Janataa24 NEWS DESK
Bagalkote: ಬಿದ್ದ ಬೆಂಕಿ ಆರಿಸಲು ಹೋದ ವೃದ್ಧ ಸಾವು |An old man died when he went to put out a fire that fell into sugarcane|

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಆಲದಕಟ್ಟೆ ಗ್ರಾಮದಲ್ಲಿ ಕಬ್ಬಿಗ ಆಕಸ್ಮಿಕ ಬೆಂಕಿ ತಗುಲಿದ್ದು ಆರಿಸಲು ಹೋದ ವೃದ್ದ ಮೃತಪಟ್ಟಿರುವ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಭೇಟಿ ನೀಡಿದರು.ಬಾದಾಮಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಕಬ್ಬಿಗೆ ಆಕಸ್ಮಿಕ ಬೆಂಕಿ ತಗುಲಿ ಕಬ್ಬು(Sugarcane) ಹಾನಿಯಾಗಿದ್ದು, ಬೆಂಕಿ ಆರಿಸಲು ಹೋದ ವೃದ್ದನೊಬ್ಬ ಬೆಂಕಿ(Fire)ಯಲ್ಲಿ ಬಿದ್ದು ಆಕಸ್ಮಿಕ ಸಾವನ್ನಪ್ಪಿದ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ.ಭೀಮಪ್ಪ ಹಳ್ಳಿ(75) ಮೃತಪಟ್ಟ ದುರ್ದೈವಿ. ಈತ ಕಬ್ಬಿಗೆ ಹತ್ತಿದ್ದ ಬೆಂಕಿ ನಂದಿಸಲು ಹೋಗಿ ವಯಸ್ಸಾದ ಕಾರಣ ಬೆಂಕಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಶಾಸಕರ ಭೇಟಿ: ಆಲದಕಟ್ಟಿ ಗ್ರಾಮದಲ್ಲಿ ಬೆಂಕಿ ತಗುಲಿದ್ದ ಕಬ್ಬಿನಲ್ಲಿ ಸಾವನ್ನಪ್ಪಿದ ಸ್ಥಳಕ್ಕೆ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಭೇಟಿ ನೀಡಿದರು.ಬಾದಾಮಿ ಪಿ ಎಸ್ ಐ ವಿಠಲ ನಾಯಕ ಕೂಡ ಜೊತೆಗಿದ್ದರು.,ಮೃತಪಟ್ಟ ಭೀಮಪ್ಪ ಹಳ್ಳಿ ಇವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ವರದಿ:- ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://www.janataa24.com/agtara-prajwal-revanna-was-arrested-for-sit-inv/