Document

AAP: ಅರವಿಂದ್ ಕೇಜ್ರಿವಾಲ್ ಬಂಧನ ವಿರೋಧಿಸಿ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ

JANATAA24 NEWS DESK 

AAP: ಅರವಿಂದ್ ಕೇಜ್ರಿವಾಲ್ ಬಂಧನ ವಿರೋಧಿಸಿ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ

 

AAP,arvind kejriwal,
AAP: ಅರವಿಂದ್ ಕೇಜ್ರಿವಾಲ್ ಬಂಧನ ವಿರೋಧಿಸಿ ಫ್ರೀಡಂ ಪಾರ್ಕ್ ನಲ್ಲಿಬೃಹತ್ ಪ್ರತಿಭಟನೆ

 

ಉದ್ದೇಶಪೂರ್ವಕವಾಗಿ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರನ್ನು ಭಾರತೀಯ ಜನತಾ ಪಕ್ಷ ಬಂಧನ ಮಾಡಿರುವುದನ್ನು ವಿರೋಧಿಸಿ ನರೇಂದ್ರ ಮೋದಿ ವಿರುದ್ಧ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

 

ಪ್ರತಿಭಟನೆಗೆ ಕನ್ನಡ ಪರ ಸಂಘಟನೆಗಳು, ಕಾಂಗ್ರೆಸ್ ಪಕ್ಷ, ಇನ್ನೂ ಹಲವಾರು ಕಮ್ಯುನಿಸ್ಟ್ ಪಕ್ಷಗಳು ಸಾಥ್ ನೀಡಿದ್ದವು. ಅಪಾರ ಪ್ರಮಾಣದಲ್ಲಿ ಸೇರಿ ಕೇಂದ್ರದ ಬಿ ಜೆ ಪಿ(BJP) ಗೆ ಅರವಿಂದ್ ಕೇಜ್ರಿವಾಲ್(Arvind Kejriwal) ಅವರಿಗೆ ಜನರು ಬೆಂಬಲ ವ್ಯಕ್ತಪಡಿಸುತ್ತಿರುವದನ್ನು ಕಂಡು ಮೋದಿ ನಿದ್ದೆಗೆಡಿಸಿದೆ.

ಚುನಾವಣಾ ಸಮಯದಲ್ಲಿ ಪ್ರಚಾರಕ್ಕೆ ಬರದೇ ಇರುವ ಹಾಗೆ ಈಡಿ(Enforcement Directorate) ದಾಳಿ ಮಾಡಿಸಿ ಬಂಧನ ಮಾಡಿಸಿರುವುದು ಬಿ ಜೆ ಪಿ ಪಕ್ಷದ ಹುನ್ನಾರ ಇಡೀ ದೇಶಕ್ಕೆ ಗೊತ್ತಾಗಿದೆ ಇದಕ್ಕೆ ತಕ್ಕ ಪಾಠ ದೇಶದ ಜನತೆ ಚುನಾವಣೆಯಲ್ಲಿ ಕಲಸುತ್ತಾರೆ.

 

ನರೇಂದ್ರ ಮೋದಿ ಸರ್ವಧಿಕಾರಿ(Dictatorship) ಧೋರಣೆ ತೋರುತ್ತಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಜನಪ್ರಿಯತೆ ಸಹಿಸದ ಸರ್ವಾಧಿಕಾರಿ ಧೋರಣೆ ಹೊಂದಿರುವ ನರೇಂದ್ರ ಮೋದಿ ತನ್ನ ಅಧಿಕಾರ ಪ್ರಯೋಗ ಮಾಡಿ ಈಡಿ ದಾಳಿ ಮಾಡಿಸಿ ಕೇಜ್ರಿವಾಲ್ ಅವರನ್ನು ಬಂಧಿಸಿರುವುದನ್ನು ಇಡೀ ದೇಶಕ್ಕೆ ಇವರ ಸಂಚು ಗೊತ್ತಾಗಿದೆ. ಇದಕ್ಕಾ ಗಿ ನಾವು ಹಾಗೂ ಅನೇಕ ಮಿತ್ರ ಪಕ್ಷಗಳಾದ ಭಾರತ ರಾಷ್ಟ್ರೀಯ ಕಾಂಗ್ರೆಸ್,, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಪಿಐ)ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕ್ಸ್ ವಾದಿ ಸಿಪಿಐ(ಎಂ), ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( ಎಸ್ ಡಿ ಪಿ ಐ, ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ, ಕನ್ನಡ ಚಳುವಳಿ ಕೇಂದ್ರ,, ಜಯ ಕರ್ನಾಟಕ,, ಜಯ ಕರ್ನಾಟಕ ಜನಪರ ವೇದಿಕೆ, ಕರ್ನಾಟಕ ಖಾಸಗಿ ಶಾಲಾ ಕಾಲೇಜು ಪೋಷಕರ ಸಂಘಟನೆಗಳ ಸಮನ್ವಯ ಸಮಿತಿ,, ಕರ್ನಾಟಕ ರಾಜ್ಯ ಮಾಜಿ ಸೈನಿಕರ ಸಂಘ ನಮಗೆ ಸಾಥ್ ಕೊಟ್ಟುದ್ದು ತುಂಬಾ ಖುಷಿ ತಂದಿದೆ ಎಂದು ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಮಾದ್ಯಮದ ಎದುರು ಹೇಳಿದರು.

ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರವರ ಬಂಧನ ವಿರೋಧಿಸಿ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆಯಲ್ಲಿ  ಆಮ್ ಆದ್ಮಿ ಪಕ್ಷದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ತೆರಿಗೆ ಸಲಹೆದಾರರಾದ ಆನಂದ್ ದೇವಾಡಿಗ ಭಾಗವಹಿಸಿದ್ದರು

ಪ್ರತಿಭಟನೆ ವೇದಿಕೆಯಲ್ಲಿ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಆಮ್ ಆದ್ಮಿ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಲೋಹಿತ್ ಹನುಮಾಪುರ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್ ಸಹಾನಿ, ಸಂಘಟನಾ ಕಾರ್ಯದರ್ಶಿ ಬಿ ಟಿ ನಾಗಣ್ಣ,, ಮೋಹನ್ ದಾಸರಿ, ಉಪಾಧ್ಯಕ್ಷ ರುದ್ರಯ್ಯ ನವಲಿಹಿರೇಮಠ, ಆಮ್ ಆದ್ಮಿ ಪಕ್ಷದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಹಾಗೂ ತೆರಿಗೆ ಸಲಹೆದಾರರಾದ ಆನಂದ್ ದೇವಾಡಿಗ,ಹಾಗೂ ಧರ್ಮಶ್ರೀ, ರಿತಿನ್ ರಾಜ್ಯಪಾಲ್, ಸೇರಿದಂತೆ ಇನ್ನೂ ಅನೇಕ ಪಕ್ಷದ ಮುಖಂಡರು ಪದಾಧಿಕಾರಿಗಳು ಸಹಸ್ರ ಸಂಖ್ಯೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

 

ವರದಿ:- ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ

 

https://www.janataa24.com/4-year-old-child-died-in-a-terrible-road-acciden/

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

Subscribe YouTube

https://youtube.com/@janataa24?si=XsFcych2GMH0O6Gv

Document

Leave a Reply

Your email address will not be published. Required fields are marked *