Document

BMCRI: 47ಮಂದಿ ಅಸ್ವಸ್ಥ  ಹಾಸ್ಟೆಲ್ ವಿದ್ಯಾರ್ಥಿನಿಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು

Janataa24 NEWS DESK

BMCRI: 47ಮಂದಿ ಅಸ್ವಸ್ಥ  ಹಾಸ್ಟೆಲ್ ವಿದ್ಯಾರ್ಥಿನಿಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು.

BMRCI,

ಬೆಂಗಳೂರು: ಬೆಂಗಳೂರು ಮೆಡಿಕಲ್ ಕಾಲೇಜ್ ನ ಹಾಸ್ಟೆಲ್ಲಿನಲ್ಲಿ ಇದೀಗ ಆತಂಕಕಾರಿ ಘಟನೆಯೊಂದು ನಡೆದು ಹೋಗಿದೆ.
47 ಮಂದಿ ಹಾಸ್ಟೆಲ್ ವಿದ್ಯಾರ್ಥಿನಿಯರು ವಾಂತಿ-ಬೇದಿಯಿಂದ ನರಳಾಡುತ್ತಿದ್ದಾರೆ. ಘಟನೆಯನ್ನು ಗಮನಿಸಿದ ಹಾಸ್ಟೆಲ್ ಸಿಬ್ಬಂದಿಗಳು ಕೂಡಲೇ ಇವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇವರಲ್ಲಿ ಮೂವರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರವಾಗಿದ್ದು ಐಸಿಯು(ICU) ನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಮತ್ತು 28 ಮಂದಿ ಟ್ರಾಮಾ(TRAUMA) ಕೇರ್ ಸೆಂಟರ್ ನಲ್ಲಿ ದಾಖಲಾಗಿದ್ದಾರೆ ಉಳಿದ 13 ಮಂದಿ ಹೆಚ್ ಬ್ಲಾಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಕಸ್ಮಿಕವಾಗಿ ವಾಂತಿ ಹಾಗೂ ಭೇದಿಯಿಂದ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ(BMRCI)ಯ ಹಾಸ್ಟೆಲ್(Hostel) ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲಾಗಿದ್ದಾರೆಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಿಂದ ಪ್ರಾಥಮಿಕ ಮಾಹಿತಿ ಲಭ್ಯವಾಗಿರುತ್ತದೆ.
ದಿಢೀರನೆ ಇಷ್ಟು ಮಂದಿ ವಿದ್ಯಾರ್ಥಿನಿಯರು(Students) ಅಸ್ವಸ್ಥರಾಗಲು ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ. ಇದೇ ಕಾರಣಕ್ಕಾಗಿ ಅಧಿಕಾರಿಗಳು ವೈದ್ಯರ ವರದಿಗಾಗಿ ಕಾಯುತ್ತಿದ್ದಾರೆ.

 

https://www.janataa24.com/nia-rameswaram-cafe-case-bjp-worker-arrested/

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

Subscribe YouTube

https://youtube.com/@janataa24?si=XsFcych2GMH0O6Gv

Document

Leave a Reply

Your email address will not be published. Required fields are marked *