Janataa24 NEWS DESK
Badami: ಬಾದಾಮಿಯಲ್ಲಿ ಬಿಜೆಪಿ & ಜೆಡಿಎಸ್ ಮೈತ್ರಿ ಪಕ್ಷದಿಂದ ಬೃಹತ್ ಸಮ್ಮೇಳನ.

ಬಾದಾಮಿ: ಬಾದಾಮಿಯಲ್ಲಿ ಭಾರತೀಯ ಜನತಾ ಪಕ್ಷ(BJP) ಹಾಗೂ ಜ್ಯಾತ್ಯಾತೀತ ಜನತಾದಳ(JDS) ಮೈತ್ರಿ ಪಕ್ಷದೊಂದಿಗೆ ಕಾರ್ಯಕರ್ತರ ಬೃಹತ್ ಸಮ್ಮೇಳನ.
ಲೋಕಸಭಾ ಚುನಾವಣೆಯ ರಂಗು ದಿನದಿಂದ ದಿನಕ್ಕೆ ಏರುತ್ತಿದದ್ದು ಕೋಟೆ ನಗರಿ ಬಾಗಲಕೋಟೆ ಜಿದ್ದಾಜಿದ್ದಿ ಕಣವಾಗಿ ಮಾರ್ಪಟ್ಟಿದೆ ಎನ್ನಬಹುದು.
ಭಾರತೀಯ ಜನತಾ ಪಕ್ಷ ಹಾಗೂ ಜ್ಯಾತ್ಯಾತೀತ ಜನತಾ ದಳ ಜೆ. ಡಿ. ಎಸ್(JDS) ಮೈತ್ರಿ ಪಕ್ಷ ಸೇರಿ ಕಾರ್ಯಕರ್ತರ ಸಭೆ ನಡೆಸಿತು. ನಾಡಗೀತೆ ಹಾಡಿ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಬಿ ಜೆ ಪಿ ಪಕ್ಷದ ಬಾಗಲಕೋಟೆ ಜಿಲ್ಲಾಧ್ಯಕ್ಷ ಶಾಂತಗೌಡ. ಟಿ. ಪಾಟೀಲ ಪ್ರಾಸ್ತಾವಿಕ ಭಾಷಣದಲ್ಲಿ ಮಾತನಾಡಿ ಕಾಂಗ್ರೆಸ್ ಸರಕಾರದ ದುರಾಡಳಿತದ ಬಗ್ಗೆ ತರಾಟೆಗೆ ತೆಗೆದುಕೊಂಡು, ಕಾಂಗ್ರೆಸ್ ನ ಒಂದು ಕಾರ್ಯಕ್ರಮದಲ್ಲಿ ಲಕ್ಷಣ ಸವದಿ ಭಾರತ ಮಾತಾ ಕೀ ಜೈ ಎನ್ನಲು ಮಲ್ಲಿಕಾರ್ಜುನ್ ಖರ್ಗೆ ಅವರನ್ನು ನೋಡಿ ತಪ್ಪು ತಿಳಿಯಬೇಡಿ ಎಂದು ಹೇಳಿ ಬೋಲೋ ಭಾರತ ಮಾತಾ ಕೀ ಜೈ ಎಂದು ಹೇಳಿದ್ದಾರೆ ಎಂದರೆ ಭಾರತ ಮಾತೆಗೆ ಜೈ ಹಾಕಲು ಕೂಡ ಕಾಂಗ್ರೆಸ್ ಮುಖಂಡರ ಮುಖ ನೋಡಿ ತಪ್ಪು ತಿಳಿಯಬೇಡಿ ಎಂದು ಹೇಳಿ ಜೈ ಕಾರ ಹಾಕಿರುವ ಪರಿಸ್ಥಿತಿ ಕಾಂಗ್ರೆಸ್ ಮುಖಾಂಡಾರದ್ದಾಗಿದೆ ಎಂದರೆ ಕಾಂಗ್ರೆಸ್ ನಲ್ಲಿ ಮುಖಂಡರು ಭಾರತ ಮಾತಾ ಕೀ ಜೈ ಎನ್ನಲು ಸ್ವತಂತ್ರ ಇಲ್ಲದ ಪರಿಸ್ಥಿತಿ ಇದೇ ಎಂದರೆ ಎಂತಹ ವಿಪರ್ಯಾಸ ಎಂದು ತರಾಟೆಗೆ ತೆಗೆದುಕೊಂಡರು.
