Janataa24 NEWS DESK
Badami: ಕಳ್ಳರ ದಂಡನ್ನು ಬೇಟೆಯಾಡಿ 7.90 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡ ಪೋಲೀಸರು

ಬಾಗಲಕೋಟೆ : ಜಿಲ್ಲೆ ಬಾದಾಮಿ ಪೊಲೀಸರಿಂದ ಭರ್ಜರಿ ಕಾರ್ಯಚರಣೆ. ದಿನಾಂಕ 03/04/2024 ರ 11 ಗಂಟೆ ಸುಮಾರಿಗೆ 20 ರಿಂದ 30 ವಯಸ್ಸಿನ 05 ರಿಂದ 6 ಜನ ಅಪರಿಚಿತರು ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಮಲಪ್ರಭಾ ನದಿಯ ಬ್ಯಾರೇಜ್ ಗೇಟ್ ಕಾಯುತ್ತಿದ್ದ ಸಾಕ್ಷಿದಾರ ಗುರುರಾಜ್(Gururaj) ಹಿರೇಮಠ ಈತನ ಕೈಯನ್ನು ಹಗ್ಗದಿಂದ ಕಟ್ಟಿ ಹೆದರಿಸಿ 50,700/ ರೂಪಾಯಿಗಳ ಬೆಲೆಯುಳ್ಳ ಬ್ಯಾರೇಜ್ ಗೇಟುಗಳು ಮತ್ತು ಸಾಕ್ಷಿದಾರ ಗುರುರಾಜ್ ಈತನ ಹತ್ತಿರ ಇದ್ದ 800 ರೂಪಾಯಿಗಳನ್ನು ಒತ್ತಾಯ ಪೂರ್ವಕವಾಗಿ ಕಿತ್ತುಕೊಂಡು ಹೋದ ಬಗ್ಗೆ ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೂಡ್ಸ ವಾಹನದಲ್ಲಿ 05 ಜನ ಆರೋಪಿತರಿಂದ 6,00,000/ರೂಪಾಯಿ ಬೆಲೆಯ ಗೂಡ್ಸ ವಾಹನಗಳು 1,40,000 ರೂಪಾಯಿ ಬೆಲೆಯ 02 ಮೋಟಾರ್ ಸೈಕಲ್(Bike) ಗಳು ಹಾಗೂ 50,700/ ರೂಪಾಯಿ ಬೆಲೆಯ ಕಿಮ್ಮತ್ತಿನ 13 ಬ್ಯಾರೇಜ್ ಗೇಟುಗಳು 800/ ರೂಪಾಯಿ ಜಪ್ತಿ ಮಾಡಿಕೊಂಡಿರುತ್ತಾರೆ. ಒಟ್ಟು 7,91,500 ರೂಪಾಯಿಗಳ ಬೆಲೆಯ ಮಾಲು ಹಾಗೂ ಹಣ ವಶಪಡಿಕೊಂಡಿದ್ದಾರೆ.
ಈ ಪ್ರಕಾರಣವನ್ನು ಪತ್ತೆ ಕುರಿತು ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಅಮರನಾಥ ರೆಡ್ಡಿ, ಬಾಗಲಕೋಟ ಜಿಲ್ಲಾ ಹೆಚ್ಚುವರಿ ಪ್ರಸನ್ನ ದೇಸಾಯಿ,ಮಹಾಂತೇಶ್ ಜಿದ್ದಿ, ವಿಶ್ವನಾಥರಾವ್ ಕುಲಕರ್ಣಿ, ಡಿ. ಎಸ್. ಪಿ. ಹುನಗುಂದ ರವರ ಮಾರ್ಗದರ್ಶನದಲ್ಲಿ ಪ್ರಕರಣಗಳ ಪತ್ತೆಗಾಗಿ ಬಾದಾಮಿ ಸಿ ಪಿ ಐ ಕರಿಯಪ್ಪ. ಬಿ. ಬನ್ನಿ,, ಪಿ. ಎಸ್. ಐ. ವಿಠ್ಠಲ. ಈ ನಾಯಿಕ, ಪೊಲೀಸ್ ಸಿಬ್ಬಂದಿಗಳಾದ ಎ ಎಸ್ ಐ ಪಿ. ಬಿ. ತಳ್ಳಿಕೇರಿ, ಎ. ಎಸ್. ಚವ್ಹಾಣ,ವಿ ಜೆ. ರಾಠೋಡ, ಆನಂದ್ ವಾಲ್ಮೀಕಿ, ಎಮ್. ಬಿ. ಕಬಾಡದ, ವಸಂತ ಒಗ್ಗನ್ನವರ,ಎಮ್. ಎಚ್. ಉಪ್ಪಾರ, ಸಿದ್ದು. ಎಲ್. ಚಲವನ್ನವರ, ಜೆ. ಎಸ್. ಹುಲ್ಲಣ್ಣವರ, ಎಚ್. ಎಸ್. ಮಸಳಿ, ಎಮ್. ಪಿ. ಹರದೊಳ್ಳಿ, ಪಾಲ್ಗೊಂಡಿದ್ದರು.
ವರದಿ:- ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
Dakshina kannada : ಚುನಾವಣೆ ವೇಳೆ ಕರಾವಳಿಯಲ್ಲಿ ಶಂಕಿತ ನಕ್ಸಲರ ಓಡಾಡ.