Janataa24 NEWS DESK
Fraud Case : ವಂಚನೆ ಮಾಡಿದವನ ಮನೆ ಮುಂದೆ ತಮಟೆ ಬಾರಿಸಿ ಧರಣಿ ಕುಳಿತ ಮಹಿಳೆ ಮತ್ತು ಕುಟುಂಬಸ್ಥರು

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ದೇವನಹಳ್ಳಿ (Devanahalli)ಯಲ್ಲಿ ಬಾಳು ಕೊಡುವುದಾಗಿ ನಂಬಿಸಿ ಮಹಿಳೆಯನ್ನು ನಾನ
ರೀತಿಯಲ್ಲಿ ಬಳಸಿಕೊಂಡು ಇದೀಗ ಕೈಬಿಟ್ಟು ಬೀದಿಗೆ ತಳ್ಳಿರುವ ಆರೋಪ ಕೇಳಿ ಬಂದಿದೆ.
ರೀತಿಯಲ್ಲಿ ಬಳಸಿಕೊಂಡು ಇದೀಗ ಕೈಬಿಟ್ಟು ಬೀದಿಗೆ ತಳ್ಳಿರುವ ಆರೋಪ ಕೇಳಿ ಬಂದಿದೆ.
ವಂಚನೆ ಜಾಲಕ್ಕೆ ಬಿದ್ದ ಮಹಿಳೆ
ವಂಚನೆ ಮಾಡಿದವನ ಮನೆ ಮುಂದೆ ಕುಳಿತು ಮಹಿಳೆ ಮತ್ತು ಕುಟುಂಬಸ್ಥರು ಧರಣಿ ನಡೆಸಿದರು. ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಘಟನೆ ಬೆಳಕಿಗೆ ಬಂದಿದೆ.
ಪುರುಷೋತ್ತಮ ಎಂಬಾತ ಮಹಿಳೆಗೆ ಎಲ್ಲ ರೀಯಿಯಲ್ಲೂ ಬಳಸಿಕೊಂಡು, ಹಣ ಪಡೆದು ವಂಚನೆ ಮಾಡಿದ್ದಾನೆ. ಇವರಿಬ್ಬರು ಕಳೆದ ಹಲವಾರು ವರ್ಷಗಳಿಂದ ಗಂಡ-ಹೆಂಡತಿಯಂತೆ ಒಂದೇ ಮನೆಯಲ್ಲಿ ವಾಸವಿದ್ದರು. ಮಹಿಳೆಗೆ ಆಕೆಯ ತವರು ಮನೆಯಿಂದ 10 ಲಕ್ಷ ಹಣ ಹಾಗೂ ಒಡವೆಗಳನ್ನು ಕೊಟ್ಟಿದ್ದರು.
ಇದರ ಮೇಲೆ ಕಣ್ಣು ಹಾಕಿದ ಪುರುಷೋತ್ತಮ, ಮನೆ ಕಟ್ಟಿಸಿ ಕೊಡುವುದಾಗಿ ಪುಸಲಾಯಿಸಿ ಆಕೆಯಿಂದ ಹಣ ಪಡೆದು ಇದೀಗ ಬೀದಿಗೆ ತಳ್ಳಿದ್ದಾನೆ ಎಂದು ಆರೋಪಿಸಿದ್ದಾರೆ.
ಪುರುಷೋತ್ತಮನ ಮನೆ ಬಳಿ ಆಗಮಿಸಿದ ನೊಂದ ಮಹಿಳೆ ಕುಟುಂಬಸ್ಥರ ಜತೆ ಸೇರಿ ತಮಟೆ ಹೊಡೆಯುವ ಮೂಲಕ ಧರಣಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ವಂಚನೆ ಮಾಡಿದ ಪುರುಷೋತ್ತಮನ ವಿರುದ್ಧ ಮಹಿಳೆ ದೂರು ದಾಖಲಿಸಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ. ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
Excise: ಅಕ್ರಮ ಮಧ್ಯ ಮಾರಾಟ ಆರೋಪಿಯನ್ನ ಎಡೆಮುರಿ ಕಟ್ಟಿದ ಅಬಕಾರಿ ಅಧಿಕಾರಿಗಳು.