Janataa24 NEWS DESK
BHEL ನಲ್ಲಿ 515 ಹೊಸ ಉದ್ಯೋಗಗಳಿಗೆ ಅರ್ಜಿ ಆಹ್ವಾನ.

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL)ಗೆ ಹೊಸ ಉದ್ಯೋಗಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಈ ಉದ್ಯೋಗಗಳಿಗೆ ಆನ್ಲೈಲ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಕರ್ನಾಟಕ, ತಮಿಳುನಾಡು, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ಇರುವ ಸಂಸ್ಥೆಯ ಇಲಾಖೆಗಳಿಗೆ ಆಯ್ಕೆ ಆದ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತಿದೆ.
ಬಿಹೆಚ್ಇಎಲ್ ಗ್ರೇಡ್-4 ವಿಭಾಗದ ಉದ್ಯೋಗಗಳನ್ನು ಭರ್ತಿ ಮಾಡಲು ಯೋಜಿಸಲಾಗಿದೆ. ಇದಕ್ಕಾಗಿ ಈಗಾಗಲೇ ನೋಟಿಫಿಕೇಶನ್ ಅನ್ನು ಬಿಹೆಚ್ಇಎಲ್ ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರು ಈ ಕೆಲಸಗಳಿಗೆ ಪ್ರಯತ್ನ ಮಾಡಬಹುದು. ಹುದ್ದೆಯ ಜೊತೆಗೆ ಉತ್ತಮ ಮಟ್ಟದ ಮಾಸಿಕ ವೇತನ ಶ್ರೇಣಿ ಕೂಡ ಇದೆ.
BHEL JOBS: ಒಟ್ಟು ಎಷ್ಟು ಉದ್ಯೋಗಗಳು ಇವೆ?
515 ಉದ್ಯೋಗಗಳು
ಉದ್ಯೋಗದ ಹೆಸರು- Artisans Grade- IV (ಕುಶಲಕರ್ಮಿಗಳು)
ಕೆಲಸ ಮಾಡುವ ಸ್ಥಳ-
ಕರ್ನಾಟಕ, ತಮಿಳುನಾಡು, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ
ಮಾಸಿಕ ವೇತನ ಶ್ರೇಣಿ- 29,500 ಇಂದ 65,000 ರೂಪಾಯಿಗಳು
ಶೈಕ್ಷಣಿಕ ವಿದ್ಯಾರ್ಹತೆ
SSLC, ITI
ವಯಸ್ಸಿನ ಮಿತಿ ಎಷ್ಟು?
32 ವರ್ಷದ ಒಳಗಿನ ಅಭ್ಯರ್ಥಿಗಳು
ಅರ್ಜಿ ಶುಲ್ಕ ಎಷ್ಟು?
ಎಸ್ಸಿ, ಎಸ್ಟಿ ಮಾಜಿ ಸೈನಿಕರು- 472 ರೂಪಾಯಿ
ಯುಆರ್, ಇಡಬ್ಲುಎಸ್, ಒಬಿಸಿ- 1,072 ರೂಪಾಯಿ
ಆನ್ಲೈನ್ ಮೂಲಕ ಹಣ ಪಾವತಿಸಬೇಕು
ಆಯ್ಕೆ ಪ್ರಕ್ರಿಯೆ ಹೇಗೆ?
ಕಂಪ್ಯೂಟರ್ ಬೇಸಡ್ ಟೆಸ್ಟ್
ಸ್ಕಿಲ್ ಟೆಸ್ಟ್
ದಾಖಲಾತಿ ಪರಿಶೀಲನೆ
ಸಂದರ್ಶನ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ- 16 ಜುಲೈ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 12 ಆಗಸ್ಟ್ 2025
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.