Janataa24 NEWS DESK
Karnataka Police : ಪುತ್ರಿಯ ನೆನಪಿನಲ್ಲಿ ಬಡಮಕ್ಕಳ ಶಿಕ್ಷಣಕ್ಕೆ ASI ಲೋಕೇಶಪ್ಪ ನೆರವು.

ಬೆಂಗಳೂರು : ಆಕಾಲಿಕ ಸಾವಿಗೀಡಾದ ಮಗಳ ಹೆಸರಲ್ಲಿ ಒಬ್ಬ ತಂದೆ ತಮ್ಮ ಪುತ್ರಿ ಹೆಸರಿನಲ್ಲಿ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. 4 ವರ್ಷಗಳ ಕಾಲ ತಮ್ಮೊಂದಿಗಿದ್ದ ಪುತ್ರಿ ಹರ್ಷಾಲಿ ಹೆಸರಿನಲ್ಲಿ ಆಕೆಯ ತಂದೆ ಸಹಾಯಕ ಸಬ್ ಇನ್‌ಸ್ಪೆಕ್ಟರ್(ASI) ಲೋಕೇಶಪ್ಪ ತಮ್ಮ ಒಂದು ತಿಂಗಳ ಸಂಬಳವನ್ನು ಸರ್ಕಾರಿ ಶಾಲೆಯ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಾಗಿಟ್ಟಿದ್ದಾರೆ.
ಬೆಂಗಳೂರಿನ ಶಿವಾಜಿನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ASI ಆಗಿ ಕೆಲಸ ಮಾಡುತ್ತಿರುವ ಲೋಕೇಶಪ್ಪ ಹಾಸನ ಜಿಲ್ಲೆಯ ಅರಸೀಕೆರೆಯ ವಾಲೇಹಳ್ಳಿ ಮೂಲತ್ವದವರು. 2005ರಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಆಗಿ ಪಾದಾರ್ಪಣೆ ಮಾಡಿ ವೃತ್ತಿ ಪ್ರಾರಂಭಿಸಿದರು. ಲೋಕೇಶಪ್ಪ ಮತ್ತು ಪತ್ನಿ ಸುಧಾಮಣಿ ದಂಪತಿಗೆ ಹರ್ಷಾಲಿ ಮತ್ತು ಜನ್ಯಸ್ವರ ಎಂಬ ಇಬ್ಬರು ಹೆಣ್ಣು ಮಕ್ಕಳು. 2019ರಲ್ಲಿ ಶಿವಾಜಿನಗರದ ಪೊಲೀಸ್ ವಸತಿ ಸಮುಚ್ಚಯದ ಕಸದ ರಾಶಿಗೆ ಬಿದ್ದಿದ್ದ ಬೆಂಕಿ ತಗುಲಿ ನಾಲ್ಕು ವರ್ಷದ ಹರ್ಷಾಲಿಗೆ ಶೇ.60ರಷ್ಟು ಸುಟ್ಟ ಗಾಯಗಳಾಗಿತ್ತು. 9 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಫಲಕಾರಿಯಾಗದೆ ಹರ್ಷಾಲಿ ಮರಣ ಹೊಂದಿದಳು.
ಈ ಕೆಟ್ಟ ಘಟನೆಯಿಂದಾಗಿ ವಿಚಲಿತಗೊಂಡ ಲೋಕೇಶಪ್ಪ ದಂಪತಿ, ಮಗಳ ಹೆಸರನ್ನು ಶಾಶ್ವತವಾಗಿ ಇಡಲು ನಿರ್ಧರಿಸಿ, ಅದೇ ವರ್ಷ ‘ಹರ್ಷಾಲಿ ಫೌಂಡೇಶನ್’ (Harshali Foundation)ಸ್ಥಾಪಿಸಿ ಪ್ರಾರಂಭಿಸಿದರು. ಈ ಫೌಂಡೇಷನ್ ಮೂಲಕ ಸರ್ಕಾರಿ ಶಾಲೆಯ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯವಾಗುತ್ತಿದ್ದರು. ಅದಕ್ಕಾಗಿ ತಮ್ಮ ಒಂದು ತಿಂಗಳ ವೇತನವನ್ನು ಮೀಸಲಿಟ್ಟಿದ್ದರು. ಅವರ ಸಮಾಜಮುಖೀ ಸೇವೆ ಗಮನಿಸಿದ ಸಹೋದ್ಯೋಗಿಗಳು, ಸಂಬಂಧಿಕರು ಹಾಗೂ ಸ್ನೇಹಿತರು ಕೂಡ ಆರ್ಥಿಕ ನೆರವು ನೀಡಿ ಪ್ರತಿ ವರ್ಷ ಆರು ಸರ್ಕಾರಿ ಶಾಲೆಯ ಬಡ ಮಕ್ಕಳ(Poor Student) ವಿದ್ಯಾಭ್ಯಾಸಕ್ಕೆ ಬೇಕಾಗುವ ಪುಸ್ತಕ, ಪೆನ್ನು, ನೋಟ್ ಬುಕ್‌ಗಳು ಸೇರಿ ವಿವಿಧ ಶೈಕ್ಷಣಿಕ ಸಾಮಗ್ರಿಗಳನ್ನು ನೀಡುತ್ತಾ ಇತರೆ ಸಿಬ್ಬಂದಿಗಳಿಗೆ ಮತ್ತು ಜನಸಾಮಾನ್ಯರಿಗೆ ಮಾದರಿಯಾಗಿದ್ದಾರೆ.
ಸತ್ತವರ ಹೆಸರಲ್ಲಿ ದೊಡ್ಡ ಗೋರಿ ಶಿಖರ ಕಟ್ಟಿಸುವ ಸಮಾಜದಲ್ಲಿ ತಮ್ಮ ಮರಣ ಹೊಂದಿದ ಮಗಳ ಹೆಸರಲ್ಲಿ ಪ್ರತಿ ತಿಂಗಳು ಮಕ್ಕಳ ಶಿಕ್ಷಣಕ್ಕೆ ಪೋಲಿಸ್ ಅಧಿಕಾರಿ ನೆರವಾಗುತ್ತಿರುವುದು ಹೆಮ್ಮೆಯ ವಿಷಯ .
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
Student Death : ಪರೀಕ್ಷ ವೇಳೆ ಆಸ್ವಸ್ಥಗೊಂಡ ವಿದ್ಯಾರ್ಥಿ, ಆಸ್ವತ್ರೆಗೆ ಸಾಗಿಸುವ ವೇಳೆ ಸಾವು.