Document

Caste Census: ಜಾತಿ ಕಾಲಂ ನಲ್ಲಿ ಒಕ್ಕಲಿಗ ಎಂದು ನಮೂದಿಸಿ– ಬಿಎಸ್ ನಾಗರಾಜು.

Janataa24 NEWS DESK 

 

Caste Census: ಜಾತಿ ಕಾಲಂ ನಲ್ಲಿ ಒಕ್ಕಲಿಗ ಎಂದು ನಮೂದಿಸಿ– ಬಿಎಸ್ ನಾಗರಾಜು.
Caste Census: ಜಾತಿ ಕಲಾಂ ನಲ್ಲಿ ಒಕ್ಕಲಿಗ ಎಂದು ನಮೂದಿಸಿ– ಬಿಎಸ್ ನಾಗರಾಜು.
ಗುಬ್ಬಿ : ಜಾತಿ ಕಾಲಂ ನಲ್ಲಿ ಧರ್ಮವನ್ನು ಹಿಂದು ಎಂದು ಹಾಗೂ ಜಾತಿಯನ್ನು ಒಕ್ಕಲಿಗ ಎಂದು ಬರೆಸುವ ಮೂಲಕ ಸಮುದಾಯದ ಒಗ್ಗಟ್ಟಿನ ಪ್ರದರ್ಶನವನ್ನು ಮಾಡಬೇಕಾಗಿದೆ ಎಂದು ಜೆಡಿಎಸ್ ಮುಖಂಡ ಬಿಎಸ್ ನಾಗರಾಜು ತಿಳಿಸಿದರು.

 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಾತಿಗಣತಿ ಜಾಗೃತಿ ಕರ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು ಚುಂಚನಗಿರಿ ಶ್ರೀಮಠದ ಶ್ರೀಗಳು ಕರೆದಿದ್ದಂತಹ ಒಕ್ಕಲಿಗರ ಸಭೆಯಲ್ಲಿ ರಾಜಕೀಯವನ್ನು ಬದಿಗೊತ್ತಿ ನಾವೆಲ್ಲರೂ ಒಂದೇ ಒಗ್ಗಟ್ಟಿನಲ್ಲಿ ಬಲವಿದೆ ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಮಾತಿನಂತೆ ಒಟ್ಟಾಗಿ ಇರಬೇಕು ಎಂದು ಮಾಹಿತಿಯನ್ನು ನೀಡಿದ್ದಾರೆ ಅದೇ ರೀತಿಯಲ್ಲಿ ಗುಬ್ಬಿ ತಾಲೂಕಿನ ಎಲ್ಲಾ ಒಕ್ಕಲಿಗ ಸಮುದಾಯವು ಸಹ ಹಿಂದೂ ಧರ್ಮವು ಒಕ್ಕಲಿಗ ಜಾತಿ ಎಂದು ನಮೂದಿಸುವ ಮೂಲಕ ಮುಂದಿನ ಶೈಕ್ಷಣಿಕ ಹಾಗೂ ಸಾಮಾಜಿಕ ವಾಗಿ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಸಹಯಕಾರಿಯಾಗಿರುತ್ತದೆ ಎಂದು ತಿಳಿಸಿದರು.

 

ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೊಕೇಶ್ ಮಾತನಾಡಿ ಸರ್ಕಾರ ಕೇವಲ 15 ದಿನದಲ್ಲಿ ಜಾತಿಗಣತಿ ಮುಗಿಸುವಂತೆ ಹೇಳಿದ್ದು ಇದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ನವರಾತ್ರಿ ಹಬ್ಬದ ಸಂಭ್ರಮ ಹಾಗೂ ಶಾಲೆಗಳಿಗೆ ರಜೆ ಇರುವುದರಿಂದ ಸಾಕಷ್ಟು ಮನೆಯವರು ಇರುವುದಿಲ್ಲ ಇಂತಹ ಸಂದರ್ಭದಲ್ಲಿ ಸರಕಾರ ಇಂತಹ ವಿಚಾರದಲ್ಲಿ ಮತ್ತೊಮ್ಮೆ ಪರಿಶೀಲನೆ ಮಾಡಬೇಕು . ಇನ್ನು ಜಾತಿ ಗಣತಿಗೆ ನಿಮ್ಮ ಮನೆ ಬಾಗಿಲಿಗೆ ಬಂದಂತಹ ಸಂದರ್ಭದಲ್ಲಿ ನಮ್ಮ ಒಕ್ಕಲಿಗ ಸಮುದಾಯದವರು ಹಿಂದೂ ಧರ್ಮ ಹಾಗೂ ಜಾತಿಯನ್ನು ಒಕ್ಕಲಿಗ ಎಂದೇ ನಮೂದಿಸಬೇಕು ಎಂದು ಮನವಿ ಮಾಡಿದರು.

 

ಮುಖಂಡರಾದ ಭೈರಪ್ಪ ಹಾಗೂ ಬ್ಯಾಟರಂಗೆ ಗೌಡ ಮಾತನಾಡಿ ಈ ಒಂದು ವಿಷಯದಲ್ಲಿ ನಮ್ಮೆಲ್ಲಾ ನಾಯಕರುಗಳು ಸಹ ಒಂದಾಗಿ ಜಾತಿಗಣತಿ ಸಮೀಕ್ಷೆಯಲ್ಲಿ ನಾವೆಲ್ಲರೂ ನಮ್ಮ ಶಕ್ತಿಯನ್ನು ತೋರಿಸಬೇಕಾಗಿದೆ ಎಂದು ವಿನಂತಿ ಮಾಡಿದರು.

 

ಈ ಸಂದರ್ಭದಲ್ಲಿ ಒಕ್ಕಲಿಗ ಸಂಘದ ಮಾಜಿ ಅಧ್ಯಕ್ಷ ಕರಿಯಪ್ಪ, ಮುಖಂಡರಾದಪಟ್ಟಣ ಲೋಕೇಶ್, ಸೋಮಣ್ಣ,ರಘು,ರಂಗನಾಥ್, ಲೋಕೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

 

ವರದಿ :ಶ್ರೀಕಾಂತ್ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *