Janataa24 NEWS DESK
Bagalakote: ಬಾಗಲಕೋಟೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಮಹಾಗುಂಡಪ್ಪ. ಕೆ. ಗಾಣಿಗೇರ ಕಣಕ್ಕ

ಬಾಗಲಕೋಟೆ : ಲೋಕಸಭಾ ಚುನಾವಣೆ ರಣಕಣ ಕೋಟೆ ನಗರಿ ಬಾಗಲಕೋಟೆ ಲೋಕಸಭಾ ಮತಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಗಾಣಿಗ ಸಮಾಜದ ಪ್ರಬಲ ಅಭ್ಯರ್ಥಿ ಹಾಗೂ ಬಗರ್ ಹುಕುಂ ಸಾಗುವಳಿ ಸೇವಾ ಸಮಿತಿಯ ಉಪಾಧ್ಯಕ್ಷರೂ ಆಗಿ ರೈತ ಮುಖಂಡ.
ಹಾಗೂ ರೈತರ ಜಮೀನಿನ ಉಳಿವಿಗಾಗಿ ಬಗರ್ ಹುಕುಂ ಸೇವಾ ಸಮಿತಿಯಿಂದ ಸಾಕಷ್ಟು ವರ್ಷಗಳಿಂದ ನಿರಂತರ ಹೋರಾಟದಲ್ಲಿ ಮುಂಚೂಣಿಯಲ್ಲಿ ಹೋರಾಟ ಮಾಡುತ್ತಿರುವ ಸಾಕಷ್ಟು ಜನಸಾಮಾನ್ಯರ ಒಡನಾಟದಲ್ಲಿರುವ “ಎಂ. ಕೆ. ಗಾಣಿಗೇರ” ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನೆರಡು ದಿನಗಳಲ್ಲಿ ಅಧಿಕೃತ ಘೋಷಣೆ ಮಾಡಲಿದ್ದಾರೆ.
ಪ್ರಬಲ ಪೈಪೋಟಿ ನಡೆದಿರುವ ಬಾಗಲಕೋಟೆ ಲೋಕಸಭಾ (Lokasabha)ರಣಕನದಲ್ಲಿ ಕಾಂಗ್ರೆಸ್ ನ ಹೊಸ ಅಭ್ಯರ್ಥಿ ಯುವನಾಯಕಿ ಸಂಯುಕ್ತ ಪಾಟೀಲ್ ಹಾಗೂ ಇನ್ನೊಂದು ಕಡೆ ಬಿ ಜೆ ಪಿ ಅಭ್ಯರ್ಥಿ ಪಿ ಸಿ ಗದ್ದಿಗೌಡ್ರ ಇದ್ದಾರೆ. ಕುತೂಹಲ ಏನೆಂದರೆ ಪಿ ಸಿ ಗದ್ದಿಗೌಡ ಅವರ ಸಮುದಾಯದವರೆ ಆದ ಸಾಕಷ್ಟು ಜನಸಾಮಾನ್ಯರ ಒಡನಾಟದಲ್ಲಿ ಇರುವ ಬಾದಾಮಿಯ ಸ್ಥಳೀಕರು ಆದ ಎಂ ಕೆ ಗಾಣಿಗೇರ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿರುವುದು ಎರಡೂ ಪಕ್ಷಗಳಿಗೆ ಟಕ್ಕರ್ ಕೊಡಲಿದ್ದಾರೆ ಎನ್ನಬಹುದು.
ಇದು ತೀವ್ರ ಕುತೂಹಲ ಕೆರಳಿಸಲು ಶುರುವಾಗಿದೆ.ಈ ಸಲದ ಕೋಟೆ ನಗರಿ ಲೋಕಸಭಾ ಚುನಾವಣೆ ಜಿದ್ದಾಜಿದ್ದಿ ಕಣವಾಗಿ ಮಾರ್ಪಟ್ಟಿದೆ ಎನ್ನಬಹುದು.
ವರದಿ:- ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
Lokasabha 2024: ಮೋದಿ ರೋಡ್ ಶೋ ವೇಳೆ ವೇದಿಕೆ ಕುಸಿದು 9 ಮಂದಿಗೆ ಗಾಯ.