Janataa24 NEWS DESK
Bangalore South : ಬಿಜೆಪಿ ಭದ್ರಕೋಟೆಯಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸುಲಭವೇ..?

ಬೆಂಗಳೂರು: ಬೆಂಗಳೂರು ವ್ಯಾಪ್ತಿಯಲ್ಲಿ ಬಿಜೆಪಿಯ ಭದ್ರಕೋಟೆಗೆ ಹೆಸರಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಇದೀಗ ತೇಜಸ್ವಿ ಸೂರ್ಯ ವಿರುದ್ದ ಮತ್ತು ಸೌಮ್ಯರೆಡ್ಡಿ ಕಣಕ್ಕೆ ಇಳಿದು ಲೋಕ ಹಗ್ಗಜಗ್ಗಾಟದಲ್ಲಿ ಗೆಲ್ಲುವರು ಯಾರು ಎಂಬಂತಾಗಿದೆ.
ಬೆಂಗಳೂರು ವ್ಯಾಪ್ತಿಯಲ್ಲಿ ಬಿಜೆಪಿಯ ಭದ್ರಕೋಟೆಗೆ ಹೆಸರಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಇದೀಗ ತೇಜಸ್ವಿ ಸೂರ್ಯ ವಿರುದ್ದ ಸೌಮ್ಯರೆಡ್ಡಿ ಕಣಕ್ಕೆ ಇಳಿದು ಲೋಕ ಅಗ್ಗಜಗ್ಗಾಟದಲ್ಲಿ ಗೆಲ್ಲುವರು ಯಾರು ಎಂಬಂತಾಗಿದೆ.
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
ಬಿಜೆಪಿಯ ಬೆಂಗಳೂರು ದಕ್ಷಿಣ ಕ್ಷೇತ್ರದ ಹಾಲಿ ಸಂಸದ ತೇಜಸ್ವಿ ಸೂರ್ಯ(Tejasvi Surya) ಮತ್ತೊಮ್ಮೆ ವಿಜಯ ಪತಾಕೆ ಹಾರಿಸಲು ಒದ್ದಾಡುತ್ತಿದ್ದರೆ ಇತ್ತ ಕಾಂಗ್ರೆಸ್ ನಿಂದ ಸಚಿವ ರಾಮಲಿಂಗಾ ರೆಡ್ಡಿಯ ಅವರ ಪುತ್ರಿ ಸೌಮ್ಯ ರೆಡ್ಡಿ (Sowmya Reddy)ಅವರಿಗೆ ಟಿಕೆಟ್ ನೀಡಲಾಗಿದೆ ಈ ಇಬ್ಬರ ನಡುವೆ ತೀವ್ರ ಪೈಪೋಟಿಯಿದ್ದು ಪ್ರಜೆಗಳು ಈ ಬಾರಿ ಯಾರಿಗೆ ಆರ್ಶಿವಾದಿಸುತ್ತಾರೆ ಎನ್ನುವುದು ಕಾದು ನೋಡಬೇಕಿದೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು 1991ರಿಂದ ಸತತ ಎಂಟು ಗೆಲುವುಗಳೊಂದಿಗೆ ಬಿಜೆಪಿ ಭದ್ರಕೋಟೆಯಾಗಿ ಉಳಿದಿದೆ. ಈ ಬಾರಿ ಆದರೂ ಕಾಂಗ್ರೆಸ್ ತಂತ್ರದಿಂದ ಗ್ಯಾರಂಟಿಯ ಪ್ರಭಾವದಿಂದ ಭದ್ರಕೋಟೆಗೆ ಲಗ್ಗೆ ಇಡುತ್ತದೆಯೇ…? ಎಂಬುವುದನ್ನಾ ಕಾತುರದಿಂದ ಕಾದು ನೋಡಬೇಕಿದೆ. 1989ರಲ್ಲಿ ಮಾಜಿ ಸಿಎಂ ಆರ್ ಗುಂಡೂರಾವ್ ವಿಜಯಶಾಲಿಯಾದಾಗ ಇಲ್ಲಿ ಕಾಂಗ್ರೆಸ್ ನ ಕೊನೆಯ ಗೆಲುವಾಗಿತ್ತು.
