Janataa24 NEWS DESK
Bagalakote: ಕೂಲಿ ಕಾರ್ಮಿಕರ ಕುಂದುಕೊರತೆ ವಿಚಾರಿಸಿ ಸ್ಪಂದಿಸಿ ಮತಯಾಚನೆ ಮಾಡಿದ ಕಾಂಗ್ರೆಸ್ ನ ಅಭ್ಯರ್ಥಿ ಸಂಯುಕ್ತಾ ಪಾಟೀಲ.

ಬಾದಾಮಿ: ಗುಳೇದಗುಡ್ಡ ಭಾಗದ ಗುಡ್ಡದ ರಂಗನಾಥನ ಪುರಾಣ ಪ್ರಸಿದ್ಧ ಕೆಲವಡಿ ಶ್ರೀ ಗುಡ್ಡದ ರಂಗನಾಥ ದೇವಾಲಯಕ್ಕೆ ಭೇಟಿ ನೀಡಿದ ಕೈ ಅಭ್ಯರ್ಥಿ ಸಂಯುಕ್ತಾ ಪಾಟೀಲ(Samyukta Patil) ಕೂಲಿ ಕೆಲಸ ಮುಗಿಸಿ ಬರುತ್ತಿದ್ದ ಕೂಲಿ ಕಾರ್ಮಿಕ ಮಹಿಳೆಯರೊಂದಿಗೆ ಅವರ ಕುಂದುಕೊರತೆ ವಿಚಾರಿಸಿ
ನಮ್ಮ ಕಾಂಗ್ರೆಸ್(Congress) ಪಕ್ಷ ಮಹಿಳೆಯರಿಗೆ ರೈತರಿಗೆ ಬೆನ್ನಲುಬಾಗಿ ನಿಮಗೆ ಹೆಗಲು ಕೊಟ್ಟು ನಿಲ್ಲುವ ಗ್ಯಾರಂಟಿ ಯೋಜನೆ(Guarantee Schemes)ಗಳನ್ನು ನೀವಿಗಾಗಲೇ ಪಡೆದುಕೊಂಡಿದ್ದೀರಿ ಎಂದು ಹೇಳುವಾಗ ಹಿರಿಯ ಮಹಿಳೆಯೊಬ್ಬಳು ನಮಗೆ ಎರಡು ಸಾವಿರ ರೂಪಾಯಿ ಬರ್ತಾ ಇದ್ದಾವು ಪುಣ್ಯ ಬರಲಿ ನಿಮಗೇ ಸಿದ್ದರಾಮಯ್ಯನಿಗೆ ಎಂದು ಹಾರೈಸಿದ್ದು ವಿಶೇಷವಾಗಿತ್ತು.
ಮುಂದಿನ ಗ್ಯಾರಂಟಿ ಗಳ ಬಗ್ಗೆ ಗ್ಯಾರಂಟಿ ಕಾರ್ಡ್ ಕೊಟ್ಟು ವಿವರಿಸಿ ಕೈ ಮುಗಿದು ಮತ ಯಾಚನೆ ಮಾಡಿದರು. ಇದೇ ಸಮಯದಲ್ಲಿ ಸಮಯದಲ್ಲಿ ಶಾಸಕರಾದ ಶ್ರೀ ಭೀಮಸೇನ ಚಿಮ್ಮನಕಟ್ಟಿ, ಬ್ಲಾಕ್ ಅಧ್ಯಕ್ಷ ಸಂಜು ಬರಗುಂಡಿ, ಪ್ರಕಾಶ್ ಮೇಟಿ, ರಾಜು ಜವಳಿ, ಸಂಯುಕ್ತಾ ಪಾಟೀಲ ಅವರ ಪತಿ ಶಿವಕುಮಾರ್,ಬಿ ಬಿ ಸೂಳಿಕೇರಿ ಮತ್ತು ಗ್ರಾಮಸ್ಥರು ಪಕ್ಷದ ಮುಖಂಡರು ಭಾಗಿಯಾದರು.
ದೇಶದ ಸರ್ವ ಜನಾಂಗದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿಯುವುದು ಮುಖ್ಯ. ನಮ್ಮ ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿಗಳು ಮಹಿಳೆಯರಿಗೆ ಕುಟುಂಬದ ಭಾರವನ್ನು ಇಳಿಸಿದೆ. ಗ್ಯಾರಂಟಿಗಳು ಪ್ರತಿ ತಿಂಗಳಿಗೆ ಸಾವಿರಾರು ರೂಪಾಯಿ ಬರುತ್ತಿದೆ ಎಂದು ಸಂಯುಕ್ತ ಪಾಟೀಲ್ ಹೇಳಿದರು.
ವರದಿ: ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://www.janataa24.com/turuvekere-assault-on-village-panchayat-member/