ಅದೇ ಬಿ ಜೆ ಪಿ ಯಲ್ಲಿ ದೇಶ ಪ್ರೇಮ ಮೆರೆಯಲು ಯಾವ ಮುಖಂಡನ ಕೇಳದೇ ಮುಖ ನೋಡದೇ ಹೆಮ್ಮೆಯಿಂದ ಭಾರತ್ ಮಾತಾ ಕೀ ಜೈ ಎಂದು ಹೇಳಿ ಭಾಷಣ ಕ್ಕೆ ಮೆರಗು ತರುವ ರಕ್ತಗತ ಇರುವ ದೇಶಭಕ್ತಿ ದೇಶ ಪ್ರೇಮ ಇರುವ ಪಕ್ಷ ಯಾವುದಾದರೂ ಇದ್ದರೆ ಅದು ಭಾರತೀಯ ಜನತಾ ಪಕ್ಷ ಎಂದು ಹೇಳಿದರು.
ಬಿ ಜೆ ಪಿ ಪಕ್ಷದೊಂದಿಗೆ ಜ್ಯಾತ್ಯಾತೀತ ಜನತಾ ದಳ ಮೈತ್ರಿ ಪಕ್ಷ ಮೈತ್ರಿ ಆಗಿದ್ದು ಪಕ್ಷ ಇನ್ನೂ ಬಲಾಡ್ಯವಾಗಿ ಚುನಾವಣೆ ಎದುರಿಸಲು ಸಜ್ಜಾಗಿದೆ. ಜ್ಯಾತ್ಯಾತೀತ ಜನತಾ ದಳ ಜೆ. ಡಿ. ಎಸ್. ಪಕ್ಷದ ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಹಣಮಂತ ಮಾವಿನಮರದವರು ತಮ್ಮದೇ ಆದ ಪ್ರಾಬಲ್ಯ ಹೊಂದಿದ್ದಾರೆ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ ಬಿ ಜೆ ಪಿ ಹಾಗೂ ಜೆ ಡಿ ಎಸ್ ಪಕ್ಷ ಜೊತೆಗೂಡಿ ಲಕ್ಷ ಮತಗಳ ಅಂತರದಿಂದ ಬಿ ಜೆ ಪಿ ಪಕ್ಷದ ಬಾಗಲಕೋಟೆ ಲೋಕಸಭಾ ನಮ್ಮ ಸರಳ ಸಜ್ಜನಿಕೆಯ ಅಭ್ಯರ್ಥಿ ಪಿ ಸಿ ಗದ್ದಿಗೌಡ್ರ ಅವರನ್ನು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ತರಲು ನಮ್ಮೊಂದಿಗೆ ಕೈ ಜೋಡಿಸಿ ಪಣ ತೊಟ್ಟಿದ್ದಾರೆ. ವಿಶ್ವಗುರು ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಲು ದೇಶದ ಜನ ಹಾತೊರೆದು ಸಜ್ಜಾಗಿ ನಿಂತಿದ್ದಾರೆ ಎಂದು ನೆರೆದ ಅಪಾರ ಜನಸ್ತೋಮಕ್ಕೆ ಅಭಿಮಾನಿಗಳಿಗೆ ಕಾರ್ಯಕರ್ತರಿಗೆ ಕರೆ ನೀಡಿದರು.
ಜಾತ್ಯಾತೀತ ಜನತಾದಾಳ ಜೆ ಡಿ ಎಸ್ ಪಕ್ಷದ ಬಾಗಲಕೋಟೆ ಜಿಲ್ಲಾಧ್ಯಕ್ಷ ಹಣಮಂತ ಮಾವಿನಮರದ, ಹಾಗೂ ಅಭ್ಯರ್ಥಿ ಪಿ ಸಿ ಗದ್ದಿಗೌಡ್ರ, ಹಿರಿಯ ಮುಖಂಡರಾದ ಬಿ ಪಿ ಹಳ್ಳೂರ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.ಸಭೆಯಲ್ಲಿ ಬಿ ಜೆ ಪಿ ಪಕ್ಷದ ಬಾಗಲಕೋಟೆ ಜಿಲ್ಲಾಧ್ಯಕ್ಷ ಶಾಂತಗೌಡ. ಟಿ. ಪಾಟೀಲ, ಬಾಗಲಕೋಟೆ ಲೋಕಸಭೆ ಬಿ ಜೆ ಪಿ ಅಭ್ಯರ್ಥಿ ಪಿ ಸಿ ಗದ್ದಿಗೌಡ್ರ, ಜ್ಯಾತ್ಯಾತೀತ ಜನತಾದಳ ಜೆ ಡಿ ಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಹಣಮಂತ ಮಾವಿನಮರದ, ಸೇರದಂತೆ ಸಹಸ್ರಾರು ಕಾರ್ಯಕರ್ತರು ಸಮ್ಮೇಳನದಲ್ಲಿ ಭಾಗಿಯಾಗಿದ್ದರು
ವರದಿ:-ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ.
https://www.janataa24.com/on-15th-gubbi-lokayukta-officials-held-a-public-meeting
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en