Document

Badami: ನೂತನ ಬಿಜೆಪಿ ತಾಲೂಕು ಅಧ್ಯಕ್ಷರ ಆಯ್ಕೆ.

Janataa24 NEWS DESK

Badami: ನೂತನ ಬಿಜೆಪಿ ತಾಲೂಕು ಅಧ್ಯಕ್ಷರ ಆಯ್ಕೆ.

img 20240314 wa00071068627924059431637

ಬಾದಾಮಿ: ಜಿಲ್ಲಾಧ್ಯಕ್ಷರು ಭಾರತೀಯ ಜನತಾ ಪಾರ್ಟಿ(BJP) ಬಾಗಲಕೋಟೆ ಹಾಗೂ ಪಾದಾಧಿಕಾರಿಗಳ ಅಭಿನಂದನಾ ಸಮಾರಂಭ, ಬಾದಾಮಿ ಮಂಡಲದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಯುವಚೇತನ ನಾಗರಾಜ್. ಎಸ್. ಕಾಚಟ್ಟಿ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ.

 


2024 ರ ಲೋಕಸಭೆ ಚುನಾವಣೆ ಸಮೀಪದಲ್ಲೇ ಭಾರತೀಯ ಜನತಾ ಪಾರ್ಟಿ(BJP)ಯಲ್ಲಿ ಪಕ್ಷವನ್ನು ಮತ್ತಷ್ಟು ಬಾಲಾಡ್ಯಗೊಳಿಸುವ ನಿಟ್ಟಿನಲ್ಲಿ ಬಾದಾಮಿ ತಾಲೂಕಾ ಮಂಡಲದ ನೂತನ ಅಧ್ಯಕ್ಷರನ್ನಾಗಿ ಯುವಚೇತನಾ ಪಕ್ಷ ಸಂಘಟನಾ ಚತುರಾ ಯುವ ಮುಖಂಡ ಶ್ರೀ ನಾಗರಾಜ್. ಎಸ್. ಕಾಚಟ್ಟಿ ಯವರನ್ನು ಪಕ್ಷ ಅಧಿಕೃತ ತಾಲೂಕಾ ಮಂಡಲ ಅಧ್ಯಕ್ಷರಾನ್ನಾಗಿ ಆದೇಶ ಹೊರಡಿಸಿದ್ದು ಇಂದು ಅದ್ದೂರಿ ಪದಗ್ರಹಣ ಕಾರ್ಯಕ್ರಮ ನಗರದ ಶ್ರೀ ಅಕ್ಕಮಹಾದೇವಿ ಅನುಭವ ಮಂಟಪದ ಸದಾಶಿವ ಭವನದಲ್ಲಿ ನಡೆಯಿತು.

 


ಕಾರ್ಯಕ್ರಮವನ್ನು ಬಾಗಲಕೋಟೆ ಸಂಸದ ಪಿ ಸಿ ಗದ್ದಿಗೌಡರ, ಜಿಲ್ಲಾಧ್ಯಕ್ಷ ಶಾಂತಗೌಡ. ಟಿ. ಪಾಟೀಲ, ಮುಖಂಡರಾದ ಬಿ. ಪಿ. ಹಳ್ಳೂರ ಸೇರಿದಂತೆ ವೇದಿಕೆಯ ಸರ್ವ ಪದಾಧಿಕಾರಿಗಳು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು.


ನೂತನ ತಾಲೂಕಾ ಮಂಡಲ ಅಧ್ಯಕ್ಷ ನಾಗರಾಜ್. ಎಸ್. ಕಾಚಟ್ಟಿ ಅವರಿಗೆ ಸಂಸದ ಪಿ. ಸಿ ಗದ್ದಿಗೌಡರ ಜಿಲ್ಲಾಧ್ಯಕ್ಷ ಎಸ್. ಟಿ. ಪಾಟೀಲ ಸೇರಿದಂತೆ ಪಕ್ಷದ ಬಾವುಟ ನೀಡಿ ತಾಲೂಕಾ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದರು. ನೂತನ ತಾಲೂಕಾ ಪದಾಧಿಕಾರಿಗಳಿಗೆ ಪುಷ್ಪ ನೀಡಿ ಪದಗ್ರಹಣ ಮಾಡಲಾಯಿತು.

 


ಇದೇ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ಶಾಂತಗೌಡ. ಟಿ. ಪಾಟೀಲ, ಮುತ್ತು ಉಳ್ಳಾಗಡ್ಡಿ ತಾಲೂಕಾ ಮಂಡಲದ ಕಾರ್ಯದರ್ಶಿ ರಾಘವೇಂದ್ರ ದಾಯಪುಲೆ, ರಾಜು ಚಿತ್ತಾರಗಿ, ರಂಗಪ್ಪ ಕೊಳ್ಳಣ್ಣವರ,ನಿರ್ಮಲಾ ಶಿವಾನಾಂದ ಗೌಡರ,, ನಾಗರತ್ನ ಎಣ್ಣಿ, ರೂಪಾ ಹಾನಾಪೂರ, ನಾಗರಾಜ್ ಕಡಗದ, ಶರಣಯ್ಯ ಹಿರೇಮಠ, ಪ್ರಧಾನ ಕಾರ್ಯದರ್ಶಿಗಳಾದ ಕುಮಾರ   ಐಹೊಳೆ, ಶೇಖರಗೌಡ ವಿ. ಪಾಟೀಲ, ಶೇಖರಯ್ಯ ಹಿರೇಮಠ, ಸುಮಂಗಲಾ ಪೂಜಾರ, ಮುತ್ತಪ್ಪ ಕರಡಿಗುಡ್ಡ, ರಮೇಶ್ ವಡ್ಡರ, ಸಂಗಮೇಶ್ ಸಾಳಗುಂದಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಅಪಾರ ಕಾರ್ಯಕರ್ತರು ಉಪಸ್ಥಿತರಿದ್ದರು.

 



ವರದಿ: ರಾಜೇಶ್ ಬಾದಾಮಿ.

https://www.janataa24.com/swami-japananda-swami-is-saving-life-by-giving-water-to-the-dumb-creatures/



ಕೆಳಗಿನ #ಲಿಂಕ್ ಬಳಸಿ #ಜನತಾ24   #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube
https://youtube.com/@janataa24?si=XsFcych2GMH0O6Gv

Document

Leave a Reply

Your email address will not be published. Required fields are marked *