Janataa24 NEWS DESK
Bagalakote: ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷರಾದ ನಾಗರಾಜ್ ಅವರಿಂದ ಶಿಲ್ಪಕಲಾ ಪ್ರತಿಭೆ ಸರಗಣಾಚಾರಿ ಅವರಿಗೆ ಸನ್ಮಾನ.

ಬಾಗಲಕೋಟೆ : ಜಿಲ್ಲೆಯ ಚಾಲುಕ್ಯರ ನಾಡು ಬಾದಾಮಿಯ ಶಿಲ್ಪಕಲಾ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ ಕಿತ್ತೂರ ರಾಣಿ ಚನ್ನಮ್ಮ(Chanamma) ಪ್ರಶಸ್ತಿ ಪುರಸ್ಕೃತ ಅಪ್ರತಿಮ ಶಿಲ್ಪಿ ಭಾರತಿ ಸರಗಣಾಚಾರಿ ಇವರ ಶಿಲ್ಪಕಲಾ ಕ್ಷೇತ್ರದಲ್ಲಿನ ಸಾಧನೆಯನ್ನ ಗುರುತಿಸಿದ ಕರ್ನಾಟಕ ಶಿಲ್ಪ ಕಲಾ ಅಕಾಡೆಮಿ ಭಾರತಿ ಯವರು ಕರ್ನಾಟಕ ಶಿಲ್ಪ ಕಲಾ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಶಿಲ್ಪಕಲಾ ಕ್ಷೇತ್ರದಲ್ಲಿಯೇ ಬಾಗಲಕೋಟೆ ವಿಜಯಪುರ(Vijayapuru) ಜಿಲ್ಲೆಗಳಲ್ಲಿಯೇ ಮಹಿಳಾ ವಿಭಾಗದಲ್ಲಿಯೇ ಶಿಲ್ಪಕಲಾ ಕ್ಷೇತ್ರದಲ್ಲಿ ಆಯ್ಕೆಯಾದ ಪ್ರಥಮ ಮಹಿಳಾ ಶಿಲ್ಪಿ ಎಂಬ ಹೆಗ್ಗಳಿಕೆಗೆ ಚಾಲುಕ್ಯರ ನಾಡು ಬಾದಾಮಿಯ ಶಿಲ್ಪಿ ಭಾರತಿ ಸರಗನಾಚಾರಿ ಯವರು ಪಾತ್ರರಾಗಿದ್ದಾರೆ ಎನ್ನುವುದು ಚಾಲುಕ್ಯರ ನಾಡಿಗೆ ಹೆಮ್ಮೆಯ ವಿಷಯವಾಗಿದೆ.
ವಿಷಯ ತಿಳಿದ ಭಾರತೀಯ ಜನತಾ ಪಕ್ಷದ ಬಾದಾಮಿ ತಾಲೂಕಾ ಮಂಡಲದ ನೂತನ ಅಧ್ಯಕ್ಷರಾದ ನಾಗರಾಜ್. ಎಸ್. ಕಾಚಟ್ಟಿ ಹಾಗೂ ಹಿರಿಯ ಮುಖಂಡರಾದ ಉಲ್ಲಾಸ. ಎಚ್. ಈಳಗೇರ, ಬಿ. . ಜೆ. ಪಿ ಪಕ್ಷದ ಬಾದಾಮಿ(Badami) ವಿಧಾನಸಭಾ ಚುನಾವಣಾ ಸಂಚಾಲಕರಾದ ಪ್ರಭುರಾಜ್ ಹೂಲಗೇರಿ, ಸಂಜು ಬರಗುಂಡಿ,ಎಸ್. ಎನ್. ಬೇನಾಳ ಸೇರಿದಂತೆ ಮಹಿಳಾ ಘಟಕ, ಅಕ್ಕನ ಬಳಗದವರೂ ಸೇರಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಗೆ ಆಯ್ಕೆಯಾದ ಭಾರತಿ ಸರಗಣಾಚಾರಿ ಅವರ ನಿವಾಸಕ್ಕೆ ತೆರಳಿ ಅವರಿಗೆ ಶಾಲು ಹೊಡಿಸಿ ಬಸವಣ್ಣನವರ ಭಾವಚಿತ್ರ ನೀಡಿ ಸನ್ಮಾನಿಸಿ ಅವರ ಅದ್ಭುತ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದರು.
ವರದಿ:- ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
https://www.janataa24.com/bharati-sarganachari-sculptor-of-bagalakote/