Document

Bagalakote: ಕಾಂಗ್ರೆಸ್ ನ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅಬ್ಬರದ ಪ್ರಚಾರ

Bagalakote: ಕಾಂಗ್ರೆಸ್ ನ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅಬ್ಬರದ ಪ್ರಚಾರ

1000139241

ಬಾಗಲಕೋಟೆ: ಲೋಕಸಭಾ ಚುನಾವಣೆಯ ಬಾಗಲಕೋಟೆ ಮತಕ್ಷೇತ್ರದ ಕಾಂಗ್ರೆಸ್ ನ ಅಭ್ಯರ್ಥಿ ಸಂಯುಕ್ತ ಪಾಟೀಲ್(Samyukta Patil) ಅಬ್ಬರದ ಪ್ರಚಾರ.ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬೀಳಗಿ ಹಾಗೂ ಕಲಾದಗಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಿತು.ಕಾರ್ಯಕ್ರಮವನ್ನು ನಾಡಗೀತೆ ಹಾಡಿ ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಲಾಯಿತು. ಬಾಗಲಕೋಟೆಯ ಹೊಸ ಅಧ್ಯಯಕ್ಕಾಗಿ ಸಚಿವ ಶಿವಾನಂದ ಪಾಟೀಲ್ ಪ್ರಬುದ್ಧ ರಾಜಕಾರಣಿಯವರ ಪುತ್ರಿ ಸಂಯುಕ್ತ ಪಾಟೀಲ್ ಅವರಿಗೆ ಆಶೀರ್ವಾದ ಮಾಡಿ ಆರಿಸಿ ತರಬೇಕು ಎಂದು ಕಾಂಗ್ರೆಸ್(Congress) ನ ಹಾಲಿ ಶಾಸಕರು ಸಚಿವರುಗಳು ಕರೆ ನೀಡಿದರು.ಇದೇ ಸಂದರ್ಭದಲ್ಲಿ ಸಚಿವರಾದ ಶ್ರೀ ಶಿವಾನಂದ ಪಾಟೀಲ , ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ, ಮಾಜಿ ಸಚಿವರಾದ ಶ್ರೀ ಎಸ್. ಆರ್. ಪಾಟೀಲ, ಶಾಸಕರಾದ ಶ್ರೀ ಜಿ ಟಿ ಪಾಟೀಲ್, ಬಸವಪ್ರಭು ಸರನಾಡಗೌಡ,,ಭೀಮಸೇನ್ .ಬಿ.ಚಿಮ್ಮನಕಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಸ್. ಜಿ.ನಂಜಯ್ಯನಮಠ, ಮಾಜಿ ಸಂಸದರಾದ ಅಜಯಕುಮಾರ್ ಸರನಾಯಕ್, ಮುಖಂಡರಾದ ಆನಂದ್ ನ್ಯಾಮಗೌಡ , ಸಿದ್ದು ಕೊಣ್ಣೂರ, ಶ್ರೀಮತಿ ರಕ್ಷಿತಾ ಭಾರತಕುಮಾರ ಈಟಿ, ಎಂ ಬಿ ಸೌದಾಗರ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.

ವರದಿ:- ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ

ParagraphLokaSabha

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

Document

Leave a Reply

Your email address will not be published. Required fields are marked *