ಇಲ್ಲಿಯವರೆಗೂ ಇಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿಲ್ಲ ಇಲ್ಲಿನ ಮತದಾರರು ಬಿಜೆಪಿಯನ್ನ ಯಾವತ್ತು ಕೈ ಬಿಟ್ಟಿಲ್ಲ.
ಕಳೆದ 32 ವರ್ಷಗಳಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಮಾಲೆಗೆ ಕೊರಳೊಡುತ್ತಾ ಬಂದಿದೆ. ಈ ಬಾರಿಯೂ ಮತ್ತೊಮ್ಮೆ ಅದೇ ಸಕ್ರಿಯ ಬಿಜೆಪಿಯ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಕೊಟ್ಟು, ಕ್ಷೇತ್ರದಲ್ಲಿ ಚುನಾವಣೆ ಜೋರಾಗಿದ್ದು ಮೋದಿ,ಶಾ, ಅಭಿವೃದ್ದಿ ಕ್ಷೇತ್ರ, ಅಭಿವೃದ್ದಿ ಬಿಜೆಪಿ, ಸಿದ್ದಾಂತ, ಬದ್ದತೆ, ಶ್ರೀರಾಮನ ಜಪ ಇನ್ನೂ ನಾನ ಅಂಶಗಳನ್ನು ಇಟ್ಟುಕೊಂಡು ಮತಬೇಟೆ ಜೋರಾಗಿಯೇ ಇದೆ ಹಾಗಾಗಿ ಈ ಬಾರಿಯೂ ಸೂರ್ಯ ಗೆಲುವಿನ ಮೆಟ್ಟಿಲು ಸುಲಭವಾಗಿಯೇ ಇದೆ.ಗೆಲ್ಲುವ ನಿರೀಕ್ಷೆ ಇದೆ.
ಇದೇ ಕ್ಷೇತ್ರ ವ್ಯಾಪ್ತಿಯಲ್ಲಿ ತನ್ನದೇ ಆದ ಪ್ರಾಬಲ್ಯ ಸಾಧಿಸಿರುವ ಸೌಮ್ಯ ರೆಡ್ಡಿ ಅವರ ತಂದೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಬಾರಿ ಮಗಳ ಗೆಲುವಿಗಾಗಿ ಪಣತೊಟ್ಟು ಆ ಭಾಗದ ಎಲ್ಲಾ ಶಾಸಕರು ಹಾಗೂ ವಾರ್ಡ್ ಮೆಂಬರ್ ಗಳ ಹಿಡಿತ ಸಾಧಿಸಿ ಮಗಳ ಗೆಲುವಿಗಾಗಿ ಫೀಲ್ಡ್ ಗೆ ಇಳಿದಿದ್ದಾರೆ.ಈ ಭಾಗದ ವಿಧಾನಸಭಾ ಕ್ಷೇತ್ರಗಳಲ್ಲಿ ವಿಜಯನಗರ ಬಿಟಿಎಂ ಲೇಔಟ್ ಗೋವಿಂದರಾಜ ನಗರ ಎಲ್ಲಾ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿವೇ ಅಲ್ಲಿ ತಮ್ಮ ಮತಗಳು ಚೆಲ್ಲದೇ ಒಗ್ಗೂಡಿಸಿಕೊಂಡು ಗೆಲುವಿಗೆ ಸಹಕಾರಿಯಾಗುವಂತೆ ಮಾಡಬೇಕಿದೆ.
ಹೀಗೆ ಒಬ್ಬರಿಗಿಂತ ಒಬ್ಬರು ಜೋರಾಗಿದ್ದಾಗ ಈ ಬಾರಿ ಬೆಂಗಳೂರು ದಕ್ಷಿಣ ಲೋಕಸಭಾ ಸೂರ್ಯನಿಗೋ ಸೌಮ್ಯಾ ಗೋ ಕಾದು ನೋಡೋಣ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
SSLC: ವಿದ್ಯಾರ್ಥಿಗಳಿಗೆ ಕಾಪಿ ಮಾಡಲು ಸಹಕರಿಸಿದ ಇಬ್ಬರು ಶಿಕ್ಷಕರು ಅಮಾನತು