Janataa24 NEWS DESK
Bagalakote: ಕಾಂಗ್ರೆಸ್ ಆಕಾಂಕ್ಷಿ ವೀಣಾ ಕಾಶಪ್ಪನವರ ಸೈಲೆಂಟ್ ಹಿಂದಿನ ಮರ್ಮವೇನು..?

ಬಾಗಲಕೋಟೆ :ಕಾಂಗ್ರೆಸ್ ನಲ್ಲಿ ಅಸಮಾಧಾನಗೊಂಡು ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯೋ ಮಾತೇ ಇಲ್ಲಾ ಎಂದು ಘರ್ಜನೆ ಮಾಡಿದ ಸಿಂಹಿಣಿ ಸೈಲೆಂಟಾಗಿ ಗೂಡು ಸೇರಿದ್ದರ ಹಿಂದಿನ ಉದ್ದೇಶ ಏನು.?
ಬಾಗಲಕೋಟೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಬಲ ಟಿಕೆಟ್ ಆಕಾಂಕ್ಷಿ ಮನೆ ಮಗಳು ಶ್ರೀಮತಿ ವೀಣಾ ಕಾಶಪ್ಪ(Veena Kashappa)ನವರ ಇತ್ತೀಚಿಗಷ್ಟೇ ಟಿಕೆಟ್ ಮಿಸ್ ಆದ ಹಿನ್ನೆಲೆ ಸ್ವಾಭಿಮಾನಿ ಕಾರ್ಯಕರ್ತರು, ಪಾದಾಧಿಕಾರಿಗಳು ಅಭಿಮಾನಿಗಳು ಹೈಕಮಾಂಡ್ ವಿರುದ್ಧ ಪ್ರತಿಭಟನೆ ಮಾಡಿ ರಸ್ತೆ ತಡೆದು ವಿರೋಧ ವ್ಯಕ್ತ ಪಡಿಸಿದ್ದು ಅಸಮಾಧಾನ ಬೃಹತ್ ಸದ್ದು ಮಾಡಿತ್ತು.
ಇದಾದ ಬಳಿಕ ಬಂಡಾಯ ಅಭ್ಯರ್ಥಿ ಶ್ರೀಮತಿ ವೀಣಾ ಕಾಶಪ್ಪನವರ ಮಾಧ್ಯಮದ ಎದುರು ಚುನಾವಣೆ ಅಕಾಡದಿಂದ ಹಿಂದೆ ಸರಿಯೋ ಮಾತೇ ಇಲ್ಲಾ ಎಂದು ಸ್ಪಷ್ಟ ಹೇಳಿಕೆ ನೀಡಿದ್ದರು.
ಮಾಧ್ಯಮದಲ್ಲಿ ಶ್ರೀಮತಿ ವೀಣಾ ಕಾಶಪ್ಪನವರ ಪತಿ ಹುನಗುಂದ ಮತಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ಮಾದ್ಯಮ ಎದುರು ಪಕ್ಷಕ್ಕೆ ಸಾಕಷ್ಟು ದುಡಿದ ನನ್ನ ಪತ್ನಿ ಶ್ರೀಮತಿ ವೀಣಾ ಕಾಶಪ್ಪನವರಿಗೆ ಟಿಕೆಟ್ ನೀಡಬೇಕಾಗಿತ್ತು ಆದರೆ ನೀಡಿಲ್ಲ ಈಗ ಹೈ ಕಮಾಂಡ್ ನಿರ್ದೇಶನದಂತೆ ಸಚಿವ ಶಿವಾನಂದ ಪಾಟೀಲ ಅವರ ಪುತ್ರಿ ಶ್ರೀಮತಿ ಸಂಯುಕ್ತ ಪಾಟೀಲ ಅವರನ್ನು ಗೆಲ್ಲಿಸಲು ಎಲ್ಲರೂ ಒಟ್ಟಾಗಿ ಪ್ರಚಾರ ಮಾಡುವಂತೆ ನಿರ್ದೇಶನ ನೀಡಿದ್ದು, ಹಾಗಾಗಿ ಶ್ರೀಮತಿ ವೀಣಾ ಕಾಶಪ್ಪನವರ ಕೂಡ ಅಸಮಾಧಾನವನ್ನ ಮರೆತು ಸಂಯುಕ್ತ ಪಾಟೀಲ ಪರ ಪ್ರಚಾರಕ್ಕೆ ಬರಲಿದ್ದಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ.
ಆದರೆ ಅಸಮಾಧಾನಗೊಂಡಿರುವ ಶ್ರೀಮತಿ ವೀಣಾ ಕಾಶಪ್ಪನವರ ಎಲ್ಲಿಯೂ ಸಂಯುಕ್ತ ಪಾಟೀಲ ಅವರ ಪ್ರಚಾರಕ್ಕೆ ಬರುತ್ತೇನೆ ಬೆಂಬಲ ನೀಡುತ್ತೇನೆ ಎಂದು ಮಾಧ್ಯಮ ಹೇಳಿಕೆಯಾಗಲಿ ಅಥವಾ ಸಂದರ್ಶನವಾಗಲಿ ಎಲ್ಲಿಯೂ ನೀಡಿಲ್ಲದಿರುವುದು ಸಾಕಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ವೀಣಾ ಅವರು ಯಾರ ಜೊತೆಗೂ ದೂರವಾಣಿ ಸಂಪರ್ಕ ಮಾಡುತ್ತಿಲ್ಲ ಎಲ್ಲಿಯೂ ಹೇಳಿಕೆ ನೀಡಿಲ್ಲ ಕಾಂಗ್ರೆಸ್ (Congress) ನಾಯಕರು ಅವರ ಹೆಸರು ಬಳಸಿ ಅವರು ಪ್ರಚಾರಕ್ಕೆ ಬರುತ್ತಾರೆ ಎಂದು ತಮ್ಮಷ್ಟಕ್ಕೆ ತಾವೇ ಹೇಳಿಕೆಗಳನ್ನ ನೀಡಿ ತಮ್ಮಷ್ಟಕ್ಕೆ ತಾವೇ ಸಮಾಧಾನ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ ಎಂದು ತಿಳಿದುಬರುತ್ತಿರುವ ವಿಷಯವಾಗಿದೆ.
ಟಿಕೆಟ್ ಮಿಸ್ ಆಗಿ ಅಸಮಾಧಾನಗೊಂಡು ಚುನಾವಣಾ ಅಖಾಡದಿಂದ ಹಿಂದೆ ಸರಿಯೋ ಮಾತೇ ಇಲ್ಲಾ ಎಂದು ಘರ್ಜಿಸಿದ ಸಿಂಹಿಣಿ ಸೈಲೆಂಟಾಗಿ ಗುಹೆ ಸೇರಿಕೊಂಡಿತಾ.ಇಲ್ಲಾ ಮತ್ತೆ ಫೀನಿಕ್ಸ್ ಹಕ್ಕಿಯ ಹಾಗೆ ಎದ್ದು ಬರಬಹುದಾ ಎಂದು ಬಾಗಲಕೋಟೆ ಮತಕ್ಷೇತ್ರದ ಜನತೆಯಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ವರದಿ:- ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
BaSR Srinivas : 2019ರ ಲೋಕ ಬಿಜೆಪಿ ಗೆಲುವಿಗೆ ಪುಲ್ವಾಮಾ ದಾಳಿ ಕಾರಣ ಶಾಸಕ ಎಸ್ ಆರ್ ಶ್ರೀನಿವಾಸ್