Janataa24 NEWS DESK
2024 IPL : ಇಂದಿನಿಂದ ಐಪಿಎಲ್ ಆರಂಭ ಸಿಎಸ್ ಕೆ ಆರ್ ಸಿ ಬಿ ಮುಖಾಮುಖಿ

ಬೆಂಗಳೂರು: ಇಂದಿನಿಂದ ಕ್ರಿಕೆಟ್ ಐಪಿಎಲ್ ಹಬ್ಬ ಶುರು ಅಭಿಮಾನಿಗಳಲ್ಲಿ ಹೆಚ್ಚಿದ ಕ್ರಿಕೆಟ್ ಹುಚ್ಚು. ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಕಾತುರದಲ್ಲಿ ನಿಂತು ಕಾಯುತ್ತಿರುವ ಐಪಿಎಲ್ 2024 ಕ್ಕೆ ಇಂದು ಚಾಲನೆ .ಸಿಎಸ್ ಕೆ ಹಾಗೂ ಅರ್ ಸಿ ಬಿ (RCB / CSK) ಮುಖಾಮುಖಿ ಪಂದ್ಯದಿಂದ ಚಾಲನೆ ಸಂಜೆ 6:30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆದರೆ, ರಾತ್ರಿ 8 ಗಂಟೆಗೆ ಸಿಎಸ್ಕೆ ಹಾಗೂ ಆರ್ಸಿಬಿ ನಡುವೆ ಚೆಪಾಕ್ ಸ್ಟೇಡಿಯಂನಲ್ಲಿ ಮೊದಲ ಪಂದ್ಯ.
ಪ್ರತಿವರ್ಷದಂತೆ ಈ ವರ್ಷ ಪಂದ್ಯಗಳ ಮೇಲೆ ಹೆಚ್ಚಿನ ನೀರಿಕ್ಷೆಯಿದ್ದು ಅಭಿಮಾನಿಗಳು ಅವರ ತಂಡ ಈ ಬಾರಿಯಾದರೂ ಕಪ್ ಗೆಲ್ಲುತ್ತದೆ ಎನ್ನವ ಆಸೆ ಈಡೇರುತ್ತಾ..? ಬಹುನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇಂದು ಚಾಲನೆ ಸಿಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ನಾಯಕತ್ವದ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಫಾಫ್ ಡುಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿ ಆಗಲಿವೆ.
ಇದರ ಜೊತೆಗೆ ಇಂದು ಸಂಜೆ 6.30ಕ್ಕೆ ಉದ್ಘಾಟನಾ ಸಮಾರಂಭ ಕೂಡ ಆಯೋಜಿಸಲಾಗಿದೆ. ಪಂದ್ಯದ ಟಿಕೆಟ್ ಸಂಪೂರ್ಣ ಮೊದಲ ಹೈ ವೋಲ್ಟೇಜ್ ಕದನ ವೀಕ್ಷಣೆಗೆ ಸೋಲ್ಡ್ ಔಟ್ ಆಗಿದ್ದು, ರಣರೋಚಕ ಕದನ ನಿರೀಕ್ಷಿಸಲಾಗಿದೆ.
ರುತುರಾಜ್ ಗಾಯಕ್ವಾಡ್ ಅವರ ತಂಡವು ಡೆವೊನ್ ಕಾನ್ವೇ ಅವರ ಅನುಪಸ್ಥಿತಿಯಲ್ಲಿದ್ದು, ಆರಂಭಿಕ ಸ್ಲಾಟ್ಗೆ ಯಾರು ಆಯ್ಕೆ ಆಗುತ್ತಾರೆ ನೋಡಬೇಕು. ಇದರ ಹೊರತಾಗಿ ಎರಡೂ ತಂಡಗಳು ಶಕ್ತಿಯುತ ಬ್ಯಾಟಿಂಗ್ ಲೈನ್-ಅಪ್ಗಳನ್ನು ಹೊಂದಿವೆ. ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ , ಶಿವಂ ದುಬೆ, ಎಂಎಸ್ ಧೋನಿ, ರವೀಂದ್ರ ಜಡೇಜಾ ಮತ್ತು ಅಜಿಂಕ್ಯ ರಹಾನೆ ಅವರಂತಹವರು ಸಿಎಸ್ಕೆಯ ಬ್ಯಾಟಿಂಗ್ ಬಲವಾಗಿದ್ದಾರೆ. ಆರ್‌ಸಿಬಿ ವಿರಾಟ್ ಕೊಹ್ಲಿ, ನಾಯಕ ಫಾಫ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಕಳೆದ ಋತುವಿನಲ್ಲಿ ನೆಚ್ಚಿಕೊಂಡಿತ್ತು. ಆದರೆ, ಈ ಬಾರಿ ರಜತ್ ಪಾಟಿದಾರ್ ಮತ್ತು ಕ್ಯಾಮರೂನ್ ಗ್ರೀನ್ ಸೇರ್ಪಡೆಗೊಂಡ ಕಾರಣ ಆರಂಭಿಕರ ಒತ್ತಡ ಕೊಂಚ ಕಡಿಮೆ ಆಗಲಿದೆ.
ಕಳೆದ ಸೀಸನ್ ನಲ್ಲಿ ಪತಿರಾನ ಡೆತ್ ಬೌಲಿಂಗ್ ಸಿಎಸ್ಕೆಯ ಯಶಸ್ಸಿನ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು. ಆದರೆ, ಈ ಬಾರಿ ಅವರು ಮಂಡಿರಜ್ಜು ಗಾಯದಿಂದಾಗಿ ಆರಂಭಿಕ ಕೆಲವು ಪಂದ್ಯಗಳನ್ನು ಕಳೆದುಕೊಂಡಿದ್ದಾರೆ. ಇನ್ನು ಎಲ್ಲರ ಕಣ್ಣು ಚೊಚ್ಚಲ ಐಪಿಎಲ್ ಆಡಲು ಸಿದ್ದರಾಗಿರುವ ರಚಿನ್ ರವೀಂದ್ರ ಮೇಲಿದೆ. ಕಿವೀ ಅಗ್ರ ಕ್ರಮಾಂಕದ ಬ್ಯಾಟರ್ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ 64.22 ರ ಸರಾಸರಿಯಲ್ಲಿ 578 ರನ್ ಗಳಿಸಿದ ಸಾಧನೆ ಮಾಡಿದ್ದರು.
ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ಐಪಿಎಲ್ 2024 ಕ್ಕೆ ಇಂದು ಚಾಲನೆ ಸಿಗಲಿದೆ. ಸಂಜೆ 6:30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆದರೆ, ರಾತ್ರಿ 8 ಗಂಟೆಗೆ ಸಿಎಸ್ಕೆ ಹಾಗೂ ಆರ್ಸಿಬಿ ನಡುವೆ ಚೆಪಾಕ್ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ಆಯೋಜಿಸಲಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ, ರುತುರಾಜ್ ಗಾಯಕ್‌ವಾಡ್ (ನಾಯಕ), ಮೊಯಿನ್ ಅಲಿ, ರಚಿನ್ ರವೀಂದ್ರ, ದೀಪಕ್ ಚಹಾರ್, ತುಷಾರ್ ದೇಶಪಾಂಡೆ, ಶಿವಂ ದುಬೆ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಅಜಯ್ ಮಂಡಲ್, ರಾಜವರ್ಧನ್ ಹಂಗೇಕರ್, ಮುಖೇಶ್ ಚೌಧರಿ, ಶೇಖ್ ರಶೀದ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ಶಾರ್ದೂಲ್ ಠಾಕೂರ್, ಸಮೀರ್ ರಿಜ್ವಿ, ಡೇರಿಲ್ ಮಿಚೆಲ್, ಅವನೀಶ್ ರಾವ್ ಅರಾವಳಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೋರ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ವೆಸ್, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವಿಜಯ್‌ಕುಮಾರ್ ವೈಶಾಕ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಆಕಾಶ್ ದೀಪ್, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೂನ್ ಗ್ರೀನ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾಣ್, ಲಾಕಿ ಫರ್ಗುಸನ್
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube