Janataa24 NEWS DESK
MP Election: ಶಿವಮೊಗ್ಗ ಜಿಲ್ಲೆಯ ಧ್ವನಿಯಾಗಿ ಗೀತಾ ಕೆಲಸ ಮಾಡುತ್ತಾರೆ – ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ದಿನೇ ದಿನೇ ಲೋಕಸಭಾ ಚುನಾವಣಾ ಕಾವು ಹೆಚ್ಚಾಗಿದ್ದು ರಾಜ್ಯ, ರಾಷ್ಟ್ರ ರಾಜಕೀಯ ತೀವ್ರ ಸಂಚಲನ ಮೂಡಿಸುತ್ತಿದೆ. ದೊಡ್ಮನೆ ಕುಟುಂಬದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ (Geetha Shivaraj Kumar)ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ದುಮ್ಮುಕಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಇಂದು ಪ್ರಚಾರ ಕೈಗೊಂಡಿದ್ದು, ಗೀತಾ ಅವರಿಗೆ ಪತಿ ಶಿವರಾಜ್ ಕುಮಾರ್ ಹಾಗೂ ಸಚಿವ ಮಧು ಬಂಗಾರಪ್ಪ ಅವರು ಸಾಥ್ ನೀಡಿದರು.
ಕೆಲವೇ ದಿನಗಳು ಬಾಕಿ ಉಳಿದಿರುವಾಗ ಟಿಕೆಟ್ ಘೋಷಣೆಯಾಗಿರುವ ಕ್ಷೇತ್ರದಲ್ಲಿ ರಾಜಕೀಯ ರಣರಂಗ ಜೋರಾಗಿದ್ದು. ತೊಡಕು ಮುನಿಸುಗಳಿಗೆ ಮಾತಿನಲ್ಲಿ ಸಮಾಧಾನಿಸಿ ಪಕ್ಷ ಸಂಘಟನೆಯಲ್ಲಿ ಬೆರೆತು ಗೆಲವುಗಾಗಿ ಶ್ರಮಿಸಿ ಎಂದು ತೋಡಿಕೊಳ್ಳುತ್ತಿದ್ದರೆ.
ಲೋಕಸಭಾ ಚುನಾವಣೆ ಬಿರುಸು ಹೆಚ್ಚಾಗಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಶಿವ ರಾಜ್ಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಈ ಹಿನ್ನಲೆ ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ ನಮ್ಮ ತಂದೆಯ ಸೋಲಿನ ಸೇಡು ತಿರಿಸಿಕೊಳ್ಳಬೇಕಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
ಅಭ್ಯರ್ಥಿಗಳ ಪಟ್ಟಿ ಹೊರಬಿದ್ದ ಬಳಿಕ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಗೀತಾ ಶಿವ ರಾಜ್ಕುಮಾರ ಅವರು ಆಗಮಿಸಿದ್ದು, ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿ ಎಂಆರ್ ಎಸ್ ವೃತ್ತದಿಂದ ಲಗಾನ್ ಕಲ್ಯಾಣ ಮಂದಿರದವರೆಗೆ ಬೃಹತ್ ಬೈಕ್ ರ್ಯಾಲಿ ನಡೆಸಿದರು. ಗೀತಾಗೆ ಪತಿ ಶಿವರಾಜ್ ಕುಮಾರ್ ಹಾಗೂ ಸಚಿವ ಮಧು ಬಂಗಾರಪ್ಪ ಅವರು ಸಾಥ್ ನೀಡಿದರರು ಬಳಿಕ ಮಾತನಾಡಿದ ಅವರು, ‘ಗೀತಕ್ಕ ಅವರನ್ನು ನಾವು ನಿಮ್ಮ ಮಡಿಲಿಗೆ ಹಾಕಿದ್ದೇವೆ. ಶಿವಮೊಗ್ಗ ಜಿಲ್ಲೆಯ ಧ್ವನಿಯಾಗಿ ಗೀತಾ ಕೆಲಸ ಮಾಡುತ್ತಾರೆ ಎಂದು ಗೀತಾ ಶಿವರಾಜ್ ಕುಮಾರ್ ಪರ ಮತಯಾಚನೆ ಮಾಡಿದರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
UPSC: ಲೋಕಸಭಾ ಚುನಾವಣಾ ಹಿನ್ನೆಲೆ Prelims ಪರೀಕ್ಷೆ ಮುಂದೂಡಿದ UPSC ಆಯೋಗ