದ್ದ ಗೋ ಬ್ಯಾಕ್ ಪೋಸ್ಟರ್ ಚಾಮರಾಜನಗರದಲ್ಲಿ ಪ್ರತ್ಯಕ್ಷ .

Chamarajanagara Sunil Bose Go Back

ಚಾಮರಾಜನಗರ : ರಾಜ್ಯ ಸರ್ಕಾರದ ಪ್ರಭಾವಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ ಮಹಾದೇವಪ್ಪ ನವರು ಹೈಕಮಾಂಡ್ ಬಳಿ ಲಾಭಿ ಮಾಡಿ ತಮ್ಮ ಪುತ್ರ ಸುನೀಲ್ ಬೋಸ್ (Sunil Bose)ಗೆ ಟಿಕೆಟ್ ಗಿಟ್ಟಿಸಿಕೊಂಡು ಚಾಮರಾಜನಗರದಿಂದ ಕಣಕ್ಕೆ ಇಳಿಸಿದ್ದಾರೆ.

ಲೋಕ ರಣರಂಗಕ್ಕೆ ಕಾಲಿಟ್ಟ ಹೊತ್ತಲ್ಲೆ ವರಿಷ್ಠರ ಬಳಿ ಸರ್ಕಸ್ ಮಾಡಿ ಟಕೆಟ್ ಪಡೆದು ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಅಲ್ಲಿನ ಸ್ಥಳೀಯರು ಅಭ್ಯರ್ಥಿ ವಿರುದ್ದ ಗೋ ಬ್ಯಾಕ್(Go Back ) ಪೋಸ್ಟರ್ ಅಂಟಿಸುವ ಮೂಲಕ ಆಘಾತ ನೀಡಿದ್ದಾರೆ.

ನಾಮಪತ್ರ ಸಲ್ಲಿಸುವ ವೇಳೆ ಸುನೀಲ್ ಬೋಸ್ ವಿರುದ್ದ ಮರಳು ಮಾಫಿಯಾದವರಿಗೆ ಬಲಿಯಾಗಬೇಡಿ ಎಂಬ ತಲೆಬರಹದ ಪೋಸ್ಟರ್ ಗಳು ನಗರದ ಎಲ್ಲೆಡೆ ಪ್ರತ್ಯಕ್ಷ ಗೊಂಡಿವೆ. ಪೋಲಿಸರ ಗಮನಕ್ಕೆ ಬಂದ ಬಳಿಕ ಪೋಲಿಸರು ಪೋಸ್ಟರ್ ಗಳನ್ನು ತೆರವುಗೊಳಿಸಲು ಮುಂದಾದರು.

ಈ ಪೋಸ್ಟರ್ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅಭ್ಯರ್ಥಿ ಇದು ಬಿಜೆಪಿಯವರು ತನ್ನ ಶಕ್ತಿ ಸಾಮಾರ್ಥ್ಯ ನೋಡಿ ಬೆಚ್ಚಿ ಬಿದ್ದು ತನ್ನ ಹೆಸರು ಕೆಡಿಸಲು ಮಾಡಿರುವ ವುನ್ನಾರ. ಮರಳು ಮಾಫಿಯ ಕುರಿತು ಕೋರ್ಟ್ ನಲ್ಲಿ ಕೇಸ್ ಕ್ಲಿನ್ ಚಿಟ್ ಆಗಿದೆ ಆದರೇ ಇಲ್ಲ ಸಲ್ಲದ್ದು ಅಪ್ರಚಾರ ಮಾಡುತ್ತಿದ್ದಾರೆ.ತನ್ನ ಕುರಿತು ಅರೋಪ ತೋರಿಸಲಿ ನಾನು ನಾಮಪತ್ರವೇ ಸಲ್ಲಿಸುವುದಿಲ್ಲ ಎಂದು ಬಿಜೆಪಿಯವರಿಗೆ ಟಾಂಗ್ ಕೊಟ್ಟರು.

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

Bangalore : ಬೆಂಗಳೂರಿನಲ್ಲಿ ಹೆಚ್ಚುತ್ತಿರುವುದು ಕಾಲರಾ ಸೋಂಕು ಎಚ್ಚರ..!

Document

Leave a Reply

Your email address will not be published. Required fields are marked *