JANATAA24 NEWS DESK
By-Election: ಬಾಗಲಕೋಟೆ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಆಪ್ತನಿಗೆ ಆಪರೇಷನ್ ಕಮಲದಿಂದ ಗಾಳ.

ಮಾಜಿ ಸಚಿವ ಎಚ್ ವಾಯ್ ಮೇಟಿ ಅವರ ನಿಧಾನದಿಂದ ತೆರವಾಗಿದ್ದ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರಕ್ಕೆ ಉಪಚುನಾವನೆ ಏಪ್ರಿಲ್ 9 ಕ್ಕೆ ಮತದಾನ ನಡೆಯಲಿದ್ದು ಬಾಗಲಕೋಟೆ ಮತಕ್ಷೇತ್ರ ಜಿದ್ದಾಜಿದ್ದಿ ಕಾಣವಾಗಿ ಮಾರ್ಪಟ್ಟಿದೆ.. ಕಾಂಗ್ರೆಸ್ ನಲ್ಲಿಯೇ ಇದ್ದ ಯುವ ಮುಖಂಡ ಹಾಗೂ ಚಿಕ್ಕ ಮಕ್ಕಳ ತಜ್ಞ ದೇವರಾಜ್ ಪಾಟೀಲ್ ಎರಡು ಬಾರಿ ವಿಧಾನಸಭಾ ಚುನಾವನೆಗೆ ಟಿಕೆಟ್ ಗಾಗಿ ಸ್ಪರ್ಧೆ ಮಾಡಿ ಬಾದಾಮಿ ಮತಕ್ಷೇತ್ರಕ್ಕೆ ಚಿಮ್ಮಣಕಟ್ಟಿಯವರಿಗೆ ಟಿಕೆಟ್ ಬಿಟ್ಟುಕೊತ್ತಿದ್ದನ್ನು ಸ್ಮರಿಸಬಹುದು. ಇಷ್ಟಾದರೂ ಎರಡನೇ ಬಾರಿಗೆ 2023 ರಲ್ಲಿ ಸ್ಪರ್ಧೆ ಗೆ ಟಿಕೆಟ್ ಗಾಗಿ ಸ್ಪರ್ಧೆ ಮಾಡಿದರು, ಇದೆಲ್ಲವನ್ನು ಗಮನಿಸಿ ಜೆ ಡಿ ಎಸ್ ಪಕ್ದಕ್ಕೆ ಸೇರ್ಪಡೆಯಾಗಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಸೋಲನ್ನು ಅನುಭವಿಸಿದರೂ. ಬಿಟ್ಟು ಬಿಡದೆ ಮತ್ತೆ ಪಕ್ಷದಲ್ಲಿ ಉತ್ಸಾಹಿಯಾಗಿ ಸಂಘಟನೆ ಮಾಡುತ್ತಾ ಸಾಗಿದರು.
ಜೆ ಡಿ ಎಸ್ ನಲ್ಲೂ ಸ್ಥಾನ ಏರಿಕೆಯಾಗದೆ ಇರುವದನ್ನು ಗಮನಿಸಿ ಈಗ ನಡೆಯುತ್ತಿರುವ ಬಾಗಲಕೋಟೆ ಉಪಚುನಾವಣೆ ಸಂದರ್ಭದಲ್ಲಿಬಿ ಜೆ ಪಿ ಆಪರೇಷನ್ ಕಮಲದಿಂದ ಬಿ. ಜೆ ಪಿ. ಪಕ್ಷವನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಸಾರತ್ಯದಲ್ಲಿ ಸೇರ್ಪಡೆಗೊಂಡರು. ಸಿದ್ದರಾಮಯ್ಯನವರ ಆಪ್ತ ಸಿದ್ದರಾಮಯ್ಯನವರ ಪಕ್ಷದ ಎದುರು ಚುನಾವಣಾ ರಣರಂಗದಲ್ಲಿ ಕೇಸರಿ ಪಾಳ್ಯ ಬಿ ಜೆ ಪಿ ಯಿಂದ ತಮ್ಮ ಬೆಂಬಲಿಗರೊಂದಿಗೆ ಬಿ ಜೆ ಪಿ ಪಕ್ಷದ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರ ಭರ್ಜರಿ ಪ್ರಚಾರಕ್ಕೆ ತಮ್ಮ ಬೆಂಬಲಿಗರೊಂದಿಗೆ ಅಖಾಡಕ್ಕೆ ಇಳಿಯುವ ತಯಾರಿಯಲ್ಲಿದ್ದಾರೆ ಯುವ ಉತ್ಸಾಹಿ ಮುಖಂಡ ದೇವರಾಜ್ ಪಾಟೀಲರು..ಇನ್ನು ಬಿ. ಜೆ. ಪಿ. ಪಕ್ಷದಿಂದ ಏನಾದರೂ ಏರಿಕೆಯ ಸ್ಥಾನ ಸಿಗುವುದೋ ಏನೋ ಎಂದು ಕಾಯ್ದು ನೋಡುವ ಕಾಲ ಯುವ ಮುಖಂಡ ದೇವರಾಜ್ ಪಾಟೀಲರದ್ದಾಗಿದೆ.
ವರದಿ:-ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.