Document

Gadag: ಶಸ್ತ್ರಚಿಕಿತ್ಸೆ ವೇಳೆ ಪ್ರಾಣ ಬಿಟ್ಟ ವ್ಯಕ್ತಿ, ಮನೆಗೆ ಬಂದ ತಕ್ಷಣ ಉಸಿರಾಡಿದ ನಾರಾಯಣ.

JANATAA24 NEWS DESK 

 

Gadag: ಶಸ್ತ್ರಚಿಕಿತ್ಸೆ ವೇಳೆ ಪ್ರಾಣ ಬಿಟ್ಟ ವ್ಯಕ್ತಿ, ಮನೆಗೆ ಬಂದ ತಕ್ಷಣ ಉಸಿರಾಡಿದ ನಾರಾಯಣ.
&nbsp
Gadag: ಶಸ್ತ್ರಚಿಕಿತ್ಸೆ ವೇಳೆ ಪ್ರಾಣ ಬಿಟ್ಟ ವ್ಯಕ್ತಿ, ಮನೆಗೆ ಬಂದ ತಕ್ಷಣ ಉಸಿರಾಡಿದ ನಾರಾಯಣ.;

Gadag: ಸತ್ತವನು ಮತ್ತೆ ಜೀವಂತ

 

ಸತ್ತವನು ನಿಜಕ್ಕೂ ಬದುಕಿದ್ನಾ? ಹೇಗೆ ಸತ್ತ? ಹೇಗೆ ಬದುಕಿದ ಎನ್ನುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಗದಗ ಬೆಟಗೇರಿ ನಿವಾಸಿ ನಾರಾಯಣ ವನ್ನಾಲ್ (38) ಸತ್ತ ಗಂಟೆಗಳಲ್ಲೇ ಮತ್ತೆ ಬದುಕಿದ ಪವಾಡ ಪುರುಷನಾಗಿದ್ದಾನೆ. ಈತ ಪಿತ್ತಕೋಶದ ಸಮಸ್ಯೆಯಿಂದ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದ ಎನ್ನಲಾಗ್ತಿದೆ.

 

ಸಾವನ್ನಪ್ಪಿದ್ದಾನೆಂದು ಘೋಷಿಸಿದ ವೈದ್ಯರು

 

ಸುಮಾರು ಆರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆದಿತ್ತು. ಬಳಿಕ ವೈದ್ಯರು ಚಿಕಿತ್ಸೆ ಫಲಿಸಲಿಲ್ಲ ನಾರಾಯಣ ವನ್ನಾಲ್ ಮೃತ ಪಟ್ಟಿದ್ದಾನೆಂದು ಕುಟುಂಬಸ್ಥರಿಗೆ ತಿಳಿಸಿದ್ದಾರೆ.

 

ಮೃತದೇಹವನ್ನು ಕುಟುಂಬಸ್ಥರು ಆ್ಯಂಬುಲೆನ್ಸ್‌ ನಲ್ಲಿ ಗದಗದ ಬೆಟಗೇರಿಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿದ್ರು.

 

ಮನೆಗೆ ದೇಹ ತರ್ತಿದ್ದಂತೆ ಉಸಿರಾಟ

 

ನಾರಾಯಣ ಸಾವಿನ ಸುದ್ದಿ ಕೇಳಿ ಗ್ರಾಮಸ್ಥರು ಶಾಕ್ ಆಗಿದ್ರು. ಸ್ನೇಹಿತನಿಗೆ ಗೆಳಯರು “ಮತ್ತೆ ಹುಟ್ಟಿ ಬಾ”, “ಆತ್ಮಕ್ಕೆ ಶಾಂತಿ ಸಿಗಲಿ”, “ಭಾವಪೂರ್ಣ ಶ್ರದ್ಧಾಂಜಲಿ” ಎಂಬ ಬ್ಯಾನರ್‌ಗಳನ್ನ ಹಾಕಿದ್ರು. ಸೋಶಿಯಲ್ ಮೀಡಿಯಾದಲ್ಲೂ ನಾರಾಯಣ ಅವರ ನಿಧನ ಸುದ್ದಿ ವೈರಲ್ ಆಗಿ ಅನೇಕ ಜನರಿಗೆ ಮುಟ್ಟಿತ್ತು. ಆದ್ರೆ ಆತನ ಮೃತ ದೇಹವನ್ನ ಮನೆಗೆ ಕೊಂಡೊಯ್ದ ಬಳಿಕ ಅಚ್ಚರಿ ಘಟನೆ ನಡೆದಿದೆ. ನಾರಾಯಣ ಮತ್ತೆ ಉಸಿರಾಡಲು ಆರಂಭಿಸಿದ್ದ ಎನ್ನಲಾಗ್ತಿದೆ.

 

ಮತ್ತೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ

 

ನಾರಾಯಣ ಉಸಿರಾಡ್ತಿರುವುದನ್ನ ಕಂಡು ಅಚ್ಚರಿಗೊಂಡ ಕುಟುಂಬಸ್ಥರು ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ರು. ಬೆಟಗೇರಿಯ ಖಾಸಗಿ ಆಸ್ಪತ್ರೆಯಲ್ಲೇ ಆತನಿಗೆ ಚಿಕಿತ್ಸೆ ನೀಡಲಾಗ್ತಿದೆ.

 

ನಿಜಕ್ಕೂ ಸತ್ತವನು ಮತ್ತೆ ಬದುಕಿದ್ನಾ?

 

ನಿಜಕ್ಕೂ ಸತ್ತವನು ಮತ್ತೆ ಬದುಕಿದ್ನಾ? ಅಥವಾ ಇದು ವೈದ್ಯರ ಎಡವಟ್ಟ ಅನ್ನೋದು ತಿಳಿದು ಬರಬೇಕಿದೆ. ಏನೇ ಆದ್ರೂ ನಾರಾಯಣ ಸಾವನ್ನೇ ಗೆದ್ದು ಬಂದವನು ಅಂತ ಜನರು ಮಾತಾಡಿಕೊಳ್ತಿದ್ದಾರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.


Document

Leave a Reply

Your email address will not be published. Required fields are marked *