Document

Turuvekere: ಟಿಟಿಡಿ ಇಂದ ಕಣಕೂರು ಗ್ರಾಮಕ್ಕೆ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಆಗಮನ.

JANATAA24 NEWS DESK 

 

 

 

 

Turuvekere: ಟಿಟಿಡಿ ಇಂದ ಕಣಕೂರು ಗ್ರಾಮಕ್ಕೆ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಆಗಮನ.

 

Turuvekere, ttd

ತುರುವೇಕೆರೆ:  ಫೆಬ್ರವರಿ 4 ರಿಂದ 6 ರ ವರೆಗೆ ತುರುವೇಕೆರೆ ತಾಲೂಕಿನ ಕಣಕೂರು ಗ್ರಾಮದಲ್ಲಿ ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಲಕ್ಷ್ಮಿ ವೆಂಕಟೇಶ್ವರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಸೇರುವ ನಿರೀಕ್ಷೆ ಇದೆ ಎಂದು ಬಾಲಾಜಿ ಟ್ರಸ್ಟ್ ಸಂಸ್ಥಾಪಕ ಕುಮಾರ್ ವ್ಯಕ್ತಪಡಿಸಿದ್ದಾರೆ, ಇನ್ನು ಮುಂದುವರೆದು ಮಾತನಾಡಿದ ಅವರು ಈ ಕಲ್ಯಾಣೋತ್ಸವದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ತಿರುಪತಿ ಲಡ್ಡು ಪ್ರಸಾದ ವಿತರಿಸಲಾಗುವುದು ಇದರ ತಯಾರಿಕೆಗಾಗಿಯೇ ತಿರುಪತಿಯಿಂದಲೇ ಲಡ್ಡು ತಯಾರಿ ಮಾಡುವವರು ಆಗಮಿಸಿದ್ದು ಸುಮಾರು ಒಂದುವರೆ ಲಕ್ಷಕ್ಕೂ ಹೆಚ್ಚು ಲಡ್ಡು ಪ್ರಸಾದ ಪ್ರತಿಯೊಬ್ಬ ಭಕ್ತರಿಗೂ ದೊರಯಲಿದೆ.

 

ಫೆಬ್ರವರಿ 6 ರಂದು ಸಂಜೆ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ಕಲ್ಯಾಣೋತ್ಸವದಲ್ಲಿ, ಹೋಮ ಹವನಗಳು ನಡೆಯಲಿದ್ದು,ಸುಮಾರು ನಾಲಕ್ಕು ನಾಲ್ಕೈದು ಎಕರೆ ಜಾಗದಲ್ಲಿ ಸ್ವಾಮಿಯ ಕಲ್ಯಾಣೋತ್ಸವಕ್ಕಾಗಿ ವೇದಿಕೆ ಸಿದ್ಧವಾಗಲಿದ್ದು ವೇದಿಕೆಯ ಪೂರ್ಣ ಕಾರ್ಯಕ್ರಮ ಟಿಟಿಡಿ ಯಿಂದಲೇ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಭಕ್ತರಿಗೂ ಅನುಕೂಲವಾಗಲೆಂದು ವೃದ್ಧರಿಗೆ, ಮಹಿಳೆಯರಿಗೆ, ಗಂಡಸರಿಗಾಗಿ ವಿಶೇಷವಾದ ಕೌಂಟರ್ ಗಳನ್ನು ತೆರೆದಿದ್ದು ಫೆಬ್ರವರಿ 4ರಿಂದ 6 ರ ಹೊರಗೆ ಪ್ರತಿದಿನ ಮಹಾ ದಾಸೋಹ ನಡೆಯಲಿದ್ದು ಯಾವುದೇ ನೂಕು ನುಗ್ಗಲುಗಳಾಗದೆ ಇರುವ ಹಾಗೆ ಪ್ರತಿಯೊಂದು ವ್ಯವಸ್ಥೆಗಳನ್ನು ಮಾಡಿದ್ದು ಜೊತೆಗೆ ಭಕ್ತಾದಿಗಳು ಆಗಮಿಸಲು ಸಮಯಕ್ಕೆ ಕೆ ಎಸ್ ಆರ್ ಟಿ ಸಿ ಬಸ್ಗಳ ವ್ಯವಸ್ಥೆಯನ್ನು ಮಾಡಲಾಗಿದ್ದು,

 

ಜೊತೆಗೆ ಕಾರ್ಯಕ್ರಮದಲ್ಲಿ ಪೋಲಿಸ್ ಇಲಾಖೆಯಿಂದ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸುವಂತೆ ಕೋರಿ ಈಗಾಗಲೇ ಸಂಬಂಧಪಟ್ಟ ಎಸ್ ಪಿ ಅವರಿಗೆ ಮಾಹಿತಿ ನೀಡಿದ್ದು ಅವರು ಸಹ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದು ಜಿಲ್ಲಾಧಿಕಾರಿ ಸಹ ಖುದ್ದು ಹಾಜರಿದ್ದು ಸಹಕರಿಸುವ ಭರವಸೆ ನೀಡಿದ್ದು ಈ ಕಾರ್ಯಕ್ರಮವು ಪೊಲೀಸ್ ಕಣ್ಗಾವಲಿನಲ್ಲಿ, ಸಿಸಿಟಿವಿ ಕಣ್ಗಾವಲಿನಲ್ಲಿ, ಹಾಗೂ ಟಿಟಿಡಿಯ ಸೆಕ್ಯೂರಿಟಿ ಫೋರ್ಸ್ ಕೂಡ ಇದರ ಕಟ್ಟೆಚ್ಚರ ವಹಿಸಲಿದ್ದು ಭಕ್ತಾದಿಗಳಿಗೆ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣೋತ್ಸವವನ್ನೂ ಕಣ್ತುಂಬಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶ ಎಂದರು. ಈ ಕಾರ್ಯಕ್ರಮವು ಕಣಕೂರು ಗ್ರಾಮ ಹಾಗೂ ಬಾಲಾಜಿ ಟ್ರಸ್ಟ್ ವತಿಯಿಂದ ನಡೆಯುತ್ತಿದ್ದು ಗ್ರಾಮಸ್ಥರುಗಳು ಸಹ ಎಲ್ಲಾ ರೀತಿಯ ಸಹಕಾರ ನೀಡಿ ಈ ಅದ್ದೂರಿ ಕಲ್ಯಾಣೋತ್ಸವಕ್ಕೆ ಕೈಜೋಡಿಸಿದ್ದಾರೆ ಎಂದರು.

 

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.


Document

Leave a Reply

Your email address will not be published. Required fields are marked *