Document

Bidar: ತಲೆನೋವಿನಿಂದ ಬೇಸತ್ತು 7 ತಿಂಗಳ ಗರ್ಭಿಣಿ ಆತ್ಮಹತ್ಯೆ

Janataa24 NEWS DESK

Bidar: ತಲೆನೋವಿನಿಂದ ಬೇಸತ್ತು 7 ತಿಂಗಳ ಗರ್ಭಿಣಿ ಆತ್ಮಹತ್ಯೆ

janatha womens

ಬೀದರ್: ತೀವ್ರವಾದ ತಲೆನೋವಿನಿಂದ ಬೇಸತ್ತು ಗರ್ಭಿಣಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಬೀದರ್‌ ಜಿಲ್ಲೆಯಲ್ಲಿ ನಡೆದಿದೆ. ಮೃತಳನ್ನು ಕಿರ್ತಿ ರಾಮು (22) ಎಂದು ಗುರುತಿಸಲಾಗಿದೆ. ಈಕೆ ಸದ್ಯ 7 ತಿಂಗಳ ಗರ್ಭಿಣಿ. ಈ ಘಟನೆ ಬೀದರ್ (Bidar) ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮಾಣಿಕ್ ನಗರದಲ್ಲಿ ನಡೆದಿದೆ.

ಕೀರ್ತಿರಾಮು ಅವರು ಹಲವು ತಿಂಗಳುಗಳಿಂದ ತೀವ್ರವಾದ ತಲೆನೋವಿನಿಂದ ಬಳಲುತ್ತಿದ್ದರು. ಎಷ್ಟೇ ಚಿಕಿತ್ಸೆ ಮಾಡಿದರೂ ಗುಣವಾಗುತ್ತಿರಲಿಲ್ಲ. ಇದರಿಂದ ಬೇಸತ್ತು ಕೀರ್ತಿರಾಮು (Keerthi Ramu) ಅವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಾವಿಗೆ ಬಿದ್ದ ಗರ್ಭಿಣಿಯ ಮೃತದೇಹವನ್ನು ಪೊಲೀಸರು ಮೇಲೆಕ್ಕಿತ್ತಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube
https://youtube.com/@janataa24?si=XsFcych2GMH0O6Gv
Bangalore:ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಪುರುಷೋತ್ತಮ ಬಿಳಿಮಲೆ ಅಯ್ಕೆ

Document

Leave a Reply

Your email address will not be published. Required fields are marked *