Janataa24 NEWS DESK
Bagalakote : ಕಾಂಗ್ರೆಸ್ ನ ಅಭ್ಯರ್ಥಿ ಸಂಯುಕ್ತ ಪಾಟೀಲ ಗೆ ಬೆಂಬಲ ಸೂಚಿಸಿದ ಆಮ್ ಆದ್ಮಿ ಪಕ್ಷದ ಯುವ ರಾಜ್ಯ ಉಪಾಧ್ಯಕ್ಷ ಆನಂದ

ಬಾಗಲಕೋಟೆ: ಲೋಕಸಭಾ ಚುನಾವಣೆಯ ಬಾಗಲಕೋಟೆ ಮತಕ್ಷೇತ್ರದ ಕಾಂಗ್ರೆಸ್ ನ ಅಭ್ಯರ್ಥಿ ಸಚಿವ ಶಿವಾನಂದ ಪಾಟೀಲ ಅವರ ಪುತ್ರಿ ಸಂಯುಕ್ತ ಪಾಟೀಲ (Samyuktha Patela)ಅವರಿಗೆ ಆಮ್ ಆದ್ಮಿ ಪಕ್ಷದ ಯುವ ಘಟಕದಿಂದ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಾಯಿತು.
ಬಾದಾಮಿ ನಗರದ ಹೆರಿಟೇಜ್ ರೆಸಾರ್ಟ್ ನಲ್ಲಿ ಲೋಕಸಭಾ ಅಭ್ಯರ್ಥಿ ಯುವ ನಾಯಕಿ ಸಂಯುಕ್ತ ಪಾಟೀಲ್ ಅವರಿಗೆ ಪ್ರಚಾರದ ಮೊದಲನೇ ದಿನವೇ ಆಮ್ ಆದ್ಮಿ ಪಕ್ಷದ ಯುವ ಘಟಕದಿಂದ ಭಾರೀ ಬೆಂಬಲ ವ್ಯಕ್ತವಾಗಿದೆ.
ಆಮ್ ಆದ್ಮಿ ಪಕ್ಷದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಹಾಗೂ ತೆರಿಗೆ ಸಲಹೆದಾರರಾದ ಆನಂದ್ ದೇವಾಡಿಗ ಅವರು ಶಾಲು ಹೊದಿಸಿ ಸನ್ಮಾನ ಮಾಡಿ ರಾಜ್ಯದ ಆಮ್ ಆದ್ಮಿ ಪಕ್ಷದ ಯುವ ಘಟಕದಿಂದ ನಮ್ಮ ವರಿಷ್ಠರ ಆದೇಶದಂತೆ ನಮ್ಮ ಸಂಪೂರ್ಣ ಬೆಂಬಲ ನಿಮಗೆ ನೀಡುತ್ತೇವೆ. ನಿಮ್ಮ ಗೆಲುವಿಗಾಗಿ ನಾವು ಶ್ರಮಿಸುತ್ತೇವೆ ಎಂದು ರಾಜ್ಯ ಯುವಘಟಕದ ವತಿಯಿಂದ ಭರವಸೆ ನೀಡಿದರು.
ನಂತರ ಮಾದ್ಯಮದ ಜೊತೆ ಮಾತನಾಡಿ ಬಾಗಲಕೋಟೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಹೋದರಿ ಸಂಯುಕ್ತ ಪಾಟೀಲ ಅವರ ಗೆಲುವಿಗಾಗಿ ಆಮ್ ಆದ್ಮಿ ಪಕ್ಷದ ಯುವ ಘಟಕ ಬದ್ದವಾಗಿ ನಿಲ್ಲುತ್ತದೆ ಎಂದು ಆಮ್ ಆದ್ಮಿ ಪಕ್ಷದ ಯುವ ಘಟಕದ ರಾಜ್ಯ ಉಪಾಧ್ಯಕ್ಷರು ಹಾಗೂ ತೆರಿಗೆ ಸಲಹೆದಾರರಾದ ಆನಂದ್ ದೇವಾಡಿಗ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಯುವಘಟಕದ ರಾಜ್ಯ ಉಪಾಧ್ಯಕ್ಷರು ಹಾಗೂ ತೆರಿಗೆ ಸಲಹೆದಾರರಾದ ಆನಂದ್ ದೇವಾಡಿಗ, ವೀರಭದ್ರಯ್ಯ ಕಟಗಿಹಳ್ಳಿಮಠ ( ಆಮ್ ಆದ್ಮಿ ಪಕ್ಷದ ಬಾಗಲಕೋಟೆ ಜಿಲ್ಲೆ ವಿಧಾನಸಭಾ ಅಧ್ಯಕ್ಷರು),, ಪ್ರಕಾಶ್ ಹೊಸಮನಿ( ಆಮ್ ಆದ್ಮಿ ಪಕ್ಷದ ಯುವಘಟಕದ ಬಾಗಲಕೋಟೆ ಜಿಲ್ಲಾ ವಿಧಾನಸಭಾ ಕಾರ್ಯದರ್ಶಿ) ಮಂಜುನಾಥ ಬಂಡಿವಡ್ಡರ( ಆಮ್ ಆದ್ಮಿ ಪಕ್ಷದ ಯುವ ಘಟಕದ ತಾಲೂಕಾಧ್ಯಕ್ಷ ) ಉಪಸ್ಥಿತರಿದ್ದರು.
ವರದಿ:- ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
RCB : ನಿವೃತ್ತಿ ಬಗ್ಗೆ ಸ್ಪಷ್ಟನೆ ನೀಡಿದ ಆರ್ ಸಿ ಬಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